ಸೋಮವಾರಪೇಟೆ, ನ. 13: ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಶುಂಠಿ ಮಂಗಳೂರು ಗ್ರಾಮದ ಬಸವೇಶ್ವರ ಯುವಕ ಸಂಘ, ಪೂಜಾ ಯುವತಿ ಮಂಡಳಿ ಇವುಗಳ ಆಶ್ರಯದಲ್ಲಿ ತಾ. 14 ರಂದು (ಇಂದು) 9.30ಕ್ಕೆ ಶುಂಠಿ ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ.
ಕ್ರೀಡಾಕೂಟದ ಉದ್ಘಾಟನೆ ಯನ್ನು ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮಹೇಶ್ ನೆರವೇರಿಸಲಿದ್ದು, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎಂ.ಪಿ. ಲಿಂಗರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆಯಾಗಲಿದೆ.
ಅಂಗನವಾಡಿ, ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ, ಪುರುಷರಿಗೆ ಗುಡ್ಡಗಾಡು ಓಟ, 100 ಮೀಟರ್ ಓಟ, ಮೂರುಕಾಲು ಓಟ, ನಿಧಾನ ಬೈಕ್ ಚಾಲನೆ, ವಾಲಿಬಾಲ್, ಹಗ್ಗಜಗ್ಗಾಟ, ನಿಧಾನ ನಡಿಗೆ, ಮಹಿಳೆಯರಿಗೆ ವಿಷದ ಚೆಂಡು, ಥ್ರೋಬಾಲ್, ಬಸ್ ಹುಡುಕಾಟ, ಹಗ್ಗಜಗ್ಗಾಟ, ರಂಗೋಲಿ ಸೇರಿದಂತೆ ಇತರ ಸ್ಪರ್ಧೆಗಳು ನಡೆಯಲಿವೆ.