ಗೋಣಿಕೊಪ್ಪ ವರದಿ, ನ. 12: ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಶನ್ ವತಿಯಿಂದ ಹರಿಶ್ಚಂದ್ರಪುರ ಮನೆಯಪಂಡ ಯಾರ್ಡ್‍ನಲ್ಲಿ ನಡೆದ ರಾಷ್ಟ್ರಮಟ್ಟದ ರ್ಯಾಲಿ ಕ್ರಾಸ್‍ನಲ್ಲಿ ಇಮ್ರಾನ್ ಪಾಶಾ ಚಾಂಪಿಯನ್ ಪ್ರಶಸ್ತಿ ಗಿಟ್ಟಿಸಿಕೊಂಡರು. 5 ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಇಮ್ರಾನ್ ಪಾಶಾ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ರ್ಯಾಲಿಯಲ್ಲಿ ದೂಳೆಬ್ಬಿಸುವ ಮೂಲಕ ರೋಚಕತೆ ಮೂಡಿಸಿದರು.

ಕೇರಳ, ಮೈಸೂರು, ಬೆಂಗಳೂರು ಹಾಗೂ ಹೊರ ರಾಜ್ಯಗಳಿಂದ ರ್ಯಾಲಿಪಟುಗಳು ಪಾಲ್ಗೊಂಡರು. ಶನಿವಾರ ನಡೆದ ದ್ವಿಚಕ್ರ ರ್ಯಾಲಿಯಲ್ಲಿ ಕೂರ್ಗ್ ಬಾಯ್ಸ್ ಒಪನ್ ಕ್ಲಾಸ್, ಕೂರ್ಗ್ ನೋವಿಸ್ ಕ್ಲಾಸ್, ನ್ಯೂ ಬಾಯ್ಸ್ ಒಪನ್ ಕ್ಲಾಸ್, ನೋವಿಸ್ ಒಪನ್ ಕ್ಲಾಸ್, ಫೋರ್ ಸ್ಟ್ರೋಕ್ ಒಪನ್ ಕ್ಲಾಸ್, ಟು ಸ್ಟ್ರೋಕ್ ಒಪನ್ ಕ್ಲಾಸ್, ಮೊಡಿಫೈಡ್ ಒಪನ್ ಕ್ಲಾಸ್, ಬುಲ್ಲೆಟ್ ಒಪನ್ ಕ್ಲಾಸ್, ಇಂಡಿಯನ್ ಎಕ್ಸ್‍ಪರ್ಟ್ ಕ್ಲಾಸ್, ಇಂಡಿಯನ್ ಒಪನ್ ಕ್ಲಾಸ್, ಟಿವಿಎಸ್ ಮೋಪೆಡ್ ಕ್ಲಾಸ್, ಇಂಟರ್‍ಮೀಡಿಯೇಟ್ ಕ್ಲಾಸ್, ಸ್ಕೂಟರ್ ಒಪನ್ ಕ್ಲಾಸ್, ಟಿವಿಎಸ್ ಮತ್ತು ಪೊಪೆಡ್ ಒಪನ್ ಕ್ಲಾಸ್ ವಿಭಾಗಗಳಲ್ಲಿ ರ್ಯಾಲಿ ಗಮನ ಸೆಳೆಯಿತು.

ಟಿವಿಎಸ್ ಮೋಪೆಡ್ ಕ್ಲಾಸ್‍ನಲ್ಲಿ ಕಲೀಂ (ಪ್ರ), ತಾಲ್ಜೈ (ದ್ವಿ), ರಿಯಾಜ್ (ತೃ), ಸ್ಕೂಟರ್ ವಿಭಾಗದಲ್ಲಿ ಕಲೀಂ (ಪ್ರ), ದಿಲೀಪ್ ಕುಮಾರ್ (ದ್ವಿ), ಎಂ. ಆಕಾಶ್ (ತೃ), ಕೂರ್ಗ್ ಓಪನ್‍ನಲ್ಲಿ ನಿಹಾಲ್‍ಖಾನ್ (ಪ್ರ), ಅರ್ಶದ್ (ದ್ವಿ), ಸ್ಟೆಫೆ ರಾಯ್ (ತೃ), ನ್ಯೂ ಬಾಯ್ಸ್‍ನಲ್ಲಿ ಅರುಣ್ (ಪ್ರ), ನಮನ್ ಬೇಗ್ (ದ್ವಿ), ನಿವೀತ್ ಕುಟ್ಟಿ (ತೃ), ಫೋರ್ ಸ್ಟ್ರೋಕ್ ವಿಭಾಗದಲ್ಲಿ ಇಮ್ರಾನ್ ಪಾಶಾ (ಪ್ರ), ವಿ.ಎಸ್. ನರೇಶ್ (ದ್ವಿ), ಸುಹೈಲ್ ಅಹಮದ್ (ತೃ), ಪಡೆದುಕೊಂಡರು.

ಇಂಡಿಯನ್ ಓಪನ್ ವಿಭಾಗದಲ್ಲಿ ಇಮ್ರಾನ್ ಪಾಷಾ (ಪ್ರ), ಅಮಲ್ ವರ್ಗಿಸ್ (ದ್ವಿ), ವಿ. ಎಸ್. ನರೇಶ್ (ತೃ), ಬುಲೆಟ್ ಓಪನ್‍ನಲ್ಲಿ ಪೂಣಚ್ಚ (ಪ್ರ), ಜಯದರ್ಶ್ (ದ್ವಿ), ಇಂಡಿಯನ್ ಎಕ್ಸ್‍ಪರ್ಟ್ ಕ್ಲಾಸ್‍ನಲ್ಲಿ ಇಮ್ರಾನ್ ಪಾಶಾ (ಪ್ರ), ವಿ. ಎಸ್. ನರೇಶ್(ದ್ವಿ), ಅರುಣ್ (ತೃ), ಕೂರ್ಗ್ ನಾವಿಸ್ ಕ್ಲಾಸ್‍ನಲ್ಲಿ ನಿಹಾಲ್ ಖಾನ್ (ಪ್ರ), ಶುಭಂ (ದ್ವಿ), ಸ್ಟೆಫನ್‍ರಾಯ್ (ತೃ), ಮಾಡಿಫೈಡ್ ವಿಭಾಗದಲ್ಲಿ ಇಮ್ರಾನ್ ಪಾಶಾ (ಪ್ರ), ವಿ. ಎಸ್. ನರೇಶ್ (ದ್ವಿ), ಅಮಲ್ ವರ್ಗಿಸ್ (ತೃ), ಮೋಪೆಡ್ ವಿಭಾಗದಲ್ಲಿ ಕಲೀಂ (ಪ್ರ), ಎಂ. ರಿಯಾಜ್ (ದ್ವಿ), ತಬ್ರೇಶ್ ಪಾಶಾ (ತೃ), ಇಂಟರ್ ಮೀಡಿಯೆಟ್ ಕ್ಲಾಸ್‍ನಲ್ಲಿ ಅರುಣ್ (ಪ್ರ), ಹುಸೈನ್ ಪಾಶಾ (ದ್ವಿ), ದೀಕ್ಷಿತ್, ಟು ಸ್ಟ್ರೋಕ್‍ನಲ್ಲಿ ವಿ. ಎಸ್. ನರೇಶ್ (ಪ್ರ), ಇಮ್ರಾನ್ ಪಾಶಾ (ದ್ವಿ), ಸುಹೈಲ್ ಅಮೀದ್ (ತೃ), ನಾವೀಸ್ ಓಪನ್‍ನಲ್ಲಿ ಅರುಣ್ (ಪ್ರ), ಶಾರೀಫ್ (ದ್ವಿ), ದೀಕ್ಷಿತ್ (ತೃ).

ಚಾಲನೆ: ದ್ವಿಚಕ್ರ ಮತ್ತು ನಾಲ್ಕು ಚಕ್ರ ರ್ಯಾಲಿಯನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಡಿವೈಎಸ್‍ಪಿ ನಾಗಪ್ಪ ಬಾವುಟ ಹಾರಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕ ಬೋಪಯ್ಯ, ರ್ಯಾಲಿಪಟುಗಳು ಅಧಿಕ ಬುದ್ದಿಶಕ್ತಿ ಮತ್ತು ಶಕ್ತಿಯುತರಾಗಿರುತ್ತಾರೆ. ಇಂತವರು ದೇಶದ ಅಭಿವೃದ್ಧಿ ಬಗ್ಗೆ ಕಾಳಾಜಿವಹಿಸಬೇಕು ಎಂದರು.

ಡಿವೈಎಸ್‍ಪಿ ನಾಗಪ್ಪ ಮಾತನಾಡಿ, ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲಿ ಕ್ರೀಡಾಪಟುಗಳಿದ್ದಾರೆ. ಇವರ ಶಕ್ತಿಯುತ ಮನಸ್ಸು ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.

ಈ ಸಂದರ್ಭ ಸೌತ್ ಕೂರ್ಗ್ ಪಾರ್ಮರ್ಸ್ ಅಸೋಸಿಯೇಶನ್ ಅಧ್ಯಕ್ಷ ಚೆಪ್ಪುಡೀರ ಎ. ಮಾಚಯ್ಯ, ಪದಾಧಿಕಾರಿಗಳಾದ ಅಡ್ಡಂಡ ಮಂದಣ್ಣ, ಸಿ.ಕೆ. ಬೋಪಣ್ಣ, ಕಿಲನ್ ಗಣಪತಿ, ಸಣ್ಣುವಂಡ ಮಿಚು ಗಣಪತಿ ಹಾಗೂ ವೃತ್ತ ನಿರೀಕ್ಷಕ ದಿವಾಕರ್ ಪಾಲ್ಗೊಂಡಿದ್ದರು.