ಮಡಿಕೇರಿ, ನ. 13: ಜಿಲ್ಲೆಯ ಹಿರಿಯ ಪತ್ರಕರ್ತ, ‘ಮೈಸೂರು ಮಿತ್ರ’ ದಿನ ಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಬಿ. ಮಹಂತೇಶ್ (49) ಅವರು ಸೋಮವಾರ ಬೆಳಿಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಹಂತೇಶ್ ಶಕ್ತಿ ದಿನಪತ್ರಿಕೆ, ಆಂದೋಲನ ಪತ್ರಿಕೆಯಲ್ಲೂ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಾಯಿ, ಪತ್ನಿ, ಮೂವರು ಪÀÅತ್ರಿಯರು, ಸಹೋದರ ಮತ್ತು ಸಹೋದರಿಯನ್ನು ಅಗಲಿದ್ದು, ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಬೆಳಗಾಂನ ಬೈಲಹೊಂಗಲದಲ್ಲಿ ತಾ. 14ರಂದು (ಇಂದು) ನಡೆಯಲಿದೆ.ಸಂತಾಪ : ಮೈಸೂರು ಮಿತ್ರ ವರದಿಗಾರ ಕೆ.ಬಿ. ಮಹಂತೇಶ್ ನಿಧನಕ್ಕೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ಸಂತಾಪ ಸಭೆ ನಡೆಯಿತು.

ಮೃತರ ಗೌರವಾರ್ಥ 2 ನಿಮಿಷ ಮೌನಾಚರಣೆ ಮಾಡಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷ ಜಿ.ವಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕುಡೆಕಲ್ಲು ಸಂತೋಷ್, ಖಜಾಂಚಿ ಸವಿತಾ ರೈ, ಕ್ಷೇಮಾಭಿವೃದ್ಧಿ ಸಮಿತಿ

(ಮೊದಲ ಪುಟದಿಂದ) ಅಧ್ಯಕ್ಷ ಸಣ್ಣುವಂಡ ಎಂ. ಚಂಗಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಬಿ. ಮಂಜುನಾಥ್, ಜಂಟಿ ಕಾರ್ಯದರ್ಶಿ ವಿಘ್ನೇಶ್ ಭೂತನಕಾಡು, ಹಿರಿಯ ಪತ್ರಕರ್ತರಾದ ಜಿ.ಚಿದ್ವಿಲಾಸ್, ಬಿ.ಜಿ. ಅನಂತಶಯನ, ಎಚ್.ಟಿ. ಅನಿಲ್, ಬಿ.ಸಿ. ದಿನೇಶ್, ಐತಿಚಂಡ ರಮೇಶ್ ಉತ್ತಪ್ಪ, ಸೈಯದ್ ಇರ್ಫಾನ್, ಟಿ.ಕೆ. ಸಂತೋಷ್, ಅಲ್ಲಾರಂಡ ವಿಠಲ್ ನಂಜಪ್ಪ, ಆನಂದ ಕೊಡಗು, ಯಶೋದಾ ಮಾತನಾಡಿದರು.

ಟ್ರಸ್ಟ್ ಗೌರವಾರ್ಪಣೆ

ಅಗಲಿದ ಚೇತನಕ್ಕೆ ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಟ್ರಸ್ಟಿಗಳು ಒಳಗೊಂಡಂತೆ ಪತ್ರಕರ್ತರು ಗೌರವವನ್ನು ಸಲ್ಲಿಸಿ ಕಂಬನಿ ಮಿಡಿದರು.

ಕಂಬನಿ -ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿಗಳೂ ಆಗಿದ್ದ ಕೆ.ಬಿ. ಮಹಂತೇಶ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ನಗರದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಕಛೇರಿಯಲ್ಲಿ ಮಹಂತೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಲಾಯಿತು.

ಟ್ರಸ್ಟ್‍ನ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಮಹಂತೇಶ್ ಅಗಲಿಕೆಗೆ ಕಂಬನಿ ಮಿಡಿದು ಮಾತನಾಡಿ, ಜಿಲ್ಲೆಯ ಪತ್ರಿಕಾ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಗೂ ಹೆಚ್ಚಿನ ಅವಧಿಯಿಂದ ಸೇವೆ ಸಲ್ಲಿಸುತ್ತ, ಎಲ್ಲರೊಂದಿಗೆ ಸ್ನೇಹಮಯಿಯಾಗಿದ್ದ ಮಹಂತೇಶ್ ಅವರ ನಿಧನ ಪತ್ರಿಕಾ ಬಳಗಕ್ಕೆ ಆಘಾತವನ್ನು ಉಂಟುಮಾಡಿದೆ ಎಂದರು.

