ಮಡಿಕೇರಿ, ನ. 13 : ಚೈಲ್ಡ್ ಲೈನ್ ಸಂಘÀಟನೆಯ ಕೊಡಗು ಘಟಕದ ವತಿಯಿಂದ ಮಕ್ಕಳ ಹಕ್ಕುಗಳು ಮತ್ತು ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಚೈಲ್ಡ್ ಲೈನ್ ಸೇ ದೋಸ್ತಿ ಕಾರ್ಯಕ್ರಮ ಜಿಲ್ಲೆಯ ವಿವಿಧೆಡೆ ತಾ.14 ರಿಂದ ತಾ.21 ರವರೆಗೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೈಲ್ಡ್ ಲೈನ್ ಘÀಟಕದ ಪ್ರಮುಖರಾದ ಡಾ| ನವೀನ್, ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ತಾ.14 ರಂದು ಕಡಗದಾಳು ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹಕ್ಕೆ ಚಾಲನೆ ನೀಡಲಾಗುವದು. 2018ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ, ಅಭಿಯಾನ, ರಕ್ಷಾ ಬಂಧನ ಕಾರ್ಯಕ್ರಮ ಹಾಗೂ ಮಕ್ಕಳಿಂದ ಸ್ನೇಹ ಪ್ರಮಾಣ ವಚನ ನಡೆಯಲಿದೆ ಎಂದರು.
ತಾ.15 ರಂದು ಸಿದ್ದಾಪÀÅರದ ಸರ್ಕಾರಿ ಪದವಿ ಪÀÇರ್ವ ಕಾಲೇಜು, ಕೂಡುಮಂಗಳೂರು ಸರ್ಕಾರಿ ಪ್ರೌಢ ಶಾಲೆ ಮತ್ತು ಮೂರ್ನಾಡು ಪ್ರೌಢ ಶಾಲೆಯಲ್ಲಿ ಸಾಮಾಜಿಕ ಜಾಲ ತಾಣಗಳ ಸುರಕ್ಷತೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮದ ಕುರಿತು ಚರ್ಚೆ ನಡೆಯಲಿದೆ. ತಾ.16 ರಂದು ಇದೇ ವಿಚಾರವಾಗಿ ಶಿರಂಗಾಲ ಪ್ರೌಢ ಶಾಲೆಯಲ್ಲಿ ಕಾರ್ಯಕ್ರಮ ಜರುಗಲಿದೆ. ತಾ.17 ರಂದು ಭಿಕ್ಷಾಟನೆ ಮತ್ತು ಬಾಲ ಕಾರ್ಮಿಕ ಪದ್ಧತಿ ಕುರಿತು ಅರಿವು ಕಾರ್ಯಕ್ರಮ ಗೋಣಿಕೊಪ್ಪ ಹಾಗೂ ಸುಂಟಿಕೊಪ್ಪದಲ್ಲಿ ನಡೆಯಲಿದೆ.
ತಾ.18 ರಂದು ಆಲೂರು ಸಿದ್ದಾಪÀÅರದಲ್ಲಿ ಮಕ್ಕಳ ಸ್ನೇಹಿ ಶಾಲೆ ಹಾಗೂ ಬಾಲ್ಯವಿವಾಹ ಮುಕ್ತ ಗ್ರಾಮ ವಿಚಾರದ ಕುರಿತು ವಿಷಯ ಮಂಡನೆಯಾಗಲಿದೆ. ತಾ.19 ರಂದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಶ್ವೇತ ವರ್ಣದ ಆಂದೋಲನ ಕಾರ್ಯಕ್ರಮ ಮಡಿಕೇರಿ ರಾಜಾಸೀಟಿನಲ್ಲಿ ನಡೆಯಲಿದೆ. ತಾ.21 ರಂದು ಮಕ್ಕಳ ಹಕ್ಕುಗಳ ಕುರಿತು ಪ್ರಬಂಧ ಸ್ಪರ್ಧೆ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ನಡೆಯಲಿದೆ ಎಂದು ಡಾ| ನವೀನ್ ಮಾಹಿತಿ ನೀಡಿದರು.
ಚೈಲ್ಡ್ ಲೈನ್ 1098 ವಿಭಾಗಕ್ಕೆ ಕಳೆದ 5 ವರ್ಷಗಳಲ್ಲಿ ಬಂದ ಸುಮಾರು 789 ಮಕ್ಕಳ ದೌರ್ಜನ್ಯ ಪ್ರಕರಣಗಳನ್ನು ಸರ್ಕಾರದ ಸಹಕಾರದೊಂದಿಗೆ ಬಗೆಹರಿಸುವ ಪ್ರಯತ್ನ ಮಾಡಲಾಗಿದೆ. ಕಳೆದ ಸಾಲಿನ ಏಪ್ರಿಲ್ ನಿಂದ ಪ್ರಸಕ್ತ 2017ರ ಅಕ್ಟೋಬರ್ವರೆÀಗೆ ಒಟ್ಟು 109 ವಿವಿಧ ಪ್ರಕರಣಗಳು ದಾಖಲಾಗಿರುವದಾಗಿ ತಿಳಿಸಿದರು. ಪೆÀÇೀಷಕರ ನಿರ್ಲಕ್ಷ್ಯ, ಭಿಕ್ಷಾಟನೆ, ಬಾಲ ಕಾರ್ಮಿಕ ಪದ್ಧತಿ ಇವುಗಳಿಂದ ಮಕ್ಕಳನ್ನು ಮುಕ್ತಗೊಳಿಸಿ ಮರಳಿ ಶಾಲೆಗೆ ಸೇರಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಕ್ಕಳನ್ನು ಬಾಲಮಂದಿರಕ್ಕೆ ಸೇರಿಸಿರುವದಲ್ಲದೆ, ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಬಾಲ್ಯ ವಿವಾಹ ಪ್ರಕರಣವನ್ನು ಸಂಪÀÇರ್ಣವಾಗಿ ತಡೆಯಲಾಗಿದೆ ಎಂದು ಡಾ| ನವೀನ್ ಹೇಳಿದರು.
ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮಕ್ಕಳ ಸಹಾಯವಾಣಿ ಚೈಲ್ಡ್ ಲೈನ್ ನಿರ್ದೇಶಕರಾದ ರಾಯ್ ಡೇವಿಡ್ ಮಾತನಾಡಿ, ಸಮಾಜದಲ್ಲಿರುವ ಮಕ್ಕಳಿಗೆ ಪೆÀÇೀಷಣೆ ಮತ್ತು ರಕ್ಷಣೆÉಯನ್ನು ನೀಡಲು ಚೈಲ್ಡ್ ಲೈನ್ ಸಂಸ್ಥೆ ದಿನದ ಇಪ್ಪತ್ತನಾಲ್ಕು ಗಂಟೆ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ, ರಾಜ್ಯ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ದೌರ್ಜನ್ಯದಿಂದ ಬಿಡುಗಡೆ ಹೊಂದಲು ರಕ್ಷಣೆÉಯನ್ನು ಕೋರಿ ಈ ದೂರವಾಣಿ ಸಂಖ್ಯೆಗೆ ಕರೆÉ ಮಾಡಬಹುದಾಗಿದೆಯೆಂದು ಇದೇ ಸಂದರ್ಭ ರಾಯ್ ಡೇವಿಡ್ ತಿಳಿಸಿದರು. ಉಚಿತ ದೂರವಾಣಿ ಸಂಖ್ಯೆ ‘1098’
ಸುದ್ದಿಗೋಷ್ಠಿಯಲ್ಲಿ ಚೈಲ್ಡ್ ಲೈನ್ ಮಕ್ಕಳ ಸಹಾಯವಾಣಿಯ ಆಪ್ತ ಸಮಾಲೋಚಕಿ ಗೌರಿ, ಕಾರ್ಯಕರ್ತರಾದ ಕುಸುಮಾವತಿ, ಪ್ರವೀಣ್ ಕುಮಾರ್ ಹಾಗೂ ನವೀನ್ ಕುಮಾರ್ ಉಪಸ್ಥಿತರಿದ್ದರು.