ಮಡಿಕೇರಿ, ನ. 14: ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ತಾ. 18 ರಂದು ಕಲಾಡ್ಚ ಹಬ್ಬದ ಕಟ್ಟು ಬೀಳುವದರಿಂದ ಅಂದು ಹುತ್ತರಿ ದಿನಾಂಕವನ್ನು ಗೊತ್ತುಪಡಿಸಲಾಗುವದು. ಆ ದಿವಸ ಪೂರ್ವಾಹ್ನ 10 ಗಂಟೆಗೆ ದೇವರ ಸನ್ನಿಧಿಯಲ್ಲಿ ದೇವ ತಕ್ಕರು, ನಾಡಿನ ತಕ್ಕ ಮುಖ್ಯಸ್ಥರು, ಭಕ್ತ ಜನ ಸಂಘದವರು ಹಾಗೂ ಅಮ್ಮಂಗೇರಿ ಜ್ಯೋತಿಷ್ಯರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಂತರ ಸಂಪ್ರಾದಯದಂತೆ ಸಭಾಂಗಣದಲ್ಲಿ ಸಭೆ ಸೇರಲಾಗುವದು. ನಂತರ ಶಾಸ್ತ್ರೋಕ್ತವಾಗಿ ಸಭೆಯ ಮುಂದೆ ರಾಶಿ ಪ್ರಶ್ನೆ ಮೂಲಕ ಬಿಚ್ರ್ವಾರ್ ಕಲಾಡ್ಚ ಹಬ್ಬ ನಡೆಯುವ ದಿನಾಂಕ ಮತ್ತು ಹುತ್ತರಿ ನಡೆಯುವ ದಿನಾಂಕದ ಶುಭ ಘಳಿಗೆಯ ಮುಹೂರ್ತ ನಿರ್ಧರಿಸಿ ಘೋಷಿಸಲಾಗುವದೆಂದು ದೇವತಕ್ಕರಾದ ಪರದಂಡ ಕಾವೇರಪ್ಪ ತಿಳಿಸಿದ್ದಾರೆ.