ಕೂಡಿಗೆ, ನ. 15: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿನ ಕೂಡುಮಂಗಳೂರು, ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿರಿಜನ ಹಾಡಿಗಳಿಗೆ ಮತ್ತು ಕುರುಬಗೌಡ ಕುಟುಂಬಗಳಿರುವ ಹಾಡಿಗಳಿಗೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸೋಮಶೇಖರ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೂಚನೆ ಮೇರೆಗೆ ಹಾಡಿಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣಾಧಿಕಾರಿಗಳು ಭೇಟಿ ನೀಡಿ ಇಲಾಖೆಯಿಂದ ಕಲ್ಪಿಸಬಹುದಾದ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕುರುಬಗೌಡ ಜನಾಂಗಕ್ಕೆ ಸರ್ಕಾರದಿಂದ ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಮತ್ತು ಇನ್ನಿತರ ಸೌಲಭ್ಯಗಳನ್ನು ನೀಡಲು ಮಾಹಿತಿ ಕೇಳಿರುವದರಿಂದ ಅವುಗಳ ಬಗ್ಗೆ ಗಿರಿಜನ ಕೇಂದ್ರಗಳಿಗೆ ತೆರಳಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಮಾಹಿತಿ ಸಂಗ್ರಹಿಸಿದರು.
ಕೆರೆಕೊಪ್ಪಲು, ಭುವನಗಿರಿ, ಸೀಗೆಹೊಸೂರು ಭಾಗಗಳಿಗೆ ತೆರಳಿ ಕುರುಬ ಗೌಡ ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ತಾಲೂಕು ಬಿಜೆಪಿ ಉಪಾಧ್ಯಕ್ಷ ಕೆ.ಕೆ.ಭೋಗಪ್ಪ, ತಾಲೂಕು ಬಿಜೆಪಿ ಎಸ್.ಟಿ ಮೋರ್ಚದ ಅಧ್ಯಕ್ಷ ಪ್ರಭಾಕರ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕೂಡುಮಂಗಳೂರು ಸ್ಥಾನೀಯ ಸಮಿತಿಯ ಅಧ್ಯಕ್ಷ ಮಂಜುನಾಥ್ ಗುರುಲಿಂಗಪ್ಪ, ಉಪಾಧ್ಯಕ್ಷ ವೈ.ಪಿ.ಕೃಷ್ಣ, ತಾಲೂಕು ಬಿಜೆಪಿ ಎಸ್.ಸಿ. ಮೋರ್ಚಾದ ಅಧ್ಯಕ್ಷ ಕುಮಾರಸ್ವಾಮಿ, ಸ್ಥಳೀಯ ಗ್ರಾಮಸ್ಥರುಗಳಾದ ಗಿಡ್ಡಪ್ಪ, ಹರದ, ಸಣ್ಣಯ್ಯ, ಮಂಜಣ್ಣ ಮತ್ತಿತರರು ಇದ್ದರು.