ಪತ್ರಿಕಾ ಭವನ ಟ್ರಸ್ಟ್‍ನ ಟ್ರಸ್ಟಿ ಜಿ. ಚಿದ್ವಿಲಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಶಕ್ತಿ’ ಪತ್ರಿಕೆಯಲ್ಲಿ ಮಹಂತೇಶ್ ಅವರ ಸೇವೆಯನ್ನು ಸ್ಮರಿಸಿಕೊಂಡರಲ್ಲದೆ, ಅವರ ಆತ್ಮೀಯ ಮತ್ತು ಸೌಹಾರ್ದ ನಡವಳಿಕೆ, ಎಲ್ಲರೊಂದಿಗೆ ಸ್ನೇಹದಿಂದ ಬೆರೆಯುತ್ತಿದ್ದ ಕ್ಷಣಗಳನ್ನು ಸ್ಮರಿಸಿಕೊಂಡರು. ಕಿರಿಯ ವಯಸ್ಸಿನಲ್ಲೆ ಮಹಂತೇಶ್ ಅವರ ಅಗಲಿಕೆ ಅತ್ಯಂತ ನೋವನ್ನು ಪತ್ರಿಕಾ ಬಳಗಕ್ಕೆ ನೀಡಿದೆ. ಪತ್ರಕರ್ತರಾದವರು ಆರೋಗ್ಯವನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶವನ್ನು ಅವರ ಅಗಲಿಕೆ ನಮ್ಮಲ್ಲಿ ಮೂಡಿಸಿದೆಯೆಂದು ಭಾವುಕರಾಗಿ ನುಡಿದರು.

ಈ ಸಂದರ್ಭ ಪತ್ರಿಕಾಭವನ ಟ್ರಸ್ಟ್‍ನ ಟ್ರಸ್ಟಿಗಳಾದ ವಿ.ಪಿ. ಸುರೇಶ್, ಕೆ.ತಿಮ್ಮಪ್ಪ, ಶ್ರೀಧರ ಹೂವಲ್ಲಿ, ಎಸ್.ಜಿ. ಉಮೇಶ್, ಅನಿಲ್ ಎಚ್.ಟಿ., ಪತ್ರಕರ್ತರಾದ ಆನಂದ್ ಕೊಡಗು, ಎಸ್.ಕೆ. ಲಕ್ಷ್ಮೀಶ್, ಉದಿಯಂಡ ಜಯಂತಿ, ಜೀವನ್, ಶಿವು, ಹರಿಪ್ರಸಾದ್, ಕಾರ್ಡ್ ಸಂಸ್ಥೆಯ ರಾಯ್ ಡೇವಿಡ್, ಕಾರ್ಮಿಕ ಮುಖಂಡರಾದ ಪಿ.ಆರ್. ಭರತ್, ಪತ್ರಿಕಾ ಭವನದ ಸಿಬ್ಬಂದಿಗಳಾದ ಕೆ.ಪಿ.ಯಮುನಾ , ಬಿ.ಎಸ್.ಸವಿತಾ ಸೇರಿದಂತೆ ಹಲವರು ಪಾಲ್ಗೊಂಡು ಪುಷ್ಪನಮನ ಸಲ್ಲಿಸಿದರು.

ಕುಟುಂಬಕ್ಕೆ ಸಾಂತ್ವನ- ಇದಕ್ಕೂ ಮುನ್ನ ಪತ್ರಿಕಾ ಭವನ ಟ್ರಸ್ಟ್‍ನ ಪರವಾಗಿ ಟ್ರಸ್ಟಿಗಳಾದ ಜಿ. ಚಿದ್ವಿಲಾಸ್ ಮತ್ತು ಅನಿಲ್ ಎಚ್.ಟಿ. ಅವರುಗಳು ಮಹಂತೇಶ್ ಅವರ ಮಡಿಕೇರಿಯ ನಿವಾಸಕ್ಕೆ ತೆರಳಿ ಕುಟುಂಬವರ್ಗಕ್ಕೆ ಸಾಂತ್ವನ ನುಡಿದು, ಆರ್ಥಿಕ ನೆರವನ್ನು ಹಸ್ತಾಂತರಿಸಿದರು.

ಮೈಸೂರಿನಲ್ಲಿ ಟ್ರಸ್ಟಿ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಅವರು ಮಹಂತೇಶ್ ಅವರ ಅಂತಿಮ ದರ್ಶನ ಪಡೆದು ಟ್ರಸ್ಟ್ ಪರವಾಗಿ ಹೂ ಗುಚ್ಛವನ್ನು ಅರ್ಪಿಸಿ ಗೌರವ ಸಲ್ಲಿಸಿದರು.

ಗೋಣಿಕೊಪ್ಪ

ಗೋಣಿಕೊಪ್ಪ ವರದಿ : ಕೆ. ಬಿ. ಮಹಾಂತೇಶ್ ಅವರ ನಿಧನಕ್ಕೆ ಗೋಣಿಕೊಪ್ಪ ಪ್ರೆಸ್‍ಕ್ಲಬ್ ವತಿಯಿಂದ ಅವರ ಭಾವಚಿತ್ರಕ್ಕೆ ಹೂ ಸಮರ್ಪಿಸುವ ಮೂಲಕ ಸಂತಾಪ ಸೂಚಿಸಲಾಯಿತು.

ಸಂತಾಪ ಸಂದರ್ಭ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಪ್ರ. ಕಾರ್ಯದರ್ಶಿ ಹೆಚ್. ಕೆ. ಜಗದೀಶ್, ಖಜಾಂಜಿ ಅರುಣ್ ಕುಮಾರ್, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಾಚರಣಿಯಂಡ ಅನು ಕಾರ್ಯಪ್ಪ, ಸದಸ್ಯರುಗಳಾದ ಟಿ. ಎಲ್. ಶ್ರೀನಿವಾಸ್, ದರ್ಶನ್ ದೇವಯ್ಯ, ದಿವಾಕರ್, ರಾಕೇಶ್, ಲೋಹಿತ್ ಭೀಮಯ್ಯ ಹಾಗೂ ಮನು ಸಂತಾಪ ಸೂಚಿಸಿದರು.

ಮಡಿಕೇರಿ: ಪತ್ರಕರ್ತ ಕೆ.ಬಿ. ಮಹಂತೇಶ್ ನಿಧನಕ್ಕೆ ಪೂಜಾ ಆರ್ಕೆಡ್‍ನಲ್ಲಿ ಸಂತಾಪ ಸೂಚಕ ಸಭೆ ನಡೆಸಲಾಯಿತು.

ಮಹಂತೇಶ್ ಅವರ ಕಚೇರಿ ನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಪೂಜಾ ಆರ್ಕೆಡ್‍ನಲ್ಲಿದ್ದು, ಸೋಮವಾರ ಸಂಜೆ ಈ ಕಟ್ಟಡಗಳಲ್ಲಿರುವ ಎಲ್ಲಾ ಕಚೇರಿ, ಮಳಿಗೆಗಳನ್ನು ಕೆಲವು ಕಾಲ ಮುಚ್ಚಿ ಸಂತಾಪ ವ್ಯಕ್ತಪಡಿಸಲಾಯಿತು. ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮಹಂತೇಶ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿದರು. ಲೆಕ್ಕ ಪರಿಶೋಧಕರಾದ ಮಂದ್ರಿರ ಮೋಹನ್ ದಾಸ್, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ, ವಿಘ್ನೇಶ್ ಭೂತನಕಾಡು, ದಂತ ವೈದ್ಯ ಡಾ. ರತೀಶ್, ಟಿ.ವಿ. ನಿರೂಪಕಿ ಸುಮಿತ್ರ ಮಹಂತೇಶ್ ಕುರಿತು ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್: ಮಹಾಂತೇಶ್ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಿಟ್ಟು ಚಂಗಪ್ಪ, ಪದ್ಮಿನಿ ಪೊನ್ನಪ್ಪ ಸೇರಿದಂತೆ ಹಲವು ಮುಖಂಡರು ಕಂಬನಿ ಮಿಡಿದಿದ್ದಾರೆ.

ಎಸ್.ಡಿ.ಪಿ.ಐ. : ಜಿಲ್ಲಾ ಸಮಿತಿ ಅಧ್ಯಕ್ಷ ಅಮೀನ್ ಮೊಹಿಸಿನ್ ಸಂತಾಪ ಸೂಚಿಸಿದ್ದಾರೆ.

ಜೆಡಿಎಸ್: ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕೊಡಗು ತುಳುವೆರ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಕಂಬನಿ ಮಿಡಿದಿದ್ದಾರೆ.

