ವೀರಾಜಪೇಟೆ, ನ. 15 ಕಳೆದ 5 ವರ್ಷಗಳಿಂದ ಅಮ್ಮತ್ತಿಯಿಂದ ಒಂಟಿ ಅಂಗಡಿಗೆ ಹೋಗುವ ಮುಖ್ಯ ರಸ್ತೆಯಿಂದ ಬೈಪಾಸ್ ಮಾರ್ಗವಾಗಿ ಭದ್ರಕಾಳಿ ದೇವಸ್ಥಾನದ ರಸ್ತೆ ಮೂಲಕ ಕಾವಾಡಿ ಗ್ರಾಮದ ಮುಖ್ಯ ರಸ್ತೆಯನ್ನು ತಲುಪುವ ಸುಮಾರು ಎರಡೂವರೆ ಕಿ.ಮೀ ರಸ್ತೆ ಹೀನಾಯ ಸ್ಥಿತಿಯಲ್ಲಿರುವದನ್ನು ದುರಸ್ತಿಗೆ ಆಗ್ರಹಿಸಿದ್ದರೂ ಸರಕಾರ ಸ್ಪಂದಿಸದ ಕಾರಣ ಗ್ರಾಮಸ್ಥರು ರಸ್ತೆಯ ಮೂರು ಕಡೆಗಳಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನಂತರ ಗ್ರಾಮಸ್ಥರು ಎರಡೂವರೆ ಕಿ.ಮೀ ರಸ್ತೆ ಅಂತರದಲ್ಲಿರುವ ಗುಂಡಿಗಳನ್ನು ಮುಚ್ಚಿ ದುರಸ್ತಿ ಪಡಿಸಲು ಮುಂದಾದರು. ಈ ಸಂದರ್ಭ ಮಾತನಾಡಿದ ರೈತ ಸಂಘದ ಮುಖಂಡ ಕಾವಾಡಿಚಂಡ ಗಣಪತಿ ಅವರು ಅನೇಕ ಬಾರಿ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಗಳಿಗೆ ಮನವಿ ನೀಡಿದರೂ ಯಾವದೇ ಪ್ರಯೋಜನ ವಾಗಿಲ್ಲದ್ದರಿಂದ ಗ್ರಾಮಸ್ಥ ಸೇರಿ ಸುಮಾರು ರೂ. 45000 ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡುವಂತಾಗಿದೆ ವೀರಾಜಪೇಟೆ, ನ. 15 ಕಳೆದ 5 ವರ್ಷಗಳಿಂದ ಅಮ್ಮತ್ತಿಯಿಂದ ಒಂಟಿ ಅಂಗಡಿಗೆ ಹೋಗುವ ಮುಖ್ಯ ರಸ್ತೆಯಿಂದ ಬೈಪಾಸ್ ಮಾರ್ಗವಾಗಿ ಭದ್ರಕಾಳಿ ದೇವಸ್ಥಾನದ ರಸ್ತೆ ಮೂಲಕ ಕಾವಾಡಿ ಗ್ರಾಮದ ಮುಖ್ಯ ರಸ್ತೆಯನ್ನು ತಲುಪುವ ಸುಮಾರು ಎರಡೂವರೆ ಕಿ.ಮೀ ರಸ್ತೆ ಹೀನಾಯ ಸ್ಥಿತಿಯಲ್ಲಿರುವದನ್ನು ದುರಸ್ತಿಗೆ ಆಗ್ರಹಿಸಿದ್ದರೂ ಸರಕಾರ ಸ್ಪಂದಿಸದ ಕಾರಣ ಗ್ರಾಮಸ್ಥರು ರಸ್ತೆಯ ಮೂರು ಕಡೆಗಳಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನಂತರ ಗ್ರಾಮಸ್ಥರು ಎರಡೂವರೆ ಕಿ.ಮೀ ರಸ್ತೆ ಅಂತರದಲ್ಲಿರುವ ಗುಂಡಿಗಳನ್ನು ಮುಚ್ಚಿ ದುರಸ್ತಿ ಪಡಿಸಲು ಮುಂದಾದರು. ಈ ಸಂದರ್ಭ ಮಾತನಾಡಿದ ರೈತ ಸಂಘದ ಮುಖಂಡ ಕಾವಾಡಿಚಂಡ ಗಣಪತಿ ಅವರು ಅನೇಕ ಬಾರಿ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿ ಗಳಿಗೆ ಮನವಿ ನೀಡಿದರೂ ಯಾವದೇ ಪ್ರಯೋಜನ ವಾಗಿಲ್ಲದ್ದರಿಂದ ಗ್ರಾಮಸ್ಥ ಸೇರಿ ಸುಮಾರು ರೂ. 45000 ವೆಚ್ಚದಲ್ಲಿ ರಸ್ತೆ ದುರಸ್ತಿ ಮಾಡುವಂತಾಗಿದೆ ವಾಸಿಸುವ ಕಾವಾಡಿ ಗ್ರಾಮದ ಭದ್ರಕಾಳಿ ದೇವಸ್ಥಾನದ ಸಂಪರ್ಕ ರಸ್ತೆಯನ್ನು ರಾಜಕೀಯ ದುರುದ್ದೇಶದಿಂದ ದುರಸ್ತಿಪಡಿಸುತ್ತಿಲ್ಲ. ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಈ ವಿಷಯದಲ್ಲಿ ಮೀನ ಮೇಷ ಎಣಿಸುತ್ತಿದ್ದು ಗ್ರಾಮಸ್ಥರ ಮನವಿಗೆ ಸ್ಪಂದಿಸುತ್ತಿಲ್ಲ. ಶಾಸಕರುಗಳಿಗೆ ಐಷಾರಾಮಿ ಭತ್ಯೆ ಇತರ ವೆಚ್ಚಗಳನ್ನು ನೀಡಲು ಸರಕಾರದಲ್ಲಿ ಕೋಟ್ಯಂತರ ಹಣವಿದೆ. ಗ್ರಾಮಸ್ಥರ ರಸ್ತೆ ದುರಸ್ತಿಗೆ ಹಣವಿಲ್ಲ, ಇದಕ್ಕಾಗಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ತಾತ್ಕಾಲಿಕವಾಗಿ ರಸ್ತೆ ದುರಸ್ತಿಗೆ ಮುಂದಾಗಿ ಕಾಮಗಾರಿ ಆರಂಭಿಸಿದ್ದಾರೆ. ಗ್ರಾಮಸ್ಥರಿಗೆ ಒದಗಿಸುವ ಮೂಲ ಸೌಲಭ್ಯದಲ್ಲಿ ರಾಜಕೀಯ ಬಳಸುವದು ಸರಕಾರಕ್ಕೆ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳಿಗೆ ಶೋಭೆ ತರುವಂತದ್ದಲ್ಲ ಎಂದು ಆರೋಪಿಸಿದರು. ಪಕ್ಷದ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಬಿ.ವಸಂತ ಮಾತನಾಡಿ ಈ ಸಂಪರ್ಕ ರಸ್ತೆ ದುರಸ್ತಿ ಕಾಣದ್ದರಿಂದ ಈ ರಸ್ತೆ ಅಕ್ರಮ ದಂಧೆಕೋರರ ತಾಣವಾಗಿದೆ. ಈ ರಸ್ತೆಗೆ ರಾತ್ರಿ ವೇಳೆ ಪೊಲೀಸ್ ಕಾವಲು ಅಗತ್ಯವಿದೆ ಎಂದರು.
ಈ ಸಂದರ್ಭ ಕೆ. ನಾಚಪ್ಪ, ಮಂಡೆಪಂಡ ದೇವಯ್ಯ, ಲಾಲ ನಾಚಪ್ಪ, ಪ್ರಸಾದ್ ಚಂಗಪ್ಪ ಇತರ ಗ್ರಾಮಸ್ಥರು ಹಾಜರಿದ್ದರು. ರಸ್ತೆಯ ಗುಂಡಿಗಳಿಗೆ ಕಾಂಕ್ರೀಟ್ ಮಿಶ್ರಣ ಹಾಕಲು ಲಾರಿ, 1 ಟ್ರ್ಯಾಕ್ಟರ್ ಹಾಗೂ 15 ಮಂದಿ ಕೂಲಿ ಕಾರ್ಮಿಕರುಗಳು ಜೊತೆಗೆ ಸಹಾಯಕರಾಗಿ ಗ್ರಾಮಸ್ಥರು ರಸ್ತೆ ದುರಸ್ತಿ ಕಾಮಗಾರಿಯಲ್ಲಿ ಭಾಗವಹಿಸಿದ್ದರು.