ನಾಪೆÇೀಕ್ಲು, ನ. 15: ರಕ್ತದಾನ ಎಲ್ಲಾ ದಾನಕ್ಕಿಂತಲೂ ಶ್ರೇಷ್ಠವಾದುದು. ಇದರಿಂದ ಮಾತ್ರ ಮನುಷ್ಯನ ಪ್ರಾಣ ರಕ್ಷಿಸಲು ಸಾಧ್ಯ ಎಂದು ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್ ಫೌಂಡೇಷನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ ಮಡಿಕೇರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹಾಗೂ ನಾಪೆÉÇೀಕ್ಲು ಲಯನ್ಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಾಪೆÉÇೀಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಇಂದು ನಡೆಯುತ್ತಿರುವ ಅಪಘಾತದಲ್ಲಿ ಬಹುತೇಕ ಮಂದಿ ರಕ್ತದ ಆಲಭ್ಯತೆಯಿಂದ ಸಾವನ್ನಪ್ಪುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳಲ್ಲೂ ರಕ್ತದ ಕೊರತೆ ಕಂಡುಬರುತ್ತದೆ. ಎಲ್ಲಾ ಆರೋಗ್ಯವಂತರೂ ರಕ್ತದಾನ ಮಾಡುವ ಮೂಲಕ ವ್ಯಕ್ತಿಯ ಜೀವ ಉಳಿಸಲು ನೇರವಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಮಾತನಾಡಿ ತಾವು ಸಂಪಾದಿಸಿದ ವಸ್ತುವನ್ನು ಜನರು ದಾನ ಮಾಡಲು ಹಿಂಜರಿಯುತ್ತಾರೆ. ಆದರೆ ರಕ್ತದಾನ ದೈವಿಕವಾಗಿರುವ ಶ್ರೇಷ್ಠದಾನಗಳಲ್ಲೊಂದು. ಇದರಿಂದ ದಾನ ಮಾಡಿದ ವ್ಯಕ್ತಿಯ ಆರೋಗ್ಯದಲ್ಲೂ ಸುಧಾರಣೆ ಯಾಗಲಿದೆ. ಇದನ್ನು ಸಾರ್ವಜನಿಕರು ಅರಿಯುವದರ ಮೂಲಕ ವ್ಯಕ್ತಿಯ ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದರು.

ನಾಪೆÉÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ಮಾತನಾಡಿ ಇಂದು ಜನರು ಹಲವಾರು ಖಾಯಿಲೆಗಳಿಗೆ ತುತ್ತಾಗಿ ರಕ್ತದ ಕೊರತೆಯಿಂದ ರಕ್ತಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭ ಎಲ್ಲಾ ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಂ ರಕ್ತದಾನ ಮಾಡುವದರ ಮೂಲಕ ಸಾಮಾನ್ಯ ಜನರ ಪ್ರಾಣವನ್ನು ಉಳಿಸಲು ಪಣ ತೊಡಬೇಕು ಎಂದರು. ತಾಲೂಕು ಪಂಚಾಯತ್ ಅಧ್ಯಕ್ಷೆ ಶೋಭಾ, ಸದಸ್ಯೆ ಉಮ ಪ್ರಭು, ಸಭೆಯಲ್ಲಿ ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಅಧಿಕಾರಿ ಡಾ. ಕರುಂಬಯ್ಯ ಮಾತನಾಡಿ ಒಬ್ಬ ವ್ಯಕ್ತಿಯ ಜೀವ ಉಳಿಸಲು ರಕ್ತದಾನದಿಂದ ಮಾತ್ರ ಸಾಧ್ಯವಾಗುತ್ತದೆ. ಇಂದು ಎಲ್ಲಾ ಆಸ್ಪತ್ರೆಗÀಳಲ್ಲಿಯೂ, ರಕ್ತದ ಕೊರತೆ ಕಂಡುಬರುತ್ತಿದೆ. ರಕ್ತ ನೀಡಲು ಸಾರ್ವಜನಿಕರು ಸಂಘ ಸಂಸ್ಥೆಗಳು ಮುಂದೆ ಬಂದರೆ ಮಾತ್ರ ಒಂದು ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು.

ವೇದಿಕೆಯಲ್ಲಿ ತಾ. ಪಂ. ಸದಸ್ಯೆ ನೆರೆಯಂಡಮ್ಮಂಡ ಉಮಾ ಪ್ರಭು, ನಾಪೆÇೀಕ್ಲು ಲಯನ್ಸ್ ಕ್ಲಬ್ ಅಧ್ಯಕ್ಷ ಕೋಟೇರ ಡಾ. ಪಂಚಮ್ ತಿಮ್ಮಯ್ಯ, ಡಾ|| ಉಮಾಭಾರತಿ, ಡಾ|| ಅನೂಷ, ಎ.ಪಿ.ಎಂ.ಸಿ ನಿರ್ದೇಶಕ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಇದ್ದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪ್ರಾಂತೀಯ ಮುಖ್ಯಸ್ಥೆ ಕೇಟೋಳಿರ ರತ್ನಾ ಚರ್ಮಣ್ಣ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಗ್ರಾಮ ಪಂಚಾಯಿತಿ ಸದಸ್ಯ ಪಿ.ಎಂ ರಷೀದ್, ಎಂ.ಎ. ಮನ್ಸೂರ್ ಅಲಿ, ಲಯನ್ಸ್ ಕ್ಲಬ್ ಸದಸ್ಯ ಕನ್ನಂಬಿರ ಸುದಿ ತಿಮ್ಮಯ್ಯ, ಪದಾಧಿಕಾರಿಗಳು ಇದ್ದರು.

ನಾಪೆÉÇೀಕ್ಲು ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಷಣ್ಮುಗಂ ಪ್ರಾರ್ಥನೆ, ಭವ್ಯ ನಿರೂಪಿಸಿ, ವೈದ್ಯಾಧಿಕಾರಿ ಡಾ. ಶಿವಕುಮಾರ್ ಸ್ವಾಗತಿಸಿ, ಆಡಳಿತಾಧಿಕಾರಿ ಮಧುಸೂದನ್ ವಂದಿಸಿದರು. ಶಿಬಿರದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಮತ್ತು ಜಮುನಾ ದಂಪತಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್ ರಕ್ತದಾನ ಮಾಡುವದರ ಮೂಲಕ ಗಮನ ಸೆಳೆದರು.