ಮಡಿಕೇರಿ ನ.15 : ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಯುತ್ತಿರುವ ಕೊಡಗು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನ ಸಜ್ಜಾಗುತ್ತಿದ್ದು, ಸಮ್ಮೇಳನಾಧ್ಯಕ್ಷರಾದ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ತಾ.18 ಮತ್ತು 19 ರಂದು ಕನ್ನಡದ ಕಹಳೆ ಮೊಳಗಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಎರಡು ದಿನಗಳ ಕಾಲ ನಡೆಯುವ ಜಿಲ್ಲಾ ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ತಾ. 18 ರಂದು ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ರಾಷ್ಟ್ರಧ್ವಜವನ್ನು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್. ಗೋವಿಂದ ರಾಜು , ಪರಿಷತ್ ಧ್ವಜವನ್ನು ಕಸಾಪ ಅಧ್ಯಕ್ಷ ಲೋಕೆÉೀಶ್ ಸಾಗರ್ ಹಾಗೂ ನಾಡ ಧ್ವಜವನ್ನು ಪೊನ್ನಂಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೂಕಳೇರ ಸುಮಿತ ಆರೋಹಣ ಮಾಡುವ ಮೂಲಕ ಎರಡು ದಿನಗಳ ಕನ್ನಡ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಧ್ವಜಾರೋಹಣದ ನಂತರ ಬಾಚಮಾಡ ಸಿ. ಡಿ. ಸುಬ್ಬಯ್ಯ ದ್ವಾರವನ್ನು ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಮೂಕಳೇರ ಆಶಾ ಪೂಣಚ್ಚ , ಚಕ್ಕೇರ ಅಪ್ಪಯ್ಯ ದ್ವಾರವನ್ನು ಪೊಯಿಲೇಂಗಡ ಪಲ್ವಿನ್ ಪೂಣಚ್ಚ, ಕೀಕಣಮಾಡ ಸುಬ್ಬಯ್ಯ ದ್ವಾರವನ್ನು ಬಿ.ಎಂ. ಗಣೇಶ್, ಚಿರಿಯಪಂಡ ಕುಶಾಲಪ್ಪ ದ್ವಾರವನ್ನು ಚಿರಿಯಪಂಡ ಉಮೇಶ್ ಉತ್ತಪ್ಪ . ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ದ್ವಾರವನ್ನು ಕುಟ್ಟಂಡ ಅಜಿತ್ ಕರುಂಬಯ್ಯ, ಚಾಚಮಾಡ ಡಿ. ಗಣಪತಿ ಮುಖ್ಯ ದ್ವಾರವನ್ನು ತಾಲ್ಲೂಕು

(ಮೊದಲ ಪುಟದಿಂದ) ಪಂಚಾಯ್ತಿ ಉಪಾಧ್ಯಕ್ಷರಾದ ನೆಲ್ಲೀರ ಚಲನ್ ಕುಮಾರ್ ಉದ್ಘಾಟಿಸಲಿದ್ದಾರೆ.

ನಂತರ ಬೆಳಗ್ಗೆ 9.30 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದ್ದು, ಮಂಗಳವಾದ್ಯ, ಕೊಡವ ಸಾಂಪ್ರದಾಯಿಕ ವಾಲಗ, ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳಕ್, ಪೂರ್ಣ ಕುಂಭಗಳು, ಕಲಾ ತಂಡಗಳು, ಸ್ತಬ್ಧ ಚಿತ್ರಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಆಟೋ ಚಾಲಕರು ಮೆರವಣಿಗೆಗೆ ಮೆರುಗನ್ನು ನೀಡಲಿದ್ದಾರೆ. ಕಾಲೆÉೀಜು ಆವರಣದಲ್ಲಿ ಜಿಲ್ಲಾಧಿಕಾರಿಗಳಾದ ಡಾ| ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಪುಸ್ತಕ ಮಳಿಗೆಯನ್ನು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಪಿ.ಎಸ್. ಮಂಜುಳಾ, ಮಾಧ್ಯಮ ಕಛೇರಿಯನ್ನು ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಕೋಳೇರ ಸವಿನ್ ವಸ್ತು ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಅಚ್ಚಪಂಡ ಮಹೇಶ್ ಗಣಪತಿ, ಪಾರುವಂಗಡ ಕುಶಾಲಪ್ಪ ಸಭಾಂಗಣವನ್ನು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೂಕೊಂಡ ವಿಜು ಸುಬ್ರಮಣಿ, ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ವೇದಿಕೆಯನ್ನು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೂಕೊಂಡ ಶಶಿ ಸುಬ್ರಮಣಿ ಉದ್ಘಾಟಿಸಲಿದ್ದಾರೆ.

ಸಭಾ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷÀ ಡಾ. ಮನು ಬಳಿಗಾರರು ಉದ್ಘಾಟಿಸಲಿದ್ದು, ಶಾಸಕರಾದ ಕೆ.ಜಿ. ಬೋಪಯ್ಯ ಆಶಯ ನುಡಿಗಳನ್ನಾಡಲಿದ್ದಾರೆ.ಸ್ಮರಣ ಸಂಚಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಹಾಗೂ ಕೃತಿಗಳನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎಂ. ಹರೀಶ್ ಬಿಡುಗಡೆ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಸ್.ಸಿ.ರಾಜಶೇಖರ್ ಹಾಗೂ ಪ್ರಸ್ತುತ ಸಮ್ಮೇಳನಾಧ್ಯಕ್ಷ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಅವರು ಸಂದೇಶವನ್ನು ನೀಡಲಿದ್ದಾರೆ. ಅತಿಥಿಗಳಾಗಿ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ ನಡೆಯುವ ಗೀತಗಾಯನ ಕಾರ್ಯಕ್ರಮವನ್ನು ಹಿರಿಯ ಕಲಾವಿದರಾದ ಕೆ.ಎಸ್. ಸತ್ಯಪ್ರಸಾದ್ ಉದ್ಘಾಟಿಸಲಿದ್ದು, ಶೈಕ್ಷಣಿಕ ಗೋಷ್ಠಿ ಹಿರಿಯ ಸಾಹಿತಿಗಳಾದ ಬಾಲ ಸುಬ್ರಹ್ಮಣ್ಯ ಕಂಜರ್ಪಣೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.ಕೊಡಗಿನ ಕೃಷಿ ಸಂಸ್ಕøತಿ ಗೋಷ್ಠಿಯು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾಂಸ್ಕøತಿಕ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ಉದ್ಘಾಟಿಸಲಿದ್ದಾರೆ.

ತಾ. 19 ರಂದು ಬೆಳಗ್ಗೆ ನಡೆಯುವ ಮಹಿಳಾ ಗೋಷ್ಠಿಯು ಹಿರಿಯ ಸಾಹಿತಿಗಳಾದ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಸಾಂಸ್ಕøತಿಕ ಕಾರ್ಯಕ್ರಮವನ್ನು ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷರಾದ ಚೆಪ್ಪುಡಿರ ಪೊನ್ನಪ್ಪ ಉದ್ಘಾಟಿಸಲಿದ್ದಾರೆ. ಗೀತಗಾಯನ ಕಾರ್ಯಕ್ರಮವನ್ನು ಹಿರಿಯ ಕಲಾವಿದರಾದ ಚೇಂದಿರ ನಿರ್ಮಲ ಬೋಪಣ್ಣ ಉದ್ಘಾಟಿಸಲಿದ್ದು, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ನಾಗೇಶ್ ಕಾಲೂರು ವಹಿಸಲಿದ್ದಾರೆ. ಬಹಿರಂಗ ಅಧಿವೇಶನ ಕಸಾಪ ಅಧ್ಯಕ್ಷÀರಾದ ಲೋಕೇಶ್ ಸಾಗರ್ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಸನ್ಮಾನ ಸಮಾರಂಭದ ದಿವ್ಯಸಾನಿಧ್ಯ ವಹಿಸಲಿದ್ದು, ಸಂಸದ ಪ್ರತಾಪ ಸಿಂಹ ಸಾಧಕರನ್ನು ಸನ್ಮಾನಿಸಲಿದ್ದಾರೆ.

ಗೌರವಾರ್ಪಣೆ

ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಅವರಿಗೆ ವಿಶೇಷ ಗೌರವ ಅರ್ಪಿಸಲಾಗುವದೆಂದು ತಿಳಿಸಿದ ಲೋಕೇಶ್ ಸಾಗರ್ ಸನ್ಮಾನಿತರ ಬಗ್ಗೆ ಮಾಹಿತಿ ನೀಡಿದರು. ಸಾಹಿತ್ಯ ಕ್ಷೇತ್ರ ಚೇಂದ್ರಿಮಾಡ ಗ. ಮುತ್ತಪ್ಪ, ಕ್ರೀಡಾಕ್ಷೇತ್ರ ವಿ.ಆರ್. ರಘುನಾಥ್, ಉನ್ನತ ಶಿಕ್ಷಣ ಮುಕ್ಕಾಟಿರ ಪುನೀತ್ ಕುಟ್ಟಯ್ಯ, ಕೃಷಿ ಕ್ಷೇತ್ರ ಸೋಮೆಯಂಡ ಗಣೇಶ್ ತಿಮ್ಮಯ್ಯ, ಸಮಾಜ ಸೇವೆ ಉಂಬಾಯಿ, ಶಿಕ್ಷಣ ಉಷಾರಾಣಿ, ವೈದ್ಯಕೀಯ ಡಾ| ಯತಿರಾಜ್, ಮಹಿಳಾ ಸಬಲೀಕರಣ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಯುವ ಪ್ರತಿಭೆ ಕುಮಾರ ಕಾರ್ತಿಕ್ ಶೆಣೈ, ಶಿಲ್ಪಕಲೆ ಎನ್.ಪಿ. ಕಾವೇರಪ್ಪ, ಸಂಗೀತ ಕ್ಷೇತ್ರ ಚರಣ್ ರಾಜ್, ಚಲನ ಚಿತ್ರ ಫಯಾಜ್ ಖಾನ್, ಹವ್ಯಾಸಿ ಛಾಯಾಚಿತ್ರಗಾರ ಶಿವಣ್ಣ, ಜಾನಪದ ಕ್ಷೇತ್ರÀ ಬೆಸೂರು ಶಾಂತೇಶ್, ಮಾಧ್ಯಮ ಕ್ಷೇತ್ರ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರನ್ನು ಸನ್ಮಾನಿಸಲಾಗುತ್ತದೆ.

82ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಚಂದ್ರಶೇಖರ್ ಪಾಟೀಲರು ಅಂದು ಸಂಜೆ ಸಮಾರೋಪ ಭಾಷಣ ಮಾಡಲಿದ್ದು, ನಂತರ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಜಿ.ಪಂ. ಮಾಜಿ ಅಧ್ಯಕ್ಷರಾದ ಶರಿನ್ ಸುಬ್ಬಯ್ಯ ಉದ್ಘಾಟಿಸಲಿದ್ದಾರೆ ಎಂದು ಲೋಕೇಶ್ ಸಾಗರ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ಗೌರವ ಕಾರ್ಯದರ್ಶಿ ಡಾ| ಸುಭಾಷ್ ನಾಣಯ್ಯ, ಖಜಾಂಚಿ ಮುರಳೀಧರ್, ಕಾರ್ಯದರ್ಶಿ ಕೆ.ಎಸ್. ರಮೇಶ್, ನಿರ್ದೇಶಕ ಅಶ್ವತ್ಥ್, ಮೂರ್ನಾಡು ಹೋಬಳಿ ಅಧ್ಯಕ್ಷ ಪಿ.ಪಿ. ಸುಕುಮಾರ್ ಉಪಸ್ಥಿತರಿದ್ದರು.