ಮೂರ್ನಾಡು, ನ. 12 : ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ. ಮುನಿಯಪ್ಪ ಹೊದ್ದೂರು ಗ್ರಾಮದ ಪಾಲೇಮಾಡುವಿನಲ್ಲಿ ಸ್ಮಶಾನಕ್ಕಾಗಿ ಅಹೋರಾತ್ರಿ ಹೋರಾಟ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಹದಿನೈದು ದಿನಗಳಿಂದ ಪಾಲೇಮಾಡುವಿನಲ್ಲಿ ಪೈಸಾರಿ ನಿವಾಸಿಗಳು ಸುಮಾರು ಹತ್ತು ವರ್ಷಗಳಿಂದ ಬಳಸಿಕೊಂಡು ಬಂದಿರುವ ಸ್ಮಶಾನ ಜಾಗ ನಮಗೆ ನೀಡಬೇಕು ಎಂಬ ಬೇಡಿಕೆ ಮುಂದಿರಿಸಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶನಿವಾರ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಹಾಗೂ ಉಪ ವಿಭಾಗಾಧಿಕಾರಿ ನಂಜುಂಡೆಗೌಡ, ತಹಶೀಲ್ದಾರ್ ಕುಸುಮ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕರರೊಂದಿಗೆ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ಇಲ್ಲಿ ಏರಡು ಏಕರೆ ಜಾಗ ಸ್ಮಶಾನಕ್ಕೆ ನೀಡಲಾಗುವದಿಲ್ಲ. ಒಂದು ಎಕರೆ ಜಾಗವನ್ನು ಸ್ಮಶಾನಕ್ಕೆ ನೀಡುತ್ತೇವೆ ಎಂದು ಪ್ರತಿಭಟನಾಕಾರರೊಂದಿಗೆ ತಿಳಿಸಿದರು. ಇದಕ್ಕೆ ನಿರಾಕರಿಸಿದ ಪ್ರತಿಭಟನಾಕಾರರು ನಾವು ಈ ಮೊದಲು ಬಳಸುತ್ತಿದ್ದ ಎರಡು ಎಕರೆ ಸ್ಥಳವನ್ನು ದುರಸ್ಥಿಗೊಳಿಸಿ, ನಮಗೆ ನೀಡಬೇಕು ಇಲ್ಲವಾದಲ್ಲಿ ಸ್ಮಶಾನ ಬಿಟ್ಟು ಕದಲುವದಿಲ್ಲ ಎಂದು ಎಚ್ಚರಿಸಿದರು. ರಾಜ್ಯ ಸಂಪುಟ ತಿರ್ಮಾನದಂತೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಮಂಜೂರಾಗಿರುವದರಿಂದ ಜಿಲ್ಲಾಡಳಿತ ಇಲ್ಲಿ ಸ್ಮಶಾನ ಜಾಗ ನೀಡಲು ಸಾಧ್ಯವಿಲ್ಲ. ನಿಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದರು.

ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ. ಮುನಿಯಪ್ಪ ಅವರು ಸ್ಮಶಾನ ಜಾಗ, ಶವಸಂಸ್ಕಾರ ನಡೆಸಿದ ಸ್ಥಳ, ಅಂಗನವಾಡಿ ಕೇಂದ್ರ, ನಿವಾಸಿಗಳು ವಾಸವಿರುವ ಗುಡಿಸಲುಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ

ತಿಳಿಸಿದರು. ಇದಕ್ಕೆ ನಿರಾಕರಿಸಿದ ಪ್ರತಿಭಟನಾಕಾರರು ನಾವು ಈ ಮೊದಲು ಬಳಸುತ್ತಿದ್ದ ಎರಡು ಎಕರೆ ಸ್ಥಳವನ್ನು ದುರಸ್ಥಿಗೊಳಿಸಿ, ನಮಗೆ ನೀಡಬೇಕು ಇಲ್ಲವಾದಲ್ಲಿ ಸ್ಮಶಾನ ಬಿಟ್ಟು ಕದಲುವದಿಲ್ಲ ಎಂದು ಎಚ್ಚರಿಸಿದರು. ರಾಜ್ಯ ಸಂಪುಟ ತಿರ್ಮಾನದಂತೆ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಮಂಜೂರಾಗಿರುವದರಿಂದ ಜಿಲ್ಲಾಡಳಿತ ಇಲ್ಲಿ ಸ್ಮಶಾನ ಜಾಗ ನೀಡಲು ಸಾಧ್ಯವಿಲ್ಲ. ನಿಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದರು.

ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಎ. ಮುನಿಯಪ್ಪ ಅವರು ಸ್ಮಶಾನ ಜಾಗ, ಶವಸಂಸ್ಕಾರ ನಡೆಸಿದ ಸ್ಥಳ, ಅಂಗನವಾಡಿ ಕೇಂದ್ರ, ನಿವಾಸಿಗಳು ವಾಸವಿರುವ ಗುಡಿಸಲುಗಳನ್ನು ಪರಿಶೀಲನೆ ನಡೆಸಿದರು.