ಗೋಣಿಕೊಪ್ಪ, ನ. 14: ಸರ್ಕಾರಿ ಶಾಲೆಗಳ ರಕ್ಷಣೆಗಾಗಿ ಅಸ್ತಿತ್ವಕ್ಕೆ ಬಂದಿರುವ ಶಾಲಾ ಮೇಲುಸ್ತುವಾರಿ ಸಮನ್ವಯ ವೇದಿಕೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಪ್ರೋತ್ಸಾಹ ನೀಡುವ ಮೂಲಕ ಸರ್ಕಾರಿ ಶಾಲೆಗಳು ಉಳಿವಿಗೆ ಸ್ಪಂದಿಸಬೇಕು ಎಂದು ವೀರಾಜಪೇಟೆ ತಾಲೂಕು ಶಾಲಾ ಮೇಲುಸ್ತುವಾರಿ ಸಮನ್ವಯ ವೇದಿಕೆ ಅಧ್ಯಕ್ಷೆ ನ್ಯಾನ್ಸಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ತಿಂಗಳಿನಿಂದ ಕೊಡಗು ಜಿಲ್ಲೆಯಲ್ಲಿ ಮೇಲುಸ್ತುವಾರಿ ಸಮಿತಿ ವೇದಿಕೆ ಕಾರ್ಯನಿರ್ವ ಹಿಸುತ್ತಿದೆ. ಸರ್ಕಾರಿ ಶಾಲೆಗಳ ರಕ್ಷಣೆಯಾಗಬೇಕು. ಇದರಿಂದ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಬೇಕು ಎಂಬ ಉದ್ದೇಶ ನಮ್ಮದು ಎಂದರು.

ಸರ್ಕಾರಿ ಶಾಲೆ ಉಳಿಯಲಿ, ಬೆಳೆಯಲಿ ಎಂಬುವದು ವೇದಿಕೆಯ ಮೂಲ ಧ್ಯೇಯವಾಗಿದೆ. ಇದಕ್ಕೆ ಶಾಲೆಗಳ ಅಭಿವೃದ್ಧಿಯಲ್ಲಿರುವ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು ಹಿಸುತ್ತಿದೆ. ಸರ್ಕಾರಿ ಶಾಲೆಗಳ ರಕ್ಷಣೆಯಾಗಬೇಕು. ಇದರಿಂದ ಶಿಕ್ಷಣ ವಂಚಿತ ಮಕ್ಕಳಿಗೆ ಶಿಕ್ಷಣ ದೊರೆಯುವಂತಾಗಬೇಕು ಎಂಬ ಉದ್ದೇಶ ನಮ್ಮದು ಎಂದರು.

ಸರ್ಕಾರಿ ಶಾಲೆ ಉಳಿಯಲಿ, ಬೆಳೆಯಲಿ ಎಂಬುವದು ವೇದಿಕೆಯ ಮೂಲ ಧ್ಯೇಯವಾಗಿದೆ. ಇದಕ್ಕೆ ಶಾಲೆಗಳ ಅಭಿವೃದ್ಧಿಯಲ್ಲಿರುವ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರುಗಳು

ಬೆಂಬಲ ಸೂಚಿಸಬೇಕು. ಸದಸ್ಯತ್ವ ಪಡೆದು ಕೊಳ್ಳುವ ಮೂಲಕ ಸರ್ಕಾರಿ ಶಾಲೆಗಳ ರಕ್ಷಣೆಗೆ ಕೈಜೋಡಿಸಬೇಕು ಎಂದರು. ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರು, ಇಂಗ್ಲೀಷ್ ಶಿಕ್ಷಕರುಗಳನ್ನು ಕಡ್ಡಾಯವಾಗಿ ನೇಮಕ ಮಾಡುವ ಮೂಲಕ ಕ್ರೀಡೆ ಹಾಗೂ ಇಂಗ್ಲೀಷ್ ವಂಚಿತ ವಿದ್ಯಾರ್ಥಿಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸುತ್ತಿದ್ದೇವೆ ಎಂದರು.

ಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಸತ್ಯವತಿ, ಸದಸ್ಯೆ ಮಂಜುಳ ಇದ್ದರು.