ಮೂರ್ನಾಡು, ನ. 12: ಮಂದಪ್ಪ ರೂರಲ್ ಫ್ರೆಂಡ್ಸ್ (ಎಂಆರ್‍ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ಆಯೋಜಿಸಲಾದ ಬಾಚೆಟ್ಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಬಿಬಿಸಿ ಗೋಣಿಕೊಪ್ಪಲು, ಸ್ಪೋಟ್ರ್ಸ್ ಹಾಸ್ಟೆಲ್ ಪೊನ್ನಂಪೇಟೆ, ಡಾಲ್ಫಿನ್ಸ್ ಸೋಮವಾರಪೇಟೆ ಹಾಗೂ ಹಾತೂರು ಯೂತ್ ಕ್ಲಬ್ ಸೆಮಿಫೈನಲ್ ಪ್ರವೇಶಿಸಿತು.

ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ ಆಯೋಜಿಸಲಾದ ಎರಡನೇ ದಿನದ ಮೊದಲ ಪಂದ್ಯದಲ್ಲಿ ಬಿಬಿಸಿ ಗೋಣಿಕೊಪ್ಪಲು ತಂಡ ಹಾಗೂ ಚಾರ್ಮರ್ಸ್ ಮಡಿಕೇರಿ ತಂಡ ನಡುವೆ ನಡೆದು ಪೆನಾಲ್ಟಿ ಸ್ಟ್ರೋಕ್‍ನಲ್ಲಿ 4-3 ಗೋಲುಗಳಿಂದ ಸೋಲಿಸಿತು. ಬಿಬಿಸಿ ಗೋಣಿಕೊಪ್ಪಲು ತಂಡದ ಆಟಗಾರ ಹರೀಶ್ 31ನಿಮಿಷದಲ್ಲಿ 1 ಗೋಲು ಹೊಡೆದರು. ಚಾರ್ಮರ್ಸ್ ಮಡಿಕೇರಿ ತಂಡದ ಪರವಾಗಿ ಸವನ್ 54ನಿಮಿಷದಲ್ಲಿ 1 ಗೋಲು ಬಾರಿಸಿ ಪಂದ್ಯವನ್ನು ಸಮಬಲವಾಗಿಸಿದರು. ಬಳಿಕ ಪೆನಾಲ್ಟಿ ಸ್ಟ್ರೋಕ್‍ನಲ್ಲಿ 4-3 ಗೋಲುಗಳಲ್ಲಿ ಬಿಬಿಸಿ ಗೋಣಿಕೊಪ್ಪಲು ತಂಡ ಚಾರ್ಮರ್ಸ್ ಮಡಿಕೇರಿ ತಂಡವನ್ನು ಸೋಲಿಸಿತು.

ಸ್ಪೋಟ್ರ್ಸ್ ಹಾಸ್ಟೆಲ್ ಪೊನ್ನಂಪೇಟೆ ಹಾಗೂ ಕೋಣನಕಟ್ಟೆ ಇಲೆವೆನ್ ತಂಡದ ನಡುವಿನ ಪಂದ್ಯದಲ್ಲಿ ಸ್ಪೋಟ್ರ್ಸ್ ಹಾಸ್ಟೆಲ್ ಪೊನ್ನಂಪೇಟೆ 4-0 ಗೋಲಿನಿಂದ ಜಯಸಾಧಿಸಿತು. ಸ್ಪೋಟ್ರ್ಸ್ ಹಾಸ್ಟೆಲ್ ಪೊನ್ನಂಪೇಟೆ ತಂಡದ ವಸಂತ್ 6,37,44ನಿಮಿಷದಲ್ಲಿ 3ಗೋಲು ದಿಕ್ಷೀತ್ 46ನಿಮಿಷದಲ್ಲಿ 1 ಗೋಲು ಬಾರಿಸಿ ಗೆಲುವು ಸಾಧಿಸಿದರು.

ಡಾಲ್ಫಿನ್ ಸೋಮವಾರಪೇಟೆ ತಂಡ ಈಶ್ವರ ಯೂತ್ ಕ್ಲಬ್ ಬೇಗೂರು ತಂಡವನ್ನು 3-0 ಗೋಲುಗಳಿಂದ ಸೋಲಿಸಿತು. ಡಾಲ್ಫಿನ್ ಸೋಮವಾರಪೇಟೆ ತಂಡದ ಪರ ದರ್ಶನ್ 15 ನಿಮಿಷದಲ್ಲಿ 1 ಗೋಲು ಲಿಖಿತ್ 52, 57 ನಿಮಿಷದಲ್ಲಿ 2 ಗೋಲು ಹೊಡೆದರು.

ಹಾತೂರು ಯೂತ್ ಕ್ಲಬ್ ಹಾಗೂ ಯುಎಸ್‍ಸಿ ಬೇರಳಿನಾಡು ತಂಡವನ್ನು 4-3 ಗೋಲುಗಳಿಂದ ಸೋಲಿಸಿತು. ಹಾತೂರು ಯೂತ್ ಕ್ಲಬ್ ತಂಡ ಆಟಗಾರ ನಿರನ್ 9 ನಿಮಿಷದಲ್ಲಿ 1 ಗೋಲು ಚಂಗಪ್ಪ 14, 44 ನಿಮಿಷದಲ್ಲಿ 2 ಗೋಲು ಹಾಗೂ ಸೋಮಣ್ಣ 48 ನಿಮಿಷದಲ್ಲಿ 1 ಗೋಲು ಹೊಡೆದರು. ಯುಎಸ್‍ಸಿ ಬೇರಳಿನಾಡು ತಂಡದ ಕಾರ್ಯಪ್ಪ 29 ನಿಮಿಷದಲ್ಲಿ 1 ಗೋಲು ರಮೇಶ್ 41, 51 ನಿಮಿಷದಲ್ಲಿ 2 ಗೋಲು ಬಾರಿಸಿದರು.