ಸೋಮವಾರಪೇಟೆ, ನ. 15: ಕಳೆದ ಕೆಲ ವರ್ಷಗಳಿಂದ ಪಟ್ಟಣ ಪಂಚಾಯಿತಿಯನ್ನು ಬೆಂಬಿಡದೇ ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಭೂತ ಸದ್ಯಕ್ಕೆ ಬಿಡುಗಡೆಯಾಗುವಂತೆ ಕಾಣುತ್ತಿಲ್ಲ. ಪಟ್ಟಣ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ಕಸವನ್ನು ವಿಲೇವಾರಿ ಮಾಡಲು ಪ.ಪಂ. ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಪಂಚಾಯಿತಿಯ ಚುನಾಯಿತ ಸದಸ್ಯರಲ್ಲೇ ಇಚ್ಛಾಶಕ್ತಿಯ ಕೊರತೆ ಇರುವ ಹಿನ್ನೆಲೆ ಸಮಸ್ಯೆ ಜಟಿಲವಾಗುತ್ತಲೇ ಇದೆ.

ಇದಕ್ಕೊಂದು ಸ್ಪಷ್ಟ ನಿದರ್ಶನ ಇಂದು ನಡೆದ ಪ್ರತಿಭಟನೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಇಲ್ಲಿನ ಮಹದೇಶ್ವರ ಬಡಾವಣೆಯ ಅಂಚಿನಲ್ಲಿರುವ ಅಶೋಕ ಬಡಾವಣೆಯಲ್ಲಿ ವಿಲೇವಾರಿ ಮಾಡುವ ಸಂಬಂಧ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ ಸ್ಥಳೀಯರು ಭಾರೀ ವಿರೋಧ ವ್ಯಕ್ತಪಡಿಸಿದ ಪ್ರಸಂಗ ಎದುರಾಯಿತು.

ನೂತನ ಬಡಾವಣೆಯಲ್ಲಿ ತಾತ್ಕಾಲಿಕವಾಗಿ ಕಸ ವಿಲೇವಾರಿ ಮಾಡಲು ವೈಜ್ಞಾನಿಕವಾಗಿ ಘಟಕ ನಿರ್ಮಿಸಲು ಪಟ್ಟಣ ಪಂಚಾಯಿತಿ ಮುಂದಾಗುತ್ತಿದ್ದಂತೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಕಾಮಗಾರಿಗೆ ತಡೆಯೊಡ್ಡಿದರು.

ಜನವಸತಿ ಪ್ರದೇಶದಲ್ಲಿ ಕಸ ಸುರಿಯುವದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ವಾತಾವರಣವೂ ಹಾಳಾಗಲಿದೆ. ಇದರೊಂದಿಗೆ ಕ್ರಿಮಿಕೀಟಗಳು ಹೆಚ್ಚಾಗಿ ಜನಜೀವನಕ್ಕೆ ಸಂಚಕಾರವಾಗಲಿದೆ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಗುತ್ತಿಗೆದಾರರಲ್ಲಿ ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಮುಖ್ಯಾಧಿಕಾರಿ ನಾಚಪ್ಪ ಅವರು ಸ್ಥಳೀಯರ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು.

ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ಸ್ಥಳಿಯರು ನಂತರ ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದರು. ನಮ್ಮ ಬಡಾವಣೆಯಲ್ಲಿ ಕಸ ಸುರಿಯದಂತೆ ಈ ಹಿಂದೆಯೇ ಮನವಿ ಮಾಡಿದ್ದರೂ ಇದನ್ನು ಧಿಕ್ಕರಿಸಿ ಕಸ ಹಾಕಲಾಗುತ್ತಿದೆ. ತಕ್ಷಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಈ ಸಂದರ್ಭ ಮಾತನಾಡಿದ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಸುಮಾರು 2 ಕೋಟಿ ವೆಚ್ಚದಲ್ಲಿ ಸಿದ್ದಲಿಂಗಪುರದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಕೆಲ ತಿಂಗಳು ಬೇಕಾಗುವದರಿಂದ ಅಲ್ಲಿಯವರೆಗೂ ತಾತ್ಕಾಲಿಕವಾಗಿ ತ್ಯಾಜ್ಯ ವಿಲೇವಾರಿಗೆ ಅವಕಾಶ ನೀಡಬೇಕು. ಇಲ್ಲೂ ಸಹ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವದು. ಕಾಮಗಾರಿಗೆ ತಡೆಯೊಡ್ಡಬಾರದು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಸ್ಥಳೀಯರು, ನಮ್ಮ ವಾರ್ಡ್‍ನಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವದಿಲ್ಲ. ಸಿದ್ದಲಿಂಗಪುರದಲ್ಲಿಯೇ ಕಸ ಹಾಕಿ ಎಂದು ಸ್ಥಳೀಯರಾದ ಗಣೇಶ್, ಕಿರಣ, ಮಂಜು, ದೊರೆ, ಕಮಲ್, ಮೋಹನ್, ಬಿ.ಎಸ್. ಮಂಜುನಾಥ್, ಪದ್ಮನಾಭ್ ಸೇರಿದಂತೆ ಇತರರು ಒತ್ತಾಯಿಸಿದರು.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವದರಿಂದ ಯಾವದೇ ಸಮಸ್ಯೆಗಳು ಎದುರಾಗುವದಿಲ್ಲ. ಕ್ರಿಮಿಕೀಟಗಳು ಉತ್ಪತ್ತಿಯಾಗುವದಿಲ್ಲ. ದುರ್ನಾತವೂ ಬೀರುವದಿಲ್ಲ. ಕಸವನ್ನು ವಿಂಗಡಿಸಿ ಸಂಸ್ಕರಿಸುವದರಿಂದ ಉತ್ತಮ ಗೊಬ್ಬರ ಉತ್ಪಾದನೆಯಾಗುತ್ತಿದೆ. ಬೇರೆಡೆಗಳಲ್ಲಿ ಅಳವಡಿಸಿರುವ ವಿಧಾನವನ್ನೇ ಇಲ್ಲೂ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರು ಮನವರಿಕೆ ಮಾಡಿಕೊಡಲೆತ್ನಿಸಿದರೂ ಸಫಲತೆ ಕಾಣಲಿಲ್ಲ.

ನಂತರ ಸಭಾಂಗಣದಲ್ಲಿ ಮಾತುಕತೆ ನಡೆದು ತಕ್ಷಣಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಯಿತು. ನಂತರದ ದಿನಗಳಲ್ಲಿ ಘಟಕ ನಿರ್ಮಾಣಕ್ಕೆ ಮುಂದಾದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು. ಸಭೆಯಲ್ಲಿ

ಇಲ್ಲೂ ಸಹ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವದು. ಕಾಮಗಾರಿಗೆ ತಡೆಯೊಡ್ಡಬಾರದು ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಸ್ಥಳೀಯರು, ನಮ್ಮ ವಾರ್ಡ್‍ನಲ್ಲಿ ಕಸ ವಿಲೇವಾರಿಗೆ ಅವಕಾಶ ನೀಡುವದಿಲ್ಲ. ಸಿದ್ದಲಿಂಗಪುರದಲ್ಲಿಯೇ ಕಸ ಹಾಕಿ ಎಂದು ಸ್ಥಳೀಯರಾದ ಗಣೇಶ್