ಗೋಣಿಕೊಪ್ಪ ವರದಿ, ನ. 13: ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಇಂದಿನಿಂದ (ನವಂಬರ್ 14) ಮೂರು ದಿನ ಪ್ರೌಢಶಾಲಾ ಮಟ್ಟದ ಆಹ್ವಾನಿತ ಹಾಕಿ ಮಾಸ್ಟರ್ಸ್ ಕಪ್ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ.
2ನೇ ವರ್ಷದ ಮಾಸ್ಟ್ರ್ಸ್ ಕಪ್ನಲ್ಲಿ 9 ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ. ಅಮ್ಮತ್ತಿ ಪ್ರೌಢಶಾಲೆ, ಅರಮೇರಿ ಎಸ್ಎಂಎಸ್, ಕಾಲ್ಸ್, ಕೂರ್ಗ್ ಪಬ್ಲಿಕ್ ಸ್ಕೂಲ್, ಗೋಣಿಕೊಪ್ಪ ಪ್ರೌಢಶಾಲೆ, ಗೋಣಿಕೊಪ್ಪ ಲಯನ್ಸ್ ಶಾಲೆ, ಮೂರ್ನಾಡು ಪ್ರೌಢಶಾಲೆ, ಹಾತೂರು ಪ್ರೌಢಶಾಲೆ ಹಾಗೂ ಮಡಿಕೇರಿ ಭಾರತೀಯ ವಿದ್ಯಾಭವನ ತಂಡಗಳು ಸ್ಪರ್ಧೆ ನಡೆಸಲಿವೆ. ತಾ. 14 ರಂದು (ಇಂದು) 4 ಪಂದ್ಯಗಳು ನಡೆಯಲಿವೆ. 16 ರಂದು ನಡೆಯುವ ಫೈನಲ್ ಪಂದ್ಯಕ್ಕೆ ಮುಖ್ಯ ಅತಿಥಿಗಳಾಗಿ ಭಾರತ ಹಾಕಿ ಮಾಜಿ ಆಟಗಾರ ಬಿ. ಪಿ. ಗೋವಿಂದ ಪಾಲ್ಗೊಳ್ಳಲಿದ್ದಾರೆ.