ಸಿದ್ದಾಪುರ, ನ. 14: ಸಮೀಪದ ಅಮ್ಮತ್ತಿಯ ನಾಟ್ಯಾಂಜಲಿ ನೃತ್ಯ ಶಾಲಾ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯ ಮಟ್ಟದ ಸಾಧನೆ ಮಾಡಿ ಗಮನ ಸೇಳೆದಿದ್ದಾರೆ.
ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಕಲಾಶ್ರೀ ನೃತ್ಯ ಸ್ವರ್ಧೆಯಲ್ಲಿ ಶ್ರೀಲಕ್ಷ್ಮೀ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ಆಯೋಜಿಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವೈಷ್ಣವಿ (ಶೇ. 85) ಹಾಗೂ ನಿಶಿ ಸರಸ್ವತಿ (ಶೇ. 79) ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.
ಗುರು ಹೇಮಾವತಿ ಕಾಂತ ರಾಜ್ ಹಾಗೂ ವಿದ್ವಾನ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕಳೆದ 15 ವರ್ಷಗಳಿಂದಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಗೀತ ಹಾಗೂ ನೃತ್ಯಾಭ್ಯಾಸ ತರಬೇತಿ ಕಲಿಸುತ್ತಿದ್ದಾರೆ.
ನೃತ್ಯಶಾಲಾ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಮಟ್ಟದ ಕಾರ್ಯ ಕ್ರಮಗಳಲ್ಲಿ ಭರತನಾಟ್ಯ, ಸೋಲೋ, ಡಾನ್ಸ್ ಡಾನ್ಸ್, ಸಂಗೀತ, ಕೀ ಬೋರ್ಡ್, ಪಾಶ್ಚಾತ್ಯ ನೃತ್ಯ, ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.
ಗುರು ಹೇಮಾವತಿ ಕಾಂತ ರಾಜ್ ಹಾಗೂ ವಿದ್ವಾನ್ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಕಳೆದ 15 ವರ್ಷಗಳಿಂದಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಗೀತ ಹಾಗೂ ನೃತ್ಯಾಭ್ಯಾಸ ತರಬೇತಿ ಕಲಿಸುತ್ತಿದ್ದಾರೆ.
ನೃತ್ಯಶಾಲಾ ವಿದ್ಯಾರ್ಥಿಗಳು ಜಿಲ್ಲೆ ಹಾಗೂ ರಾಜ್ಯಮಟ್ಟದ ಕಾರ್ಯ ಕ್ರಮಗಳಲ್ಲಿ ಭರತನಾಟ್ಯ, ಸೋಲೋ, ಡಾನ್ಸ್ ಡಾನ್ಸ್, ಸಂಗೀತ, ಕೀ ಬೋರ್ಡ್, ಪಾಶ್ಚಾತ್ಯ ನೃತ್ಯ, ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಸಾಂಸ್ಕøತಿಕ ಸ್ವರ್ಧೆ ಕಾರ್ಯಕ್ರಮಗಳಲ್ಲಿ ಶ್ರೀಲಕ್ಷ್ಮೀ , ಕಾವ್ಯಶ್ರೀ, ವೈಷ್ಣವಿ, ನಿಶಿ ಸರಸ್ವತಿ, ಶ್ವೇತಾ, ಜಯಸೂರ್ಯ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದಾರೆ
ಶಾಲೆಯ 40 ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಲ್ಲಿ ಭಾಗವಹಿಸಿ ತಾಲೂಕು ಮ್ತತು ಜಿಲ್ಲಾಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.