ಗೋಣಿಕೊಪ್ಪ ವರದಿ, ನ. 15: ನಿವೇಶನ ಖರೀದಿಸುವಾಗ ಬಡಾವಣೆಗಳಲ್ಲಿ ಕಡ್ಡಾಯವಾಗಿ ಮೂಲಭೂತ ಸೌಲಭ್ಯಕ್ಕೆ ಜಾಗ ಮೀಸಲಿರಿಸಿರುವ ಬಗ್ಗೆ ಮಾಹಿತಿಯನ್ನು ಪಡೆದು ಖರೀದಿಸುವಂತೆ ಪಿಡಿಒ ಚಂದ್ರಮೌಳಿ ಹೇಳಿದರು.

ಗ್ರಾ.ಪಂ. ಹಳೆಯ ಕಟ್ಟಡ ಸಭಾಂಗಣದಲ್ಲಿ ಅಧ್ಯಕ್ಷೆ ಎಂ. ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಎದುರಿಸುತ್ತಿರುವ ಸಮಸ್ಯೆ ಹಂಚಿಕೊಂಡಾಗ ಅವರು ಮಾತನಾಡಿದರು.

ಬಡಾವಣೆಗಳಲ್ಲಿ ಶೇ.40 ರಷ್ಟು ಭಾಗವನ್ನು ಬಡಾವಣೆಯ ಮೂಲಭೂತ ಸೌಕರ್ಯಕ್ಕಾಗಿ ಕಡ್ಡಾಯವಾಗಿ ಬಡಾವಣೆಯ ಮಾಲೀಕರು ನೀಡಬೇಕಿದೆ. ಆದರೆ, ಈ ರೀತಿ ಪಾಲಿಸದೆ ರಸ್ತೆ, ಚರಂಡಿ, ಕುಡಿಯುವ ನೀರು ಇಂತಹವುಗಳಿಗೆ ಜಾಗ ಕಲ್ಪಿಸದೆ ಇರುವದರಿಂದ ಜಾಗ ಖರೀದಿಸಿದ ನಂತರ ತೊಂದರೆ ಅನುಭವಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸೈಟ್ ಖರೀದಿಸುವಾಗ ಪಂಚಾಯ್ತಿ ಯಿಂದ ಕಡ್ಡಾಯವಾಗಿ ಮಾಹಿತಿ ಪಡೆದುಕೊಳ್ಳಬೇಕು. ಬಡಾವಣೆ ಮಾಲೀಕರು ಕೂಡ ಕಡ್ಡಾಯವಾಗಿ ಮೂಲಭೂತ ವ್ಯವಸ್ಥೆಗೆ ಜಾಗ ನೀಡುವಂತಾಗಬೇಕು ಎಂದು ಹೇಳಿದರು.

ಪಟ್ಟಣದ ಬೈಪಾಸ್ ರಸ್ತೆ ಬದಿಗಳಲ್ಲಿ ಅನಧಿಕೃತವಾಗಿ ಮಾಂಸ, ಮೀನು ಅಂಗಡಿ ಮಳಿಗೆ ತೆರೆದಿರುವ ಬಗ್ಗೆ ಪಂಚಾಯಿತಿ ಸದಸ್ಯರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ ತೆರವಿಗೆ ಆಗ್ರಹಿಸಿದರು. ಅನಧಿಕೃತವಾಗಿ ಮಳಿಗೆ ತೆರೆದಿರುವಾಗ ಪಂಚಾಯಿತಿ ಅದನ್ನು ಮುಟ್ಟುಗೋಲು ಹಾಕಲು ಮುಂದಾಗಬೇಕು. ಇದರಿಂದ ರಸ್ತೆ ಹಾಗೂ ಸಮೀಪದ ತೋಡು ಮಾಲಿನ್ಯಗೊಳ್ಳುತ್ತಿದೆ ಎಂದು ಆರೋಪಿಸಿದರು. ಇದೇ ವಿಷಯದಲ್ಲಿ ಗಂಭೀರ ಚರ್ಚೆ ನಡೆದು ದೂರು ಬಂದರೆ ಕ್ರಮಕ್ಕೆ ಮುಂದಾಗುವದಾಗಿ ಪಿಡಿಒ ಹೇಳಿದರು.

ಒಂದು ವರ್ಷ ಕಳೆದು ಗ್ರಾಮ ಸಭೆ ನಡೆಯುತ್ತಿದೆ. ಇದರೊಂದಿಗೆ ಜಮಾಬಂದಿ ಸಭೆ ಕೂಡ ಆಯೋಜಿಸಿರುವದರಿಂದ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಮಯವಾಕಾಶ ಸಿಗುತ್ತಿಲ್ಲ. ಜಮಾಬಂದಿ ಸಭೆ ರದ್ದುಗೊಳಿಸಬೇಕು ಎಂದು ಹೆಚ್.ಕೆ. ಜಗದೀಶ್ ಸೇರಿದಂತೆ ಸ್ಥಳೀಯರ ಒತ್ತಾಯದಂತೆ ಜಮಾಬಂದಿ ಸಭೆ ರದ್ದುಗೊಳಿಸಿ ಗ್ರಾಮಸಭೆ ನಡೆಸಲಾಯಿತು.

ದುಬಾರಿ ದರದಲ್ಲಿ ಮೀನು ಮಾರಾಟ ಮಾಡುವದರಿಂದ ಮೀನು ಪ್ರಿಯರು ನಷ್ಟ ಅನುಭವಿಸುವಂತಾಗಿದೆ. ಸುತ್ತಲಿನ ಗ್ರಾಮ ಪಂಚಾಯಿತಿ

ತೆರವಿಗೆ ಆಗ್ರಹಿಸಿದರು. ಅನಧಿಕೃತವಾಗಿ ಮಳಿಗೆ ತೆರೆದಿರುವಾಗ ಪಂಚಾಯಿತಿ ಅದನ್ನು ಮುಟ್ಟುಗೋಲು ಹಾಕಲು ಮುಂದಾಗಬೇಕು. ಇದರಿಂದ ರಸ್ತೆ ಹಾಗೂ ಸಮೀಪದ ತೋಡು ಮಾಲಿನ್ಯಗೊಳ್ಳುತ್ತಿದೆ ಎಂದು ಆರೋಪಿಸಿದರು. ಇದೇ ವಿಷಯದಲ್ಲಿ ಗಂಭೀರ ಚರ್ಚೆ ನಡೆದು ದೂರು ಬಂದರೆ ಕ್ರಮಕ್ಕೆ ಮುಂದಾಗುವದಾಗಿ ಪಿಡಿಒ ಹೇಳಿದರು.

ಒಂದು ವರ್ಷ ಕಳೆದು ಗ್ರಾಮ ಸಭೆ ನಡೆಯುತ್ತಿದೆ. ಇದರೊಂದಿಗೆ ಜಮಾಬಂದಿ ಸಭೆ ಕೂಡ ಆಯೋಜಿಸಿರುವದರಿಂದ ಗ್ರಾಮದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಮಯವಾಕಾಶ ಸಿಗುತ್ತಿಲ್ಲ. ಜಮಾಬಂದಿ ಸಭೆ ರದ್ದುಗೊಳಿಸಬೇಕು ಎಂದು ಹೆಚ್.ಕೆ. ಜಗದೀಶ್ ಸೇರಿದಂತೆ ಸ್ಥಳೀಯರ ಒತ್ತಾಯದಂತೆ ಜಮಾಬಂದಿ ಸಭೆ ರದ್ದುಗೊಳಿಸಿ ಗ್ರಾಮಸಭೆ ನಡೆಸಲಾಯಿತು.

ದುಬಾರಿ ದರದಲ್ಲಿ ಮೀನು ಮಾರಾಟ ಮಾಡುವದರಿಂದ ಮೀನು ಪ್ರಿಯರು ನಷ್ಟ ಅನುಭವಿಸುವಂತಾಗಿದೆ. ಸುತ್ತಲಿನ ಗ್ರಾಮ ಪಂಚಾಯಿತಿ ನೀಡುವಾಗ ಎಸ್ಸಿ, ಎಸ್ಟಿ, ವಿಕಲ ಚೇತನರಿಗೆ ಮಳಿಗೆ ನೀಡುವ ಮೂಲಕ ಅವರ ಬೆಳಣಿಗೆಗೆ ಸ್ಪಂಧಿಸಬೇಕು ಎಂದು ಡಿಎಸ್‍ಎಸ್ ಸಂಚಾಲಕ ಪರಶುರಾಮ್ ಒತ್ತಾಯಿಸಿದರು.

ಸೀತಾ ಕಾಲೋನಿಯಲ್ಲಿ ಕಸ ವಿಲೇವಾರಿಗೆ ನಿರ್ಮಾಣ ಹಂತದಲ್ಲಿರುವ ಘಟಕದ ಕಾಮಗಾರಿ ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ನಂತರ ಪಟ್ಟಣದಲ್ಲಿ ಕಸ ಸಮಸ್ಯೆ ಉದ್ಭವಿಸುವದಿಲ್ಲ ಎಂದು ಪಿಡಿಒ ಮಾಹಿತಿ ನೀಡಿದರು. ಪಟ್ಟಣದಲ್ಲಿ ನಡೆಯುತ್ತಿರುವ ಅಕ್ರಮ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಸಭೆಯಲ್ಲಿ ಹಲವು ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು. ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು. ಕಳೆದ ಗ್ರಾಮ ಸಭೆಯಲ್ಲಿ ಪಂಚಾಯಿತಿ ಸದಸ್ಯರ ನಡುವೆ ಒಮ್ಮತವಿಲ್ಲದೆ ಗೊಂದಲವಾಗಿತ್ತು. ಆದರೆ ಈ ಬಾರಿಯ ಸಭೆಯಲ್ಲಿ ಒಂದಾಗಿ ಕುಳಿತು ಸಭೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರು ಅಭಿನಂದಿಸಿದರು.