ಮೂರ್ನಾಡು, ನ.13 : ಮಂದಪ್ಪ ರೂರಲ್ ಫ್ರೆಂಡ್ಸ್ (ಎಂಆರ್‍ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಬಾಚೆಟ್ಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯ ಮೂರ್ನಾಡು, ನ.13 : ಮಂದಪ್ಪ ರೂರಲ್ ಫ್ರೆಂಡ್ಸ್ (ಎಂಆರ್‍ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಬಾಚೆಟ್ಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯ ನಡೆಯಲಿದೆಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ ಸೋಮವಾರ ನಡೆದ ಸೆಮಿಪೈನಲ್ ಮೊದಲ ಪಂದ್ಯಾವಳಿಯಲ್ಲಿ ಸ್ಪೋಟ್ಸ್ ಹಾಸ್ಟೆಲ್ ಪೊನ್ನಂಪೇಟೆ ಹಾಗೂ ಹಾತೂರು ಯೂತ್ ಕ್ಲಬ್ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ಹಾತೂರು ಯೂತ್ ಕ್ಲಬ್ ಗೆಲುವು ಸಾಧಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು. ಹಾತೂರು ಯೂತ್ ಕ್ಲಬ್ ತಂಡದ ಕಾರ್ಯಪ್ಪ 3ನಿಮಿಷದಲ್ಲಿ 1ಗೋಲು, ಕುಶಗೌಡ24, 57ನಿಮಿಷದಲ್ಲಿ 2 ಗೋಲು ಹಾಗೂ ಗಣಪತಿ 50ನಿಮಿಷದಲ್ಲಿ 1ಗೋಲು ಹೊಡೆದರು. ಸ್ಪೋಟ್ಸ್ ಹಾಸ್ಟೆಲ್ ಪೊನ್ನಂಪೇಟೆ ತಂಡದ ಆಟಗಾರ ಗಯನ್ ಗಣಪತಿ 49ನಿಮಿಷದಲ್ಲಿ 1ಗೋಲು ಬಾರಿಸಿದರು.

ಬಿಬಿಸಿ ಗೋಣಿಕೊಪ್ಪಲು ಹಾಗೂ ಡಾಲ್ಪಿನ್ಸ್ ಸೋಮವಾರಪೇಟೆ ತಂಡ ನಡುವೆ ನಡೆದ ಪಂದ್ಯದಲ್ಲಿ 1-0 ಗೋಲಿನಿಂದ ಬಿಬಿಸಿ ಗೋಣಿಕೊಪ್ಪಲು ತಂಡ ಪೈನಲ್‍ಗೆ ಹೆಜ್ಜೆ ಹಾಕಿತು. ಬಿಬಿಸಿ ಗೋಣಿಕೊಪ್ಪಲು ತಂಡದ ಪರವಾಗಿ ವಿಘ್ನೇಶ್ 12ನಿಮಿಷದಲ್ಲಿ 1 ಗೋಲು ಬಾರಿಸಿದರು. ಡಾಲ್ಪಿನ್ಸ್ ಸೋಮ ವಾರಪೇಟೆ

(ಮೊದಲ ಪುಟದಿಂದ) ತಂಡವು ಯಾವದೇ ಗೋಲುಗಳಿಸಲಾಗದೆ ಫೈನಲ್ ಪ್ರವೇಶಿಸದೆ ತೃಪ್ತಿ ಪಟ್ಟುಕೊಂಡಿತು.

ಸಮಾರೋಪ ಸಮಾರಂಭ : ಕಳೆದ ನಾಲ್ಕು ದಿನಗಳಿಂದ ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ ಮಂದಪ್ಪ ರೂರಲ್ ಫ್ರೆಂಡ್ಸ್ (ಎಂಆರ್‍ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ಆಯೋಜಿಸಿರುವ ಬಾಚೆಟ್ಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ ಸಮಾರೋಪ ಸಮಾರಂಭ ತಾ. 14 ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಕಾಫಿ ಬೆಳೆಗಾರರಾದ ಬಾಚೆಟ್ಟಿರ ಲಾಲು ಮುದ್ದಯ್ಯ, ಮೇ ಬಡುವಂಡ ಯು. ಅಚ್ಚಪ್ಪ, ಮೂರ್ನಾಡು ವಿದ್ಯಾಸಂಸ್ಥೆ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ, ಹೊದ್ದೂರು ಕಾಫಿ ಬೆಳೆಗಾರ ನೆರವಂಡ ಕೆ. ನಂಜಪ್ಪ, ಚೌರೀರ ಸುನಿ ಅಚ್ಚಯ್ಯ, ಹಾಕಿ ಕೂರ್ಗ್ ಅಧ್ಯಕ್ಷ ಪೈಕೇರ ಈ. ಕಾಳಯ್ಯ, ಹಾಲುಗುಂದ ಕಾಫಿ ಬೆಳೆಗಾರ ಮೆಕೇರಿರ ಯು. ಮಾಯ್ಯವ್ವ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಂದಪ್ಪ ರೂರಲ್ ಫ್ರೆಂಡ್ಸ್ (ಎಂಆರ್‍ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ಬಡುವಂಡ ಎ. ವಿಜಯ ವಹಿಸಲಿದ್ದಾರೆ.