ಮಡಿಕೇರಿ, ನ. 15: ಐಚೆಟ್ಟೀರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಸೆಂಟರ್ ಆಶ್ರಯದಲ್ಲಿ ಗುಡ್ಡೆಹೊಸೂರು ಐಎನ್‍ಎಸ್ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ತಾ. 24 ರಿಂದ 26 ರವರೆಗೆ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ರೀಡಾ ಕೇಂದ್ರದ ಮುಖ್ಯಸ್ಥ ಐಚೆಟ್ಟೀರ ಪೊನ್ನಪ್ಪ ತಿಳಿಸಿದ್ದಾರೆ.

ತಾ. 25 ಮತ್ತು 26 ರಂದು 10, 14, 17, 19 ವರ್ಷದೊಳಗಿನ ಹಾಗೂ 35 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರ ವಿಭಾಗದಲ್ಲಿ ಸಿಂಗಲ್ಸ್, ಡಬಲ್ಸ್ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ಮಡಿಕೇರಿ, ನ. 15: ಐಚೆಟ್ಟೀರ ನರೇನ್ ಸುಬ್ಬಯ್ಯ ಸ್ಪೋಟ್ರ್ಸ್ ಸೆಂಟರ್ ಆಶ್ರಯದಲ್ಲಿ ಗುಡ್ಡೆಹೊಸೂರು ಐಎನ್‍ಎಸ್ ಸ್ಪೋಟ್ರ್ಸ್ ಸೆಂಟರ್‍ನಲ್ಲಿ ತಾ. 24 ರಿಂದ 26 ರವರೆಗೆ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕ್ರೀಡಾ ಕೇಂದ್ರದ ಮುಖ್ಯಸ್ಥ ಐಚೆಟ್ಟೀರ ಪೊನ್ನಪ್ಪ ತಿಳಿಸಿದ್ದಾರೆ.

ತಾ. 25 ಮತ್ತು 26 ರಂದು 10, 14, 17, 19 ವರ್ಷದೊಳಗಿನ ಹಾಗೂ 35 ವರ್ಷ ಮೇಲ್ಪಟ್ಟ ಪುರುಷ, ಮಹಿಳೆಯರ ವಿಭಾಗದಲ್ಲಿ ಸಿಂಗಲ್ಸ್, ಡಬಲ್ಸ್ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದೆ. ಪಂದ್ಯಾವಳಿಯಲ್ಲಿ ನೀಡಲಾಗುತ್ತದೆ. ಯುವಜನರನ್ನು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವಂತೆ ಮಾಡುವದರ ಮೂಲಕ ದುಶ್ಚಟದಿಂದ ದೂರ ಇರುವಂತೆ ಮಾಡುವ ಉದ್ದೇಶದಿಂದ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿದೆ. ವೃತ್ತಿಪರ ಆಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವೃತ್ತಿಪರ ಫುಟ್ಬಾಲ್, ಕ್ರಿಕೆಟ್ ತರಬೇತಿಗೆ ಚಾಲನೆ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಬ್ಯಾಡ್ಮಿಂಟನ್ ಆಟಕ್ಕೆ ಉತ್ತೇಜನ ನೀಡುವದು, ಜಿಲ್ಲೆಯ ಆಟಗಾರರ ನಡುವೆ ಸ್ಪರ್ಧೆ ಏರ್ಪಡಿ ಸುವದು, ಆಟಗಾರರ ಸಾಮಥ್ರ್ಯವನ್ನು ಒರೆಗೆ ಹಚ್ಚುವ ಉದ್ದೇಶದಿಂದ ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ.