ಮಡಿಕೇರಿ, ನ. 14: ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಸುಳ್ಯದಲ್ಲಿ ಕೊಡಗಿನ ಹುತ್ತರಿಯ ಸೊಬಗು ಪಸರಿಸಿತು. ಸುಳ್ಯ ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೊಡಗಿನ ಸಂಸ್ಕøತಿಯ ಹುತ್ತರಿ ಹಬ್ಬದ ಆಚರಣೆ ಬಗ್ಗೆ ಅಲ್ಲಿನವರಿಗೆ ಪರಿಚಯಿಸಲಾಯಿತು. ಮಾಹಿತಿ, ಹುತ್ತರಿ ಹಬ್ಬದ ರೂಪಕದೊಂದಿಗೆ ಕಾರ್ಯಕ್ರಮ ಸೊಗಸಾಗಿ ಮೂಡಿಬಂತು.

ಸಂಸನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಶಕ್ತಿ ದಿನಪತ್ರಿಕೆ ಉಪಸಂಪಾದಕ, ಅರೆಭಾಷೆ ಅಕಾಡೆಮಿ ಮಾಜಿ ಸದಸ್ಯ ಕುಡೆಕಲ್ ಸಂತೋಷ್ ಹುತ್ತರಿ ಆಚರಣೆಯ ಮಹತ್ವ, ಆಚರಣೆಯ ವಿಧಾನಗಳನ್ನು ತಿಳಿಸಿಕೊಟ್ಟರು. ಕೊಡಗಿನವರು ಕೃಷಿಕರಾಗಿದ್ದು, ಹುತ್ತರಿ ಕೂಡ ಕೃಷಿಗೆ ಸಂಬಂಧಪಟ್ಟಂತೆ ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಳ್ಳುವ ಸಾಂಪ್ರದಾಯಿಕ ಹಬ್ಬ ಹುತ್ತರಿ ಯಾಗಿದೆ. ಇದರೊಂದಿಗೆ ಕೈಲ್ ಮುಹೂರ್ತ ಹಾಗೂ ತುಲಾ ಸಂಕ್ರಮಣ ಕೊಡಗಿನ ಪ್ರಮುಖ ಹಬ್ಬವಾಗಿದೆ ಎಂದರು. ಹಬ್ಬಾಚರಣೆ, ಸಂಸ್ಕøತಿ, ಆಚಾರ ವಿಚಾರಗಳ ಬಗ್ಗೆ ಎಲ್ಲರೂ ತಿಳಿದುಕೊಂಡು ಮುಂದಿನ ಪೀಳಿಗೆಗೂ ಪರಿಚಯಿಸುವ ಕಾರ್ಯ ವನ್ನು ಎಲ್ಲರೂ ಮಾಡಬೇಕಿದೆ. ಸಾಹಿತ್ಯ, ಇತಿಹಾಸ, ದಾಖಲೆಗಳನ್ನು ಮನನ ಮಾಡಿಕೊಳ್ಳುವ ಮುಖೇನ ಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳುವಂತೆ ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ಕೋಳು ಮುಡಿಯನ ಅನಂತ್‍ಕುಮಾರ್, ಸುಳ್ಯ ಪರಿಸರದಲ್ಲಿ ಇಲ್ಲಿನ ವಿದ್ಯಾರ್ಥಿಗಳು, ವಿದ್ಯಾ ಸಂಸ್ಥೆಯೊಂದಿಗೆ ಸೇರಿಕೊಂಡು ಇಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿರುವದು ಶ್ಲಾಘನೀಯ. ಎಲ್ಲರೂ ಸಂಸ್ಕøತಿಯ ಅರಿವಿನೊಂದಿಗೆ ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕೆಂದರು.

ಪೋಷಕರ ಸಮಿತಿ ಅಧ್ಯಕ್ಷ ಯತೀಶ್ ಹಿರಿಯಡ್ಕ ಮಾತನಾಡಿ, ಕಾಲೇಜಿನಲ್ಲಿ ನಡೆಯುವಂತಹ ಎಲ್ಲ ಚಟುವಟಿಕೆಗಳಿಗೆ ಸಹಕಾರ ನೀಡಲಾಗುವದು. ಸಂಸ್ಕøತಿ, ಆಚಾರ, ವಿಚಾರಗಳ ಬಗ್ಗೆ ತಿಳಿದುಕೊಂಡರೆ ಮಾತ್ರ ಮತ್ತೋರ್ವರಿಗೆ ತಿಳಿ ಹೇಳಲು ಸಾಧ್ಯ. ಇಂತಹ ಉತ್ತಮ ಕಾರ್ಯಕ್ರಮಗಳು ಇನ್ನಷ್ಟು ಮೂಡಿ ಬರಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿಭಾಗದ ಪ್ರಾಂಶುಪಾಲ ಬಿ. ಉದಯಕೃಷ್ಣ ಅವರು ಕಾಲೇಜಿನಲ್ಲಿ ವಿವಿಧ ಆಚರಣೆಗಳ ಬಗ್ಗೆ ಕಾರ್ಯ ಕ್ರಮ ರೂಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು. ಇದರೊಂದಿಗೆ ವಿದ್ಯಾರ್ಥಿಗಳು ಶಿಸ್ತು ಮೈಗೂಡಿಸಿಕೊಳ್ಳುವದರೊಂದಿಗೆ ಉತ್ತಮ ಫಲಿತಾಂಶ ಹೊರತರಲು ಪ್ರಯತ್ನಿಸಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪೋಷಕರ ಸಮಿತಿ ಕಾರ್ಯದರ್ಶಿ ಗೀತಾ,