ಗೋಣಿಕೊಪ್ಪ, ನ. 14 : ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಹಾಕಿಕೂರ್ಗ್ ಸಹಯೋಗದಲ್ಲಿ ನಡೆಯುತ್ತಿರುವ ಎಂ. ಎನ್. ಕರುಂಬಯ್ಯ ಜ್ಞಾಪಕಾರ್ಥ ಜಿಲ್ಲಾ ಪ್ರೌಢಶಾಲಾ ಮಟ್ಟದ ಮಾಸ್ಟರ್ಸ್ ಕಪ್‍ನಲ್ಲಿ ಗೋಣಿಕೊಪ್ಪ ಲಯನ್ಸ್, ಭಾರತೀಯ ವಿದ್ಯಾಭವನ ಹಾಗೂ ಅಮ್ಮತ್ತಿ ಪ್ರೌಢಶಾಲಾ ತಂಡವು ಸೆಮಿ ಫೈನಲ್ ಪ್ರವೇಶ ಪಡೆದಿವೆ.

ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಾಲ್ಸ್ ತಂಡವು ಕಾಪ್ಸ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಿತು.

ಅತಿಥೇಯ ಕಾಲ್ಸ್ ತಂಡವು 5-0 ಗೋಲುಗಳ ಮೂಲಕ ಮಣಿಸಿತು. ಕಾಲ್ಸ್ ಪರ ಪೂವಣ್ಣ 8, 18, 19, 38 ನೇ ನಿಮಿಷಗಳಲ್ಲಿ ಹ್ಯಾಟ್ರಿಕ್ ಸೇರಿ 4 ಗೋಲು ಹೊಡೆದರು. ಕುಶಾಲಪ್ಪ 40 ನೇ ನಿಮಿಷದಲ್ಲಿ 1 ಗೋಲು ಹೊಡೆದರು.

ಗೋಣಿಕೊಪ್ಪ ಲಯನ್ಸ್ ಶಾಲಾ ತಂಡವು ಮೂರ್ನಾಡು ಸರ್ಕಾರಿ ಪ್ರೌಢಶಾಲಾ ತಂಡದ ವಿರುದ್ದ 6-0 ಗೋಲುಗಳಿಂದ ಜಯಿಸಿತು. ಲಯನ್ಸ್ ಪರವಾಗಿ ಜಗತ್ 18 ಹಾಗೂ 19 ನಿಮಿಷಗಳಲ್ಲಿ 2 ಗೋಲು, 13 ನೇ ನಿಮಿಷದಲ್ಲಿ ನಾಣಯ್ಯ, 20 ರಲ್ಲಿ ಪೊನ್ನಣ್ಣ, 28 ರಲ್ಲಿ ಮುತ್ತಪ್ಪ, 33 ರಲ್ಲಿ ಚರಣ್ ತಲಾ ಒಂದೊಂದು ಗೋಲು ಹೊಡೆದರು.

ಭಾರತೀಯ ವಿದ್ಯಾಭವನ ತಂಡವು ಹಾತೂರು ಪ್ರೌಢಶಾಲಾ ತಂಡವನ್ನು 4-0 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ 6 ಹಾಗೂ 12 ನೇ ನಿಮಿಷಗಳಲ್ಲಿ ತಾರಿಕ್ 2 ಗೋಲು, 7 ನೇ ನಿಮಿಷದಲ್ಲಿ ಅಕ್ಷಯ್, 10 ನೇ ನಿಮಿಷದಲ್ಲಿ ಅರ್ಜುನ್ ಶ್ರೀಧರ್ ಗೋಲು ಹೊಡೆದರು.

ಅಮ್ಮತ್ತಿ ಪ್ರೌಢಶಾಲಾ ತಂಡವು ಅರಮೇರಿ ಎಸ್‍ಎಂಎಸ್ ತಂಡದ ವಿರುದ್ಧ 2-0 ಗೋಲುಗಳ ಗೆಲುವು ದಾಖಲಿಸಿತು. ಅಮ್ಮತ್ತಿ ಪರವಾಗಿ 20 ನೇ ನಿಮಿಷದಲ್ಲಿ ಮಿನಲ್, 28 ರಲ್ಲಿ ಗಣೇಶ್ ತಲಾ ಒಂದೊಂದು ಗೋಲು ಹೊಡೆದರು.

ಪಂದ್ಯಾವಳಿ ನಿರ್ದೇಶಕರಾಗಿ ಅಂಜಪರವಂಡ ಕುಶಾಲಪ್ಪ, ತಾಂತ್ರಿಕ ವರ್ಗದಲ್ಲಿ ಸುಳ್ಳಿಮಾಡ ಸುಬ್ಬಯ್ಯ, ಬೊಳ್ಳಚಂಡ ನಾಣಯ್ಯ, ಅನ್ನಾಡಿಯಂಡ ಪೊನ್ನಣ್ಣ, ಕಾಟುಮಣಿಯಂಡ ಕಾರ್ತಿಕ್, ಮೇರಿಯಂಡ ಅಯ್ಯಣ್ಣ, ಚೋಯಮಾಡಂಡ ಬಿಪಿನ್, ಎಂ. ವಿನೋದ್, ಮುಂಡ್ಯೋಳಂಡ ದರ್ಶನ್ ಹಾಗೂ ಹರಿಣಾಕ್ಷಿ ಕಾರ್ಯನಿರ್ವಹಿಸಿದರು.

2 ನೇ ವರ್ಷದ ಮಾಸ್ಟ್‍ರ್ಸ್ ಕಪ್‍ನ್ನು ಕಾಲ್ಸ್ ಶಾಲೆ ಮುಖ್ಯಸ್ಥ ಮನೆಯಪಂಡ ದತ್ತಾ ಉದ್ಘಾಟಿಸಿದರು. ಈ ಸಂದರ್ಭ ಅಶ್ವಿನಿ ಫೌಂಡೇಶನ್ ನಿರ್ದೇಶಕಿ ಅಶ್ವಿನಿ ನಾಚಪ್ಪ, ಪ್ರಾಂಶುಪಾಲೆ ಬೊಳ್ಳಮ್ಮ ಉಪಸ್ಥಿತರಿದ್ದರು.