ಗೋಣಿಕೊಪ್ಪ, ನ.13: ಹರಿಶ್ಚಂದ್ರಪುರ ಮನೆಯಪಂಡ ಯಾರ್ಡ್‍ನಲ್ಲಿ ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ವತಿಯಿಂದ ನಡೆದ ರಾಷ್ಟ್ರಮಟ್ಟದ ನಾಲ್ಕುಚಕ್ರದ ಆಟೋ ಕ್ರಾಸ್‍ನಲ್ಲಿ ಸಣ್ಣುವಂಡ ಮಿಚ್ಚು ಗಣಪತಿ ಚಾಂಪಿಯನ್‍ಗಿರಿ ಗಿಟ್ಟಿಸಿಕೊಂಡರು.

ಕೊಂಗೇಟೀರ ಬೋಪಯ್ಯ ಫಾಸ್ಟೆಸ್ಟ್ ಡ್ರೈವರ್, ಜಾನ್ಸನ್ ಬೆಸ್ಟ್ ಟ್ಯೂನರ್ ಸ್ಥಾನ ಪಡೆದರು. ಮಿಚ್ಚು ಗಣಪತಿ ಕೂಗ್ ಓಪನ್, 1400 ಸಿಸಿ, 1600 ಸಿಸಿ, ಇಂಡಿಯನ್ ಓಪನ್, ಅನ್‍ರಿಸ್ಟೆಕ್ಡ್ ಓಪನ್ ಕ್ಲಾಸ್‍ನಲ್ಲಿ ಬಹುಮಾನ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿಗೆ ಭಾಜನರಾದರು.

800 ಸಿಸಿ ವಿಭಾಗದಲ್ಲಿ ಮೂಡಿಗೆರೆಯ ಶ್ರೀಹರಿ (ಪ್ರ), ಎ. ವಿವೇಕ್, ಜಮ್ಮಡ ನಿಖಿಲ್ ಚೆಂಗಪ್ಪ, 1100 ಸಿಸಿ ವಿಭಾಗದಲ್ಲಿ ಎ. ವಿವೇಕ್ (ಪ್ರ), ಮೂಡಗೆರೆ ಶ್ರೀಹರಿ, ಎಂ. ಎಂ. ಧೀರಜ್, 1400 ಸಿಸಿ ಕ್ಲಾಸ್ ವಿಭಾಗದಲ್ಲಿ ಸಣ್ಣುವಂಡ ಮಿಚ್ಚು ಗಣಪತಿ (ಪ್ರ), ಡೆನ್ ತಿಮ್ಮಯ್ಯ (ದ್ವಿ), ಎನ್. ಹೇಮಂತ್ (ತೃ), 1600 ಸಿಸಿ ಕ್ಲಾಸ್‍ನಲ್ಲಿ ಸಣ್ಣುವಂಡ ಮಿಚ್ಚು ಗಣಪತಿ (ಪ್ರ), ಕೊಕ್ಕೇಂಗಡ ದರ್ಶನ್ (ದ್ವಿ), ಡೆನ್ ತಿಮ್ಮಯ್ಯ (ತೃ), ಕೂರ್ಗ್ ಓಪನ್‍ನಲ್ಲಿ ಕೊಂಗೇಟೀರ ಬೋಪಯ್ಯ (ಪ್ರ), ಡೆನ್ ತಿಮ್ಮಯ್ಯ (ದ್ವಿ), ಸಣ್ಣುವಂಡ ಮಿಚ್ಚು ಗಣಪತಿ (ತೃ), ಇಂಡಿಯನ್ ಒಪನ್ ಕ್ಲಾಸ್‍ನಲ್ಲಿ ಕೊಕ್ಕೇಂಗಡ ದರ್ಶನ್ (ಪ್ರ), ಸಣ್ಣುವಂಡ ಮಿಚ್ಚು ಗಣಪತಿ (ದ್ವಿ), ಡೆನ್ ತಿಮ್ಮಯ್ಯ (ತೃ), ಜಿಪ್ಸಿ ಒಪನ್ ಕ್ಲಾಸ್‍ನಲ್ಲಿ ಅವಿನ್ ನಂಜಪ್ಪ (ಪ್ರ), ಗಗನ್ ಕರುಂಬಯ್ಯ (ದ್ವಿ), ಅಮೃತ್ ತಿಮ್ಮಯ್ಯ, ಅನ್‍ರಿಸ್ಟೀಟೆಡ್ ಒಪನ್ ಕ್ಲಾಸ್‍ನಲ್ಲಿ ಸಣ್ಣುವಂಡ ಮಿಚ್ಚು ಗಣಪತಿ (ಪ್ರ), ಕೊಕ್ಕೇಂಗಡ ದರ್ಶನ್ (ದ್ವಿ), ಡೆನ್ ತಿಮ್ಮಯ್ಯ (ತೃ), ಎಸ್‍ಯುವಿ ಕ್ಲಾಸ್‍ನಲ್ಲಿ ಚೇತನ್ ಚೆಂಗಪ್ಪ (ಪ್ರ), ಐ. ಬಿ. ನಾಣಯ್ಯ (ದ್ವಿ), ಜಗತ್ ಸೋಮನಾಥ್ (ತೃ), ರೋಲ್‍ಕೇಜ್ ಕ್ಲಾಸ್‍ನಲ್ಲಿ ಕೊಕ್ಕೇಂಗಡ ದರ್ಶನ್ (ಪ್ರ), ಡೆನ್ ತಿಮ್ಮಯ್ಯ (ದ್ವಿ), ರೋಹಿತ್ ಅಯ್ಯರ್ (ತೃ), ಡೀಸಲ್ ಕ್ಲಾಸ್‍ನಲ್ಲಿ ಎ. ಸೋಮಣ್ಣ (ಪ್ರ), ಜಗತ್ ಸೋಮನಾಥನ್ (ದ್ವಿ), ಐ. ಬಿ. ನಾಣಯ್ಯ (ತೃ), ಲೇಡೀಸ್ ಕ್ಲಾಸ್‍ನಲ್ಲಿ ನಿಮ್ಮಿ ಮಂದಣ್ಣ (ಪ್ರ), ಸ್ವಾತಿ ಅರಸ್ (ದ್ವಿ), ಕವಿನ್ ಗಣಪತಿ (ತೃ), ನೋವಿಸ್ ಒಪನ್ ಕ್ಲಾಸ್‍ನಲ್ಲಿ ಚೇಂಬಂಡ ಸೋಮಣ್ಣ (ಪ್ರ), ಅಕ್ಷಯ್ ಕಾರ್ಯಪ್ಪ (ದ್ವಿ), ನಿಶಾಂತ್ ಚೆಂಗಪ್ಪ (ತೃ), ಜೀಪ್ ಕ್ಲಾಸ್‍ನಲ್ಲಿ ಐ. ಬಿ. ನಾಣಯ್ಯ (ಪ್ರ), ಚೇತನ್ ಚೆಂಗಪ್ಪ (ದ್ವಿ), ಸೂರಜ್ ಮಂದಣ್ಣ (ತೃ), ಸ್ಥಾನ ಪಡೆದುಕೊಂಡರು.