ಒಡೆಯನಪುರ, ನ. 12: ಶನಿವಾರಸಂತೆ ಹೋಬಳಿ ಜಾನಪದ ಪರಿಷತ್ ಘಟಕ ಮತ್ತು ಶನಿವಾರಸಂತೆ ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಕನ್ನಡ ನಾಡುನುಡಿ ಕುರಿತಾದ ತಾಲೂಕು ಮಟ್ಟದ ರಸಪ್ರಶ್ನೆ ಕಾರ್ಯಕ್ರಮವನ್ನು ಸ್ಥಳೀಯ ಸುಪ್ರಜ ಗುರುಕುಲ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಮಕ್ಕಳು ಭಾಗವಹಿಸಿದ್ದರು.

ಸ್ಪರ್ಧಾ ವಿಜೇತ ತಂಡಗಳು

ಪ್ರೌಢಶಾಲಾ ವಿಭಾಗ: ಸೋಮವಾರಪೇಟೆ ಸಂತ ಜೋಸೆಫ್ ಪ್ರೌಢಶಾಲೆ ತಂಡ (ಪ್ರಥಮ) ಭಾಗವಹಿಸಿದ ವಿದ್ಯಾರ್ಥಿಗಳು- ಡಿ.ಎಸ್. ಆಕಾಶ್, ಜಿ. ದಿಶಾಂಕ್, ಕೆ.ಜಿ. ಕಶೀಶ್. ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲೆಯ ತಂಡ (ದ್ವಿತೀಯ) ಭಾಗವಹಿಸಿದ ವಿದ್ಯಾರ್ಥಿನಿಯರು-ಎಸ್.ವಿ. ಸೌಮ್ಯ, ಎಸ್.ವಿ. ನಿಶ್ಚಿತ, ಎನ್.ಕೆ. ಸುಶ್ಮಿತ. ಸ್ಥಳೀಯ ಬಾಪೂಜಿ ಪ್ರೌಢಶಾಲೆಯ ತಂಡ (ತೃತೀಯ) ಭಾಗವಹಿಸಿದ ವಿದ್ಯಾರ್ಥಿಗಳು ಎ.ಬಿ. ಅಫ್ರಿದ್, ಜಿ.ಎಸ್. ಪ್ರಖ್ಯಾತ್, ಸಿ.ಡಿ. ಕಿಶೋರ್.

ಪ್ರಾಥಮಿಕ ಶಾಲಾ ವಿಭಾಗ: ಹಾರೆಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ (ಪ್ರಥಮ) ಭಾಗವಹಿಸಿದ ವಿದ್ಯಾರ್ಥಿಗಳು- ಎಸ್.ಪಿ. ಅಕ್ಷತ, ಸಿ.ಪಿ. ಅಕ್ಷಿತ, ಎಸ್.ಕೆ. ವಿಕಾಸ್. ಶನಿವಾರಸಂತೆ ತ್ಯಾಗರಾಜ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ತಂಡ (ದ್ವಿತೀಯ) ಭಾಗವಹಿಸಿದ ವಿದ್ಯಾರ್ಥಿಗಳು- ಎಸ್.ವಿ. ಉದಯ್, ಎಸ್.ಎ. ನಿಶಾ, ಹೆಚ್.ಎಸ್. ರಾಜೇಶ್ವರಿ.

ಶನಿವಾರಸಂತೆ ಸುಪ್ರಜ ಗುರುಕುಲ ಪ್ರಾಥಮಿಕ ಶಾಲಾ ತಂಡ (ತೃತೀಯ) ಭಾಗವಹಿಸಿದ ವಿದ್ಯಾರ್ಥಿಗಳು- ಪ್ರೀತಮ್ ಗೌಡ, ಅನೀóಷ್, ಇಂಚರ.

ರಸಪ್ರಸ್ನೆ ಕಾರ್ಯಕ್ರಮವನ್ನು ಸುಪ್ರಜಗುರುಕುಲ ವಿದ್ಯಾಸಂಸ್ಥೆ ಟ್ರಸ್ಟಿ ಡಿ. ಸುಜಲಾದೇವಿ, ಶಿಕ್ಷಕ ದಿವಾಕರ್ ನಡೆಸಿಕೊಟ್ಟರು. ವಿಜೇತರಿಗೆ ಬಹುಮಾನ ವನ್ನು ತಾ. 14 ರಂದು ಸುಪ್ರಜ ಗುರುಕುಲ ಶಾಲೆಯಲ್ಲಿ ನಡೆಯಲಿರುವ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಗುವದು.