ಶ್ರೀಮಂಗಲ, ಗೋಣಿಕೊಪ್ಪ, ನ. 14: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಗಾಂಧಿ ಪ್ರತಿಮೆಯ ಎದುರು ನಡೆದ 14 ನೇ ದಿನದ ಪ್ರತಿಭಟನೆಯಲ್ಲಿ ಸುಮಾರು 12 ಕ್ಕೂ ಅಧಿಕ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ಪ್ರತಿಭಟಿಸಿ ಕಂದಾಯ ಪರಿವೀಕ್ಷಕ ರಾಮಕೃಷ್ಣ ಅವರಿಗೆ ಮನವಿ ಪತ್ರ ಸಲ್ಲಿಸಿ ಸರ್ಕಾರ ಸ್ಪಂದಿಸುವಂತೆ ಒತ್ತಾಯಿಸಲಾಯಿತು.
ಕಳ್ಳಿಚಂಡ ಕುಟುಂಬದ ಸದಸ್ಯರುಗಳು, ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು, ಬಾಳೆಲೆ ಕೊಡವ ಸಮಾಜ, ಬೆಕ್ಕೆಸೊಡ್ಲೂರು ಸ್ತ್ರಿ ಶಕ್ತಿ ಸಂಘ, ಪೊನ್ನಂಪೇಟೆ ಮಹಿಳಾ ಸಮಾಜ, ಕಾಟ್ರಕೊಲ್ಲಿ ಬೈರವ ಮಹಿಳಾ ಸ್ವಸಹಾಯ ಸಂಘ, ಮಂಜುನಾಥ ಮಹಿಳಾ ಸ್ವಸಹಾಯ ಸಂಘ, ಸುರಕ್ಷಾ ಸ್ವಸಹಾಯ ಸಂಘ ಶಿವ ಕಾಲೋನಿ, ಹಿರಿಯ ನಾಗರಿಕ ವೇದಿಕೆ ಪ್ರಮುಖರುಗಳು ಪಾಲ್ಗೊಂಡಿದ್ದರು. ಬಾಳೆಲೆ ಕೊಡವ ಸಮಾಜ, ನಿಟ್ಟೂರು, ಪೊನ್ನಪ್ಪಸಂತೆ ಗ್ರಾಮಗಳಿಂದ ವಾಹನ ಜಾಥಾದ ಮುಖಾಂತರ ಆಗಮಿಸಿದ ಸಾರ್ವಜನಿಕರು ಬೆಂಬಲವನ್ನು ವ್ಯಕ್ತಪಡಿಸಿದರು.
ಈ ಸಂದರ್ಭ ಕಳ್ಳಿಚಂಡ ಕುಟುಂಬದ ಪರವಾಗಿ ವಿಷ್ಣು ಕಾರ್ಯಪ್ಪ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಯಾಗುವವರೆಗೆ ನಿರಂತರ ಹೋರಾಟ ಮಾಡುವ ನಿಟ್ಟಿನಲ್ಲಿ ಫೆಡರೇಷನ್ ಆಫ್ ಕೊಡವ ಸಮಾಜ ಹಾಗೂ ಕುಟ್ಟ ಕೊಡವ ಸಮಾಜದ ವತಿಯಿಂದ ಸಂಪೂರ್ಣ ಬೆಂಬಲವನ್ನು ನೀಡಲಾಗುವದು ಎಂದರು.
ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಗೆ ಬೃಹತ್ ಮಟ್ಟದ ಸಮಾವೇಶ ಮಾಡುವದರ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಅಧಿವೇಶನ ನಡೆಯುತ್ತಿದ್ದು ಈ ಬಗ್ಗೆ ಶಾಸಕರು ಹಾಗೂ ಎಂಎಲ್ಸಿಗಳು ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದೆ. ಸಲ್ಲಿಸಿಯೂ ಈ ಬಗ್ಗೆ ಸರ್ಕಾರ ನೀಡಲಾಗುವದು ಎಂದರು.
ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಗೆ ಬೃಹತ್ ಮಟ್ಟದ ಸಮಾವೇಶ ಮಾಡುವದರ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಅಧಿವೇಶನ ನಡೆಯುತ್ತಿದ್ದು ಈ ಬಗ್ಗೆ ಶಾಸಕರು ಹಾಗೂ ಎಂಎಲ್ಸಿಗಳು ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದೆ. ಸಲ್ಲಿಸಿಯೂ ಈ ಬಗ್ಗೆ ಸರ್ಕಾರ
ನೀಡಲಾಗುವದು ಎಂದರು.
ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ ಮಾತನಾಡಿ, ಪೊನ್ನಂಪೇಟೆ ತಾಲೂಕು ರಚನೆಗೆ ಬೃಹತ್ ಮಟ್ಟದ ಸಮಾವೇಶ ಮಾಡುವದರ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ. ಅಧಿವೇಶನ ನಡೆಯುತ್ತಿದ್ದು ಈ ಬಗ್ಗೆ ಶಾಸಕರು ಹಾಗೂ ಎಂಎಲ್ಸಿಗಳು ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದೆ. ಸಲ್ಲಿಸಿಯೂ ಈ ಬಗ್ಗೆ ಸರ್ಕಾರ ಪ್ರತಿಯೊಬ್ಬರಿಗೂ ಇದರ ಅನುಕೂಲ ವಾಗಲಿದೆ. ಸರ್ಕಾರ ಇತರೆಡೆ ರಾಜಕೀಯ ಲೆಕ್ಕಚಾರದಿಂದ ಬೇಡಿಕೆ ಸಲ್ಲಿಸದಿದ್ದರೂ ತಾಲೂಕು ರಚನೆಗೆ ಮುಂದಾಗಿದೆ. ಆದರೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕು ರಚನೆಗೆ ಬೇಡಿಕೆ ಸಲ್ಲಿಸಿದರೂ ತಾಲೂಕು ರಚನೆಗೆ ಮುಂದಾಗದಿ ರುವದು ಖಂಡನೀಯ ಎಂದು ಕಿಡಿಕಾರಿದರು.
ಗೋಣಿಕೊಪ್ಪಲು ಆರ್ಎಂಸಿ ಸದಸ್ಯ ಮಾಪಂಗಡ ಸುಜಯ್, ಬಾಳೆಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ, ಜಿ.ಪಂ ಸದಸ್ಯ ಬಾನಂಡ ಪೃಥ್ಯು, ಆರ್ಎಂಸಿ ಸದಸ್ಯ ಆದೇಂಗಡ ವಿನು ಚಂಗಪ್ಪ, ಕಾನೂರು ಗ್ರಾ.ಪಂ ಅಧ್ಯಕ್ಷೆ ಲಲಿತಾಕುಮಾರಿ, ಅರಮಣಮಾಡ ರಂಜನ್, ಸುಳ್ಳಿಮಾಡ ಶಿಲ್ಪ ಮಾತನಾಡಿ ತಾಲೂಕು ರಚನೆಗೆ ಒತ್ತಾಯಿಸಿದರು.
ಈ ಸಂದರ್ಭ ಕಳ್ಳಿಚಂಡ ಕುಟುಂಬದ ಪಟ್ಟೆದಾರ ಬೋಪಯ್ಯ, ಸಾರ್ವಜನಿಕ ಹಿತರಕ್ಷಣ ಸಮಿತಿಯ ಕಾರ್ಯದರ್ಶಿ ಅರಮಣಮಾಡ ಸತೀಶ್, ಪೊನ್ನಂಪ್ಪಸಂತೆ ಗ್ರಾ.ಪಂ ಉಪಾಧ್ಯಕ್ಷೆ ತನುಜ, ನಿಟ್ಟೂರು ಗ್ರಾ.ಪಂ ಉಪಾಧ್ಯಕ್ಷ ಪೋರಂಗಡ ಪವನ್ ಚಿಟ್ಟಿಯಪ್ಪ, ಜಿ.ಪಂ ಸದಸ್ಯ ಸಿ.ಕೆ.ಬೋಪಣ್ಣ, ನಲ್ಲೂರು ಯುವಕ ಸಂಘದ ಅಧ್ಯಕ್ಷ ತೀತಮಾಡ ರಾಜ, ಚಾಮುಂಡೇಶ್ವರಿ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಕೊಕ್ಕೇಂಗಡ ಮಂಜು, ಪೊನ್ನಂಪೇಟೆ ಮಹಿಳಾ ಸಮಾಜದ ಉಪಾಧ್ಯಕ್ಷೆ ಕಾವೇರಮ್ಮ ಖಜಾಂಚಿ ಪಾರ್ವತಿ, ಕಾನೂರು ಗ್ರಾ.ಪಂ ಸದಸ್ಯರಾದ ಸುಳ್ಳಿಮಾಡ ದೀಪಕ್, ಪಿ.ಸಿ.ಚೋಮ, ತಾ.ಪಂ. ಸದಸ್ಯೆ ಆಶಾ ಪೂಣಚ್ಚ, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಸುಮಿತಾ ಗಣೇಶ್, ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಮತ್ರಂಡ ದಿಲ್ಲು, ಪೊನ್ನಂಪೇಟೆ ಗ್ರಾ.ಪಂ ಸದಸ್ಯ ಮೂಕಳೇರ ಲಕ್ಷ್ಮಣ, ಪೊನ್ನಂಪೇಟೆ ತಾಲೂಕು ರಚನಾ ಸಮಿತಿಯ ಸಂಚಾಲಕ ಮಾಚಿಮಾಡ ರವೀಂದ್ರ, ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.