ಸೋಮವಾರಪೇಟೆ, ನ. 12: ಇಲ್ಲಿನ ಜೇಸಿ ಸಂಸ್ಥೆ ವತಿಯಿಂದ ಜೇಸಿ ಸಪ್ತಾಹ-2017 ಅಂಗವಾಗಿ ತಾ. 15 ರಿಂದ 20 ರವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಂಜಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜೇಸಿ ಅಧ್ಯಕ್ಷ ಬಿ.ಎಸ್. ಮನೋಹರ್ ಹೇಳಿದರು.

ತಾ. 15 ರಂದು ಸಂಜೆ 6.30ಕ್ಕೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. 7-30ಕ್ಕೆ 1ರಿಂದ 4ನೇ ತರಗತಿವರೆಗೆ ಛದ್ಮವೇಷ ಸ್ಪರ್ಧೆ, ತಾ. 16 ರಂದು 4 ರಿಂದ 10ನೇ ತರಗತಿವರಗೆ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, 10.30ಕ್ಕೆ ಸ್ಥಳದಲ್ಲಿ ಚಿತ್ರ ಬಿಡಿಸುವ ಸ್ಪರ್ಧೆ, 12 ಗಂಟೆಗೆ ಬರವಣಿಗೆ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಜೇಸಿ ಮನೋಹರ್ ಮತ್ತು ತಂಡದವರಿಂದ ಸಂಗಿತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಾ. 17 ರಂದು ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9.30ಕ್ಕೆ ಚದುರಂಗ ಸ್ಪರ್ಧೆ ನಡೆಯಲಿದೆ. ಸಂಜೆ 6 ಗಂಟೆಗೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮೂಹ ನೃತ್ಯ ಸ್ಪರ್ಧೆ ನಡೆಯಲಿದೆ.

ತಾ. 18 ರಂದು ಜೇಸಿರೇಟ್ಸ್ ಕಾರ್ಯಕ್ರಮ ಆಯೋಜಿಸಿದೆ. 10 ಗಂಟೆಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ, 12 ಗಂಟೆಗೆ ಮಹಿಳೆಯರಿಗೆ ಬೆಂಕಿ ಇಲ್ಲದೆ ಅಡುಗೆ ಮಾಡುವ ಸ್ಪರ್ಧೆ ಹಾಗೂ ಜೇಸಿ ಅರುಣ್ ಕುಮಾರ್ ತಂಡದವರಿಂದ ಮಕ್ಕಳಿಗೆ ಪಿರಮಿಡ್ ಧ್ಯಾನ ತರಬೇತಿ ನಡೆಯಲಿದೆ. 6.30ಕ್ಕೆ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.

ತಾ. 19 ರಂದು 4 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹರಪಳ್ಳಿ ರವೀಂದ್ರ ಪ್ರಾಯೋಜಕತ್ವದಲ್ಲಿ ಮಕ್ಕಳ ಮ್ಯಾರಥಾನ್ ನಡೆಯಲಿದೆ. ಬೆಳಿಗ್ಗೆ 6 ಗಂಟೆಗೆ ಜೇಸಿ ವೇದಿಕೆಯಿಂದ ಪ್ರಾರಂಭವಾಗಲಿದೆ. 10.30ಕ್ಕೆ ಜೂನಿಯರ್ ಕಾಲೇಜು ಮೈದಾನದಲ್ಲಿ ವಿವಿಧ ವಿಭಾಗಗಳಲ್ಲಿ ನಿಧಾನವಾಗಿ ಸೈಕಲ್ ಹಾಗೂ ಬೈಕ್ ಚಾಲಿಸುವ ಸ್ಪರ್ಧೆ, ಸಂಜೆ 6ಗಂಟೆಗೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗ್ರೂಪ್ ಡ್ಯಾನ್ಸ್ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 7259966096, 9591316475 ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಎಂ.ಎ. ರುಬಿನಾ, ವಲಯಾಧ್ಯಕ್ಷ ಗಿರೀಶ್ ಇದ್ದರು.