ಶ್ರೀಮಂಗಲ, ನ. 15 : ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗ್ರಾ.ಪಂ ಆವರಣದ ಗಾಂಧಿ ಪ್ರತಿಮೆಯ ಹತ್ತಿರ ನಡೆಯುತ್ತಿರುವ 15ನೇ ದಿನದ ಪ್ರತಿಭಟನೆಯಲ್ಲಿ ಶ್ರೀ ಅಯ್ಯಪ್ಪ ಸ್ವ ಸಹಾಯ ಸಂಘ ಬಲ್ಯಮೂಂಡೂರು, ನಿಸರ್ಗ ಯುವತಿ ಮಂಡಳಿ ಪೊನ್ನಂಪೇಟೆ, ಇಗ್ಗುತ್ತಪ್ಪ ಕೊಡವ ಕೂಟ ಪೊನ್ನಂಪೇಟೆ, ಗೋಣಿಕೊಪ್ಪಲು ಮಹಿಳಾ ಸಮಾಜ, ನಾಲ್ಕೇರಿ ಗ್ರಾ.ಪಂ, ನಾಗರಿಕರ ವೇದಿಕೆ ಪೊನ್ನಂಪೇಟೆ, ಮತ್ತು ಮಾಜಿ ಎಂಎಲ್‍ಸಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಅರುಣ್ ಮಾಚಯ್ಯ, ಪ್ರತಿಭಟನಾ ಸ್ಥಳಕ್ಕೆ ಆಗಮಿಸುವದರ ಮೂಲಕ ಪೊನ್ನಂಪೇಟೆ ತಾಲೂಕು ರಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅರುಣ್ ಮಾಚಯ್ಯ ಈ ಹಿಂದೆ ಬ್ರೀಟಿಷ್ ಆಡಳಿತದಲ್ಲಿ ಪೊನ್ನಂಪೇಟೆ ಕ್‍ಗ್ಗಟ್ಟ್‍ನಾಡ್ ತಾಲೂಕ್ಕಾಗಿತ್ತು. ಸರ್ಕಾರ ಆ ಸ್ಥಾನ ಮಾನವನ್ನು ನೀಡಲಿ. ಹಲವು ದಶಕಗಳಿಂದ ಪೊನ್ನಂಪೇಟೆ ತಾಲೂಕು ಪುನರಚನೆಯಾಗಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ ಯಾವದೇ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಿಲ್ಲ. ವಾಸುದೇವ ಸಮಿತಿ ರಚನೆಯ ನಂತರ ವಿವಿಧ ಶ್ರೀಮಂಗಲ, ನ. 15 : ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಪೊನ್ನಂಪೇಟೆ ಗ್ರಾ.ಪಂ ಆವರಣದ ಗಾಂಧಿ ಪ್ರತಿಮೆಯ ಹತ್ತಿರ ನಡೆಯುತ್ತಿರುವ 15ನೇ ದಿನದ ಪ್ರತಿಭಟನೆಯಲ್ಲಿ ಶ್ರೀ ಅಯ್ಯಪ್ಪ ಸ್ವ ಸಹಾಯ ಸಂಘ ಬಲ್ಯಮೂಂಡೂರು, ನಿಸರ್ಗ ಯುವತಿ ಮಂಡಳಿ ಪೊನ್ನಂಪೇಟೆ, ಇಗ್ಗುತ್ತಪ್ಪ ಕೊಡವ ಕೂಟ ಪೊನ್ನಂಪೇಟೆ, ಗೋಣಿಕೊಪ್ಪಲು ಮಹಿಳಾ ಸಮಾಜ, ನಾಲ್ಕೇರಿ ಗ್ರಾ.ಪಂ, ನಾಗರಿಕರ ವೇದಿಕೆ ಪೊನ್ನಂಪೇಟೆ, ಮತ್ತು ಮಾಜಿ ಎಂಎಲ್‍ಸಿ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಅರುಣ್ ಮಾಚಯ್ಯ, ಪ್ರತಿಭಟನಾ ಸ್ಥಳಕ್ಕೆ ಆಗಮಿಸುವದರ ಮೂಲಕ ಪೊನ್ನಂಪೇಟೆ ತಾಲೂಕು ರಚನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಅರುಣ್ ಮಾಚಯ್ಯ ಈ ಹಿಂದೆ ಬ್ರೀಟಿಷ್ ಆಡಳಿತದಲ್ಲಿ ಪೊನ್ನಂಪೇಟೆ ಕ್‍ಗ್ಗಟ್ಟ್‍ನಾಡ್ ತಾಲೂಕ್ಕಾಗಿತ್ತು. ಸರ್ಕಾರ ಆ ಸ್ಥಾನ ಮಾನವನ್ನು ನೀಡಲಿ. ಹಲವು ದಶಕಗಳಿಂದ ಪೊನ್ನಂಪೇಟೆ ತಾಲೂಕು ಪುನರಚನೆಯಾಗಬೇಕೆಂಬ ಕೂಗು ಕೇಳಿ ಬರುತ್ತಿದ್ದರೂ ಯಾವದೇ ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆಯನ್ನು ನಡೆಸಿಲ್ಲ. ವಾಸುದೇವ ಸಮಿತಿ ರಚನೆಯ ನಂತರ ವಿವಿಧ ಜಿಲ್ಲಾ ಉಸ್ತುವರಿ ಸಚಿವ ಸೀತಾರಾಮ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಲಾಗಿದೆ. ತಾಲೂಕು ರಚನೆಯ ಬಗ್ಗೆ ಸಕರಾತ್ಮಕವಾಗಿ ಸ್ಪಂದನ ಇದೆ ಎಂದು ತಿಳಿಸಿದರು. ಅದಿವೇಶನ ನಡೆಯುತ್ತಿರುವದರಿಂದ ಮುಖ್ಯಮಂತ್ರಿಗಳ ದಿನಾಂಕವನ್ನು ನಿಗದಿಪಡಿಸಿ ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ನಿಯೋಗವನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ಭರವಸೆ ನೀಡಿದರು.

ನಾಲ್ಕೇರಿ ಗ್ರಾ.ಪಂ ಸದಸ್ಯೆ ಶಾಂತಿ ಮಾತನಾಡಿ ಪೊನ್ನಂಪೇಟೆ ತಾಲೂಕು ರಚನೆಯಾದರೆ ಈ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ತುಂಬಾ ಉಪಕಾರವಾಗುತ್ತದೆ. ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಸರ್ಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ಪೊನ್ನಂಪೇಟೆ ಮತ್ತು ವೀರಾಜಪೇಟೆ ಎರಡು ಕಡೆ ಅಲೆದಾಡುವ ಪರಿಸ್ಥಿತಿ ನಿಮಾರ್ಣವಾಗಿದೆ. ಕೂಲಿ ಕಾರ್ಮಿಕರಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ. ಪೊನ್ನಂಪೇಟೆ ತಾಲೂಕು ರಚನೆಯಾದರೆ ಈ ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಕಾಣುತ್ತೇವೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮತ್ತು ಈ ಭಾಗದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಘ ಸಂಸ್ಥೆಗಳು ಈ ಪ್ರತಿಭಟನೆಯಲ್ಲಿ ಸಂಪೂರ್ಣವಾಗಿ ಭಾಗವಹಿಸುವದರ ಮೂಲಕ ಬೃಹತ್ ಮಟ್ಟದ ಪ್ರತಿಭಟನೆಯನ್ನು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಇಗ್ಗುತ್ಪಪ್ಪ ಕೊಡವ ಕೂಟದ ಅಳಮೇಂಗಡ ಶಂಭು ಗಣಪತಿ ಮಾತನಾಡಿ ನಮ್ಮ ಪ್ರತಿಭಟನೆಗೆ ಜನಪ್ರತಿನಿಧಿಗಳು ಹೆಚ್ಚು ಸ್ಪಂದನೆಯನ್ನು ನೀಡಬೇಕಾಗಿದೆ. ಒಂದು ವೇಳೆ ಸರ್ಕಾರ ಪೊನ್ನಂಪೇಟೆ ತಾಲೂಕು ರಚನೆಗೆ ಸ್ಪಂದನೆಯನ್ನು ನೀಡದಿದ್ದರೆ ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಅಣಿಯಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭ ಶ್ರೀ ಅಯ್ಯಪ್ಪ ಸ್ವಸಹಾಯ ಸಂಘದ ಅಧ್ಯಕ್ಷ ಮಾಚಿಮಾಡ ಡಾಲಿ ಮಂದಣ್ಣ, ಕಾರ್ಯದರ್ಶಿ ದೇಯಂಡ ಕಾಶಿ ಅಣ್ಣಯ್ಯ, ನಾಲ್ಕೇರಿ ಗ್ರಾ.ಪಂ ಸದಸ್ಯರಾದ ರಾಮ, ಬೋಜಿ, ಮೀನಾ, ನಿಸರ್ಗ ಯುವತಿ ಮಂಡಳಿಯ ಅಧ್ಯಕ್ಷೆ ರೇಖಾ ಶ್ರೀಧರ್, ಕಾರ್ಯದರ್ಶಿ ಜಯಂತಿ, ಶೀಬಾ, ಇಗ್ಗುತ್ತಪ್ಪ ಕೊಡವ ಸಂಘದ ಅಧ್ಯಕ್ಷ ವಸಂತ್ ತಿಮ್ಮಯ್ಯ, ಕಾರ್ಯದರ್ಶಿ ಕಾಂತರಾಜ್, ಮಲ್ಲೇಂಗಡ ಮಧು, ಕೋದೆಂಗಡ ಸುರೇಶ್, ಪುಚ್ಚಿಮಾಡ ಪದ್ಮಿನಿ ತಿಮ್ಮಯ್ಯ, ಮೂಕಳೇರ ಶಾರದ, ಮಲ್ಲೇಂಗಡ ಜಮುನಾ, ಪೊನ್ನಂಪೇಟೆ ಗ್ರಾ.ಪಂ ಸದಸ್ಯ ಮೂಕಳೇರ ಲಕ್ಷ್ಮಣ, ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಗೋಣಿಕೊಪ್ಪ ಮಹಿಳಾ ಸಮಾಜದ ಪ್ರಮುಖರಾದ ಕೊಣಿಯಂಡ ಬೋಜಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಮುಂದಿನ ದಿನ ಪ್ರತ್ಯೇಕವಾಗಿ ಪ್ರತಿಭಟನೆಯನ್ನು ಮಾಡಲಾಗುವದು ಎಂದು ತಿಳಿಸಿದರು.