ಮಡಿಕೇರಿ, ನ. 14: ಕೊಡಗಿನ ಐತಿಹಾಸಿಕ ಶ್ರೀ ಪಾಡಿ ಇಗ್ಗುತಪ್ಪ ದೇವಾಲಯದ ಭಕ್ತ ಜನ ಸಂಘದ ವಾರ್ಷಿಕ ಮಹಾಸಭೆಯು ಇಂದು ನಡೆಯುವದರೊಂದಿಗೆ, ಸಂಘ ಭಕ್ತರ ನೆರವಿನಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸರ್ವ ಸದಸ್ಯರು ಪ್ರಶಂಸೆ ಮಾಡುವ ಮೂಲಕ ಹಾಲೀ ಸಮಿತಿಯೇ ಮುಂದಿನ ಅವಧಿಗೆ ಮುಂದುವರಿಯುವಂತೆ ನಿರ್ಣಯ ನೆರವಿನಿಂದ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸರ್ವ ಸದಸ್ಯರು ಪ್ರಶಂಸೆ ಮಾಡುವ ಮೂಲಕ ಹಾಲೀ ಸಮಿತಿಯೇ ಮುಂದಿನ ಅವಧಿಗೆ ಮುಂದುವರಿಯುವಂತೆ ನಿರ್ಣಯ ನಿರ್ಣಯ ಅಂಗೀಕರಿಸಿತು.ಕಕ್ಕಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯ ಸಭಾಂಗಣದಲ್ಲಿ ನಡೆದ ಮಹಾಸಭೆಯ ಅಧ್ಯಕ್ಷತೆಯನ್ನು ಭಕ್ತಜನ ಸಂಘದ ಅಧ್ಯಕ್ಷ ಕಾಂಡಂಡ ಜೋಯಪ್ಪ ವಹಿಸಿದ್ದರು. ಸಭೆಯಲ್ಲಿ ಭಕ್ತಜನ ಸಂಘದ ಕಾರ್ಯದರ್ಶಿ ಬೊಳಂದಂಡ ಲಲಿತಾ ನಂದಕುಮಾರ್ ವಾರ್ಷಿಕ ವರದಿ ಹಾಗೂ ಕಳೆದ ಸಾಲಿನ ವರದಿಯೊಂದಿಗೆ ಮಹಾಸಭೆಗೆ ಲೆಕ್ಕಪತ್ರ ಮಂಡಿಸಿದರು.

ಭಕ್ತಜನ ಸಂಘಕ್ಕೆ ದಾನಿಗಳ ನೆರವು, ಅನುದಾನ, ಭಕ್ತರ ಕಾಣಿಕೆ ಬಾಬ್ತು ಒಟ್ಟು

(ಮೊದಲ ಪುಟದಿಂದ) ರೂ. 3,14,72,191 ಮೊತ್ತ ಸಂಗ್ರಹವಾಗಿದ್ದು, ದೇವಾಲಯದ ಅಭಿವೃದ್ಧಿಗಾಗಿ ಒಟ್ಟು ರೂ. 3 ಕೋಟಿ, 9 ಲಕ್ಷದ 31 ಸಾವಿರದ ಏಳುನೂರ ನಲವತ್ತೊಂದು ರಷ್ಟು ಖರ್ಚು ಮಾಡಲಾಗಿದ್ದು, ಉಳಿಕೆ ಹಣ ರೂ. 5,40,450 ಮೊತ್ತ ಬ್ಯಾಂಕ್ ಖಾತೆಯಲ್ಲಿ ಉಳಿದಿರುವದಾಗಿ ಮಾಹಿತಿ ನೀಡಿದರು.

ಹಲವರ ಸಲಹೆ-ಸೂಚನೆಗಳ ನಡುವೆ ಲೆಕ್ಕಪತ್ರ ಸಹಿತ ವರದಿಯನ್ನು ಸಭೆಯು ಅಂಗೀಕರಿಸುವದರೊಂದಿಗೆ, ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸುವ ಅಗತ್ಯವಿರುವ ಹಿನ್ನೆಲೆಯಲ್ಲಿ ಪ್ರಸಕ್ತ ಆಡಳಿತ ಮಂಡಳಿಯನ್ನು ಮುಂದುವರೆಸುವಂತೆ ಮಹಾಸಭೆಯು ಸರ್ವಾನುಮತದ ತೀರ್ಮಾನ ಕೈಗೊಂಡಿತು.

ಮುಂದಿನ ಯೋಜನೆ: ಇದುವರೆಗೆ ಭಕ್ತರ ಅನುಕೂಲಕ್ಕಾಗಿ ಸುಸಜ್ಜಿತ ರಸ್ತೆ, ತಡೆಗೋಡೆ, ಶೌಚಾಲಯ, ವಾಹನ ನಿಲುಗಡೆ ವ್ಯವಸ್ಥೆ, ನೀರಿನ ಸೌಲಭ್ಯ, ಶುಭ ಕಾರ್ಯಗಳಿಗೆ ಸಭಾಂಗಣ, ವಿಶೇಷ ಸಂದರ್ಭ ದೂರದಿಂದ ಬರುವ ಭಕ್ತರಿಗಾಗಿ ಅತಿಥಿ ಗೃಹ, ಸುರಕ್ಷ ವ್ಯವಸ್ಥೆಯೊಂದಿಗೆ ಪಾದರಕ್ಷೆ ಸ್ಥಳ, ಭೋಜನಾಲಯ, ಇತ್ಯಾದಿಯ ಮಾಹಿತಿ ನೀಡಿದರು. ಅಲ್ಲದೆ ಮುಂದೆ ಹೈಟೆಕ್ ಅಡುಗೆ ಮನೆ, ಮಹಾದ್ವಾರದೊಂದಿಗೆ ಮೆಟ್ಟಿಲು, ದೇವಾಲಯ ಹಿಂಭಾಗದ ಹೊರ ಪೌಳಿ, ಭಕ್ತರು ಉತ್ಸವಾದಿಗಳನ್ನು ಕುಳಿತು ನೋಡಲು ವ್ಯವಸ್ಥೆ, ನಿತ್ಯ ಪೂಜೆಗೆ ಪುಷ್ಪೋಧ್ಯಾನ, ಕಕ್ಕಬೆಯಲ್ಲಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ಸುಂದರ ಹೆಬ್ಬಾಗಿಲಿನ ಮಹಾದ್ವಾರ ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಯಿತು.

ಅತಿಕ್ರಮಣಕ್ಕೆ ಆಕ್ರೋಶ: ಪಾಡಿ ಶ್ರೀ ಇಗ್ಗುತಪ್ಪ ದೇವಾಲಯಕ್ಕೆ ಸಂಬಂಧಿಸಿದ ಜಾಗವನ್ನು ಅನೇಕರು ಅತಿಕ್ರಮಿಸಿಕೊಂಡಿರುವ ಬಗ್ಗೆ ಇಂದಿನ ಮಹಾಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಗೊಂಡಿತು. ರಾಜ್ಯ ಕಂದಾಯ ಸಚಿವರ ಸಹಿತ ಜಿಲ್ಲಾಧಿಕಾರಿಗಳಿಗೆ ಭಕ್ತಜನ ಸಂಘದಿಂದ ಅನೇಕ ಬಾರಿ ,ಮನವಿ ಸಲ್ಲಿಸಿದರೂ, ಯಾವದೇ ಸ್ಪಂದನ ಲಭಿಸಿಲ್ಲವೆಂದು ಅಧ್ಯಕ್ಷ ಜೋಯಪ್ಪ ಹಾಗೂ ಉಪಾಧ್ಯಕ್ಷ ಡಾಲಿ ಸಭೆಯ ಗಮನ ಸೆಳೆದರು.

ಉಪ ಸಮಿತಿ ರಚನೆ: ಈ ಸಂದರ್ಭ ದೇವಾಲಯದ ಜಾಗ ಈಗಾಗಲೇ ಅತಿಕ್ರಮಣಗೊಂಡು ಕೆಲವರು ತೋಟ ಮಾಡಿದ್ದು, ಇನ್ನು ಕೂಡ ಮಲ್ಮಬೆಟ್ಟ ಸುತ್ತ ಮುತ್ತ ಅನೇಕರು ಮತ್ತೆ ಮತ್ತೆ ಅತಿಕ್ರಮಣ ಮುಂದುವರೆಸಿರುವ ಬಗ್ಗೆ ತೀವ್ರ ಚರ್ಚೆ ನಡೆದು ಗಂಭೀರವಾಗಿ ಪರಿಗಣಿಸಲು ನಿರ್ಣಯಿಸಲಾಯಿತು.

ಈ ಸಂಬಂಧ ಸಂಚಾಲಕರಾಗಿ ಅಂಜಪರವಂಡ ಚೋಮಣಿ ಅವರ ನೇತೃತ್ವದಲ್ಲಿ ಕುಂಡ್ಯೊಳಂಡ ರಮೇಶ ಮುದ್ದಯ್ಯ, ಮಾರ್ಚಂಡ ಅಯ್ಯಪ್ಪ, ಕೇಟೋಳಿರ ಕುಟ್ಟಪ್ಪ, ನಂಬುಡಮಂಡ ಅಯ್ಯಪ್ಪ, ಉದಿಯಂಡ ಮೋಹನ್, ಬಡಕಡ ದೀನ ಪೂವಯ್ಯ, ಕಲ್ಯಾಟಂಡ ಮುತ್ತಪ್ಪ, ಬೊಳಿಯಾಡಿರ ಸುಬ್ರಮಣಿ, ಕಲಿಯಂಡ ಹ್ಯಾರಿ, ಪರದಂಡ ಸದಾ ನಾಣಯ್ಯ, ಕಲಿಯಂಡ ರಘು ತಮ್ಮಯ್ಯ ಕೋಲೆಯಂಡ ಅಶೋಕ್, ಅಂಜಪರವಂಡ ಕುಶಾಲಪ್ಪ, ಕಲ್ಯಾಟಂಡ ಅರುಣ ಈ ಮೇಲಿನ 15 ಮಂದಿಯ ಸಮಿತಿ ರಚಿಸಲಾಯಿತು.

ದೇವಾಲಯದ ಅಭಿವೃದ್ಧಿ ಹಾಗೂ ಮುಂದಿನ ಯೋಜನೆಗಳ ಕುರಿತು ನÀಡೆದ ಸಭೆಯಲ್ಲಿ ಭಕ್ತಜನ ಸಂಘದ ಸಲಹಾ ಸಮಿತಿ ಪ್ರಮುಖರುಗಳಾದ ‘ಶಕ್ತಿ’ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ, ‘ಬ್ರಹ್ಮಗಿರಿ’ ಸಂಪಾದಕ ಯು.ಎಂ. ಪೂವಯ್ಯ, ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಪರದಂಡ ರಾಜಪ್ಪ, ಪರದಂಡ ಸೋಮಣ್ಣ, ಬಾಳೆಯಂಡ ಅಶೋಕ್, ಕಲಿಯಂಡ ಮುತ್ತಪ್ಪ, ಪರದಂಡ ಕಾವೇರಪ್ಪ, ಕೇಟೋಳಿರ ಸೋಮಣ್ಣ, ಕೇಟೋಳಿರ ಕುಟ್ಟಪ್ಪ, ಪಾಂಡಂಡ ನರೇಶ, ಕಲಿಯಂಡ ಸುರ ನಾಣಯ್ಯ, ಕಲಿಯಂಡ ಸುನಂದ, ಪಾರುಪತ್ತೆಗಾರ ಪ್ರಿನ್ಸ್ ತಮ್ಮಪ್ಪ, ಅಂಜಪರವಂಡ ಕುಶಾಲಪ್ಪ, ಅಣ್ಣಾಡಳಿಯಂಡ ದಿಲೀಪ್, ಉದಿಯಂಡ ಮೋಹನ್, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕಲಿಯಂಡ ಹ್ಯಾರಿ, ಹಿರಿಯರಾದ ಪರದಂಡ ಚಂಗಪ್ಪ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡು ಪ್ರಮುಖ ವಿಷಯಗಳ ಪ್ರಸ್ತಾವನೆಯೊಂದಿಗೆ ಮಹಾಸಭೆಯಲ್ಲಿ ಗಮನ ಸೆಳೆದರು. ಮುಂದಿನ ಅವಧಿಗೆ ಸೇವೆಗಾಗಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಎಲ್ಲರ ಸಹಕಾರ ಕೋರಿದರು.

ವಿಶೇಷವಾಗಿ ದೇವಾಲಯದಲ್ಲಿ ನಡೆಯುವ ಶನಿವಾರ ಹಾಗೂ ಬುಧವಾರದ ತುಲಾಭಾರ ಸೇವೆಗೆ ಭಕ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವದು, ಈ ದಿನಗಳಲ್ಲಿ ಇತರ ಶುಭ ಕಾರ್ಯಗಳನ್ನು ಹಮ್ಮಿಕೊಳ್ಳದಿರುವದು, ಅರ್ಚಕರಿಂದ ಪೂಜಾ ಸಮಯ ಪಾಲನೆ, ಅನ್ನದಾನ ವೇಳೆ ಕಟ್ಟುಪಾಡುಗಳಿಗೆ ನಿಗಾವಹಿಸುವಂತೆ ಸಲಹೆ ನೀಡಲಾಯಿತು. ಪ್ರವಾಸಿಗರ ಬಗ್ಗೆ ಮತ್ತು ವಸ್ತ್ರ ಸಂಹಿತೆ ಬಗ್ಗೆ ಪಾರುಪತ್ತೆಗಾರರು ಹಾಗೂ ತಕ್ಕರು ಕಾಳಜಿ ವಹಿಸಲು ಕೋರಲಾಯಿತು. ಖಜಾಂಚಿ ನಂಬುಡಮಂಡ ಸುಬ್ರಮಣಿ ವಂದಿಸಿದರು.