ಮಡಿಕೇರಿ, ನ. 15: ಕೇರಳ ರಾಜ್ಯದಲ್ಲಿ ವ್ಯಕ್ತಿಯೋರ್ವರನ್ನು ಕೊಲೆಗೈದು ಮೃತದೇಹವನ್ನು ಕಾರಿನಲ್ಲಿ ತಂದು ಮಾಕುಟ್ಟದಲ್ಲಿ ಬಿಸಾಡಿದ ಪ್ರಕರಣವೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಕೊಲೆ ಕೇರಳದಲ್ಲೇ ನಡೆದಿದ್ದು, ಕೇರಳದಲ್ಲೇ ಆರೋಪಿಗಳು ಬಂಧಿತರಾಗಿದ್ದಾರೆ. ಈ ಪ್ರಕರಣ ಕೊಡಗಿಗೂ ತಳಕು ಹಾಕಿಕೊಂಡಿದೆ.
ಕಳೆದ ಏಪ್ರಿಲ್ 27ರಂದು ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಬಗ್ಗೆ ಯಾವದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಈ ಠಾಣಾ ವ್ಯಾಪ್ತಿಯಲ್ಲೇ ಮೃತದೇಹವನ್ನು ಮಣ್ಣು ಮಾಡಿದ್ದು, ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಇದೀಗ ಕೆಲವು ದಿನದಿಂದೆ ಕೇರಳ ಪೊಲೀಸರು ತಿರುವಂತಪುರದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಲ್ಲಿನ ನಾಲ್ಕು ಮಂದಿಯನ್ನು ಬಂಧಿಸಿದ್ದು, ವಿಚಾರಣೆ ಸಂದರ್ಭ ಬಂಧಿತರಿಂದ ಈ ಕೃತ್ಯ ಬೆಳಕಿಗೆ ಬಂದಿದೆ. ರಂಜು ಕೃಷ್ಣನ್ (31) ಎಂಬಾತ ಕೊಲೆಗೀಡಾಗಿದ್ದು, ಈತನ ಮಡಿಕೇರಿ, ನ. 15: ಕೇರಳ ರಾಜ್ಯದಲ್ಲಿ ವ್ಯಕ್ತಿಯೋರ್ವರನ್ನು ಕೊಲೆಗೈದು ಮೃತದೇಹವನ್ನು ಕಾರಿನಲ್ಲಿ ತಂದು ಮಾಕುಟ್ಟದಲ್ಲಿ ಬಿಸಾಡಿದ ಪ್ರಕರಣವೊಂದು ಆರು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಕೊಲೆ ಕೇರಳದಲ್ಲೇ ನಡೆದಿದ್ದು, ಕೇರಳದಲ್ಲೇ ಆರೋಪಿಗಳು ಬಂಧಿತರಾಗಿದ್ದಾರೆ. ಈ ಪ್ರಕರಣ ಕೊಡಗಿಗೂ ತಳಕು ಹಾಕಿಕೊಂಡಿದೆ.
ಕಳೆದ ಏಪ್ರಿಲ್ 27ರಂದು ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತ ವ್ಯಕ್ತಿಯ ಬಗ್ಗೆ ಯಾವದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಗ್ರಾಮಾಂತರ ಪೊಲೀಸರು ಈ ಠಾಣಾ ವ್ಯಾಪ್ತಿಯಲ್ಲೇ ಮೃತದೇಹವನ್ನು ಮಣ್ಣು ಮಾಡಿದ್ದು, ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿದ್ದರು. ಇದೀಗ ಕೆಲವು ದಿನದಿಂದೆ ಕೇರಳ ಪೊಲೀಸರು ತಿರುವಂತಪುರದಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅಲ್ಲಿನ ನಾಲ್ಕು ಮಂದಿಯನ್ನು ಬಂಧಿಸಿದ್ದು, ವಿಚಾರಣೆ ಸಂದರ್ಭ ಬಂಧಿತರಿಂದ ಈ ಕೃತ್ಯ ಬೆಳಕಿಗೆ ಬಂದಿದೆ. ರಂಜು ಕೃಷ್ಣನ್ (31) ಎಂಬಾತ ಕೊಲೆಗೀಡಾಗಿದ್ದು, ಈತನ ಮೃತದೇಹವನ್ನು ಮಾಕುಟ್ಟದಲ್ಲಿ ಹಾಕಿ ತೆರಳಿದ್ದಾರೆ
ಫೋಕ್ಸೋ ಕಾಯ್ದೆಯಡಿ ರಂಜುಕೃಷ್ಣನ್‍ನನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದ್ದ ತಿರುವಂತಪುರದ ಶಾಡೋ ಪೊಲೀಸ್ ತಂಡಕ್ಕೆ ರಂಜುಕೃಷ್ಣನ್ ಹಾಗೂ ಸಂಗಡಿಗರ ನಡುವೆ ಒಡಕು ಮೂಡಿದ್ದ ಸುಳಿವು ಲಭಿಸಿದ್ದು, ಈ ಜಾಡು ಹಿಡಿದು ತನಿಖೆ ನಡೆಸಿ ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನನ್ನು ಕೊಲೆಗೈದಿರುವ ಅಂಶ ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಆರೋಪಿಗಳನ್ನು ವೀರಾಜಪೇಟೆಗೆ ಕರೆ ತಂದಿರುವ ಕೇರಳ ಪೊಲೀಸರು ಸ್ಥಳ ಮಹಜರು ನಡೆಸಿ ವೀರಾಜಪೇಟೆ ಗ್ರಾಮಾಂತರ ಪೊಲೀಸರಿಂದ ಮಾಹಿತಿ ಸಂಗ್ರಹಿಸಿ ತೆರಳಿರುವದು ‘ಶಕ್ತಿ’ಗೆ ತಿಳಿದು ಬಂದಿದೆ.
ಮರು ಮರಣೋತ್ತರ ಪರೀಕ್ಷೆ ಸಾಧ್ಯತೆ
ವೀರಾಜಪೇಟೆಯಲ್ಲಿ ಠಾಣೆಯಲ್ಲಿ ಸಂಶಯಾಸ್ಪದ ಸಾವೆಂದು ದಾಖಲಾಗಿದ್ದ ಪ್ರಕರಣಕ್ಕೆ ಇದೀಗ ತಿರುವ ದೊರೆತಿದೆ. ಕೊಲೆ ಪ್ರಕರಣವೆಂದು ಬಯಲಾಗಿರುವ ಹಿನ್ನೆಲೆಯಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಲು ಕೇರಳ ಪೊಲೀಸರು ಮುಂದಾಗಿದ್ದಾರೆನ್ನಲಾಗಿದೆ. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮಣ್ಣು ಮಾಡಿರುವ ಮೃತದೇಹವನ್ನು ಹೊರತೆಗೆಯಲು ಅವಕಾಶ ಕೋರಿ ಒಂದೆರೆಡು ದಿನದಲ್ಲಿ ಕೇರಳ ಪೊಲೀಸರು ವೀರಾಜಪೇಟೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.