ಕುಶಾಲನಗರ, ನ. 14: ಆಟೋ ಚಾಲಕರು ಕಾನೂನನ್ನು ಪರಿಪಾಲಿಸುವದರೊಂದಿಗೆ ರಸ್ತೆ ಸಂಚಾರ ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕೆಂದು ಡಿವೈಎಸ್‍ಪಿ ಸಂಪತ್ ಕುಮಾರ್ ಹೇಳಿದರು.

ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಕೂಡ್ಲೂರು ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಆಟೋ ಚಾಲಕರಿಗೆ ಮಾಸ್ಟರ್ ಕಾರ್ಡ್ ಹಾಗೂ ಕೆಎನ್‍ಪಿ ಫಲಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಟೋ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಸಂಚಾರಿ ಕುಶಾಲನಗರ, ನ. 14: ಆಟೋ ಚಾಲಕರು ಕಾನೂನನ್ನು ಪರಿಪಾಲಿಸುವದರೊಂದಿಗೆ ರಸ್ತೆ ಸಂಚಾರ ಸುರಕ್ಷಾ ಕ್ರಮಗಳನ್ನು ಸಮರ್ಪಕವಾಗಿ ಅನುಸರಿಸಬೇಕೆಂದು ಡಿವೈಎಸ್‍ಪಿ ಸಂಪತ್ ಕುಮಾರ್ ಹೇಳಿದರು.

ಕುಶಾಲನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಆಶ್ರಯದಲ್ಲಿ ಕೂಡ್ಲೂರು ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಆಟೋ ಚಾಲಕರಿಗೆ ಮಾಸ್ಟರ್ ಕಾರ್ಡ್ ಹಾಗೂ ಕೆಎನ್‍ಪಿ ಫಲಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಟೋ ಚಾಲಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು ಸಂಚಾರಿ ಪಾರಾಗಲು ಮುಂಜಾಗ್ರತೆ ವಹಿಸಬೇಕೆಂದರು.

ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷರಾದ ವಿ.ಪಿ.ನಾಗೇಶ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೆರೆದಿದ್ದ ಆಟೋ ಚಾಲಕರಿಗೆ ಮಾಸ್ಟರ್ ಕಾರ್ಡ್ ಮತ್ತು ಕೆಎನ್‍ಪಿ ಫಲಕಗಳನ್ನು ವಿತರಿಸ ಲಾಯಿತು. ಕಾರ್ಯ ಕ್ರಮದಲ್ಲಿ ವರ್ಗಾವಣೆ ಗೊಂಡ ಡಿವೈ ಎಸ್‍ಪಿ ಸಂಪತ್ ಕುಮಾರ್ ಅವರನ್ನು ಗೌರವಿಸಲಾಯಿತು.

ಈ ಸಂದರ್ಭ ವೃತ್ತ ನಿರೀಕ್ಷಕ ಕ್ಯಾತೆಗೌಡ, ಪೊಲೀಸ್ ಠಾಣಾಧಿಕಾರಿ ಗಳಾದ ಜಗದೀಶ್, ಜೆ.ಇ. ಮಹೇಶ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ, ಉದ್ಯಮಿ ಎಂ.ಕೆ. ದಿನೇಶ್, ಆಟೋ ಚಾಲಕರು ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಜೋಸೆಫ್ ವಂದನಾಥ್, ಪದಾಧಿಕಾರಿಗಳು ಇದ್ದರು.