ಪತ್ರಕರ್ತರ ವೇದಿಕೆ: ಕೊಡಗು ಪತ್ರಕರ್ತರ ವೇದಿಕೆಯ ಖಜಾಂಚಿಯಾಗಿದ್ದ ಮಹಂತೇಶ್ ಅವರ ನಿಧನಕ್ಕೆ ವೇದಿಕೆಯು ಅತೀವ ಸಂತಾಪವನ್ನು ಸೂಚಿಸಿದೆ. ವೇದಿಕೆಯ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಹೂವಲ್ಲಿ, ಉಪಾಧ್ಯಕ್ಷರಾದ ಕೆ.ತಿಮ್ಮಪ್ಪ, ಕವನ್ ಕಾರ್ಯಪ್ಪ, ಮದೋಶ್ ಪೂವಯ್ಯ, ರಫೀಕ್ ತೂಚಮಕೇರಿ,ಉಳ್ಳಿಯಡ ಪೂವಯ್ಯ, ಜಿ.ರಾಜೇಂದ್ರ, ಅಬ್ದುಲ್ ರಹಿಮಾನ್, ಎಸ್.ಎಂ.ಚಂಗಪ್ಪ, ಚಮ್ಮಟಿರ ಪ್ರವೀಣ್ ಉತ್ತಪ್ಪ, ಕೇಶವ ಕಾಮತ್, ಮನುಶೆಣೈ, ಮುಬಾರಕ್, ಸೂರಿಯ ಮತ್ತಿತರರು ಕಂಬನಿಗರೆದು ಸಂತಾಪ ಸೂಚಿಸಿದ್ದಾರೆ.

ಸೋಮವಾರಪೇಟೆ: ಕೆ.ಬಿ. ಮಹಂತೇಶ್‍ರವರ ನಿಧನಕ್ಕೆ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘ, ನಗರ ಪತ್ರಕರ್ತರ ಸಂಘ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಪತ್ರಿಕಾ ಭವನದಲ್ಲಿ ಸಂತಾಪ ಸೂಚಕ ಸಭೆ ನಡೆಸಲಾಯಿತು.

ಸಭೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಲಾಯಿತು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ಕಾರ್ಯದರ್ಶಿ ಬಿ.ಎ. ಭಾಸ್ಕರ್, ನಗರಾಧ್ಯಕ್ಷ ಡಿ.ಪಿ. ಲೋಕೇಶ್, ಕಾರ್ಯದರ್ಶಿ ವಿಜಯ್ ಹಾನಗಲ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್, ಹಿರಿಕರ ರವಿ ಸೇರಿದಂತೆ ಸದಸ್ಯರುಗಳು ಹಾಜರಿದ್ದರು.

ನಗರ ಕಾಂಗ್ರೆಸ್: ಕೆ.ಬಿ. ಮಹಂತೇಶ್ ನಿಧನಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

ಸಿದ್ದಾಪುರ: ಹಿರಿಯ ಪತ್ರಕರ್ತ ಕೆ.ಬಿ. ಮಹಂತೇಶ್ ನಿಧನಕ್ಕೆ ಸಿದ್ದಾಪುರ ನಗರ ಪತ್ರಕರ್ತರ ಸಂಘ ಸಂತಾಪ ವ್ಯಕ್ತಪಡಿಸಿದೆ. ಅಧ್ಯಕ್ಷ ಎ.ಎನ್. ವಾಸು ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಮೃತರ ಗೌರವಾರ್ಥ ಮೌನಾಚರಣೆ ಮಾಡಲಾಯಿತು. ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವದರ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ನಗರ ಪತ್ರಕರ್ತರ ಸಂಘ ಉಪಾಧ್ಯಕ್ಷ ಎಸ್.ಎಂ. ಮುಬಾರಕ್, ಪ್ರಧಾನ ಕಾರ್ಯದರ್ಶಿ ರಜೀತ್ ಕುಮಾರ್, ಖಜಾಂಚಿ ಎಂ.ಎ. ಅಜೀಜ್, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್. ಸುಬ್ರಮಣಿ, ಗೌರವ ಅಧ್ಯಕ್ಷ ಅಂಚೆಮನೆ ಸುಧಿ, ಸಂಘದ ಪ್ರಮುಖರಾದ ಮುಸ್ತಫ, ಕಲೀಲ್, ಸತೀಶ್, ಸಲೀಂ ಹಾಜರಿದ್ದರು.