ಮಡಿಕೇರಿ. ನ. 15: ಕಾವೇರಿ ನದಿ ತಟದ ಸಿದ್ದಾಪÀÅರ ಗ್ರಾಮ ಪಂಚಾಯಿತಿ ಕಳೆದ ಐದು ದಶಕಗಳಿಂದ ಕಸ ವಿಲೆÉೀವಾರಿ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಇದೀಗ ಜಿಲ್ಲಾಡಳಿತ ಘಟ್ಟದಳ್ಳ ಮಾರ್ಗದ ಬಳಿಯ ಅರ್ಧ ಎಕರೆ ಭೂಮಿಯನ್ನು ಕಸ ವಿಲೇವಾರಿಗಾಗಿ ಪಂಚಾಯಿತಿಗೆ ಒದಗಿಸಿ ಕೊಡುವ ಮೂಲಕ ದೀರ್ಘಕಾಲದ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದು ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಣಿ ಹರ್ಷ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪÀÅರ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸಂಗ್ರಹ ವಾಗುತ್ತಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಲು ಅಗತ್ಯ ಜಾಗವಿಲ್ಲದೆ ಪಂಚಾಯಿತಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿತ್ತು. ಈ ಬಗ್ಗೆ ನಿರಂತರವಾಗಿ ಜಿಲ್ಲಾಡಳಿತದ ಗಮನ ಸೆಳೆದ ಪರಿಣಾಮವಾಗಿ ಜಿಲ್ಲಾಧಿಕಾರಿ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಘಟ್ಟದಳ್ಳ ರಸ್ತೆಯ ಬಳಿಯಲ್ಲಿನ ಅರ್ಧ ಎಕರೆ ಜಾಗವನ್ನು ಒದಗಿಸಿ ಕೊಡುವ ಮೂಲಕ ಸಹಕಾರ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಮೂರು ತಿಂಗಳ ಅವಧಿಯಲ್ಲಿ ಲಭ್ಯ ಜಾಗದಲ್ಲಿ ವೈಜ್ಞಾನಿಕ ಕಸವಿಲೇವಾರಿ ಘಟಕವನ್ನು ಅಳವಡಿಸುವ ಮೂಲಕ ಕಸ ವಿಲೇವಾರಿಗೆ ಅಗತ್ಯ ಕ್ರಮ ಗಳನ್ನು ಕೈಗೊಳ್ಳಲಾಗುತ್ತದೆ. ಈಗಾಗಲೇ ಸ್ವಚ್ಛ ಭಾರತ ಮಿಷನ್‍ಗೆ ಕಸ ವಿಲೇವಾರಿ ಘಟಕಕ್ಕೆ ಸಂಬಂಧಿಸಿದ ಪ್ರಸ್ತಾವನೆ ಯನ್ನು ಸಲ್ಲಿಸಲಾಗಿದ್ದು, ರೂ. 20 ಲಕ್ಷ ಅನುದಾನ ದೊರಕುವ ವಿಶ್ವಾಸವಿದೆ ಎಂದು ತಿಳಿಸಿದರು.

ರೂ. 1 ಕೋಟಿ ವೆಚ್ಚದ ಕಾಮಗಾರಿ

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನಲ್ಲಿ ರೂ. 1 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಈಗಾಗÀಲೇ ಹಲವು ಕಾಮಗಾರಿಗಳು ಪ್ರಗತಿ ಯಲ್ಲಿದೆ.

ಇದರಲ್ಲಿ ಪ್ರಮುಖವಾಗಿ 14ನೇ ಹಣಕಾಸು ಯೋಜನೆಯ ರೂ. 43 ಲಕ್ಷ ಅನುದಾನದ ಕಾಮಗಾರಿ, ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್‍ನಡಿ ರೂ. 25 ಲಕ್ಷ ವೆಚ್ಚದ ರಸ್ತೆ ಕಾಮಗಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸರಿತಾ ಪÀÇಣಚ್ಚ ಅವರ ನಿಧಿಯಿಂದ ರೂ. 20 ಲಕ್ಷ, ಶಾಸಕರು, ತಾಲೂಕು ಪಂಚಾಯಿತಿ ಸದಸ್ಯರುಗಳ ಅನುದಾನವನ್ನು ಒಳಗೊಂಡಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ ಎಂದು ಮಣಿ ತಿಳಿಸಿದರು.

ಇದರೊಂದಿಗೆ ಗಿರಿಜನ ಉಪಯೋಜನೆಯಡಿ ರೂ. 1.83 ಕೋಟಿ ವೆಚ್ಚದಲ್ಲಿ ಲೋಕೋಪ ಯೋಗಿ ಇಲಾಖೆ ಅನುದಾನದಿಂದ ಕರಡಿಗೋಡು ಗ್ರಾಮದ ಕೆಸವಿನಹಳ್ಳ ಗೇಟ್‍ನಿಂದ ಅವರೆಗುಂದ ಚೈನ್‍ಗೇಟ್‍ವರೆಗಿನ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಗೋಷ್ಠಿಯಲ್ಲಿ ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ, ಸದಸ್ಯರುಗಳಾದ ಪ್ರೇಮ ಹಾಗೂ ಪೂವಮ್ಮ ಉಪಸ್ಥಿತರಿದ್ದರು.