ವೀರಾಜಪೇಟೆ, ನ. 12: ದೊಡ್ಡಟ್ಟಿ ಚೌಕಿ ಬಳಿಯಿಂದ ಚರ್ಚ್ಗೆ ತೆರಳುವ ರಸ್ತೆಯಲ್ಲಿರುವ ಸಾರ್ವಜನಿಕ ಶೌಚಾಲಯದ ಸಮೀಪ ಹಳೆ ತೋಡಿನಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ. ಅಂದಾಜು 45 ವರ್ಷ ಪ್ರಾಯದ ವ್ಯಕ್ತಿಯ ಶವ ರಾತ್ರಿ ಸುಮಾರು 9.20 ಗಂಟೆ ವೇಳೆಗೆ ಪತ್ತೆಯಾಗಿದ್ದು, ತಲೆಯ ಭಾಗಕ್ಕೆ ಕಲ್ಲಿನಿಂದ ಹಲ್ಲೆ ನಡೆಸಿರುವದು ಕಂಡು ಬಂದಿದೆ.ಸ್ಥಳಕ್ಕೆ ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ಹಾಗೂ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿ ಯಾರೆಂಬದು ತಿಳಿದು ಬಂದಿಲ್ಲ. ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಸ್ಥಳೀಯ ಇಬ್ಬರು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.