ಮಡಿಕೇರಿ, ನ. 12: ಕೊಡಗು ಜಿಲ್ಲಾ ತೋಟಗಾರಿಕಾ ಬೆಳೆಗಳ ಮಾರಾಟ ಸಹಕಾರ ಸಂಘದ (ಹಾಪ್ ಕಾಮ್ಸ್) ನೂತನ ಕಟ್ಟಡ ಕಾಮಗಾರಿ ಚಾಲನೆಗೊಂಡಿದೆ. ಮೊನ್ನೆಯಷ್ಟೇ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ ನೆರವೇರಿಸಿದ್ದ ಬೆನ್ನಲ್ಲೇ ಇದೀಗ ನಿವೇಶನ ಸಮತಟ್ಟುಗೊಳಿ ಸುವ ಕಾಮಗಾರಿ ಭರದಿಂದ ಸಾಗಿದೆ.

ಕರ್ನಾಟಕ ರಾಜ್ಯ ತೋಟಗಾರಿಕಾ ಬೆಳೆಗಳ ಸಹಕಾರ ಮಾರಾಟ ಸಂಘದಿಂದ ಈಗಾಗಲೇ ಕಟ್ಟಡ ಕಾಮಗಾರಿಗೆ ರೂ. 2.25 ಕೋಟಿ ಹಣ ಮಂಜೂರಾಗಿದ್ದು, ಪುತ್ತೂರಿನ ಖಾಸಗಿ ನಿರ್ಮಿತಿ ಕೇಂದ್ರದ ಗುತ್ತಿಗೆದಾರ ಆನಂದ್ ಕುಮಾರ್ ಈ ಕಟ್ಟಡ ಕಾಮಗಾರಿ ನಿರ್ವಹಿಸುತ್ತಿದ್ದಾರೆ. ಆದಷ್ಟು ಬೇಗನೆ ಕಟ್ಟಡ ಕೆಲಸ ಪೂರ್ಣಗೊಳಿಸಲಾಗುವದು ಎಂದು ಸಂಘದ ಅಧ್ಯಕ್ಷ ಬಿ.ಎ. ರಮೇಶ ಚಂಗಪ್ಪ ತಿಳಿಸಿದ್ದಾರೆ.

ಈ ಕಟ್ಟಡದಲ್ಲಿ ಕೊಡಗು ತೋಟಗಾರಿಕಾ ಸಹಕಾರ ಸಂಘದ ಕೇಂದ್ರ ಕಚೇರಿಯು ಸೇರಿದಂತೆ ವಾಣಿಜ್ಯ ಮಳಿಗೆಗಳು ಹಾಗೂ ರೈತರು ಬೆಳೆಯುವ ಬೆಳೆಗಳನ್ನು ಸಂಗ್ರಹ ಮತ್ತು ಮಾರಾಟಗೊಳಿಸುವ ಸಲುವಾಗಿ ಕೊಠಡಿಗಳು ನಿರ್ಮಾಣಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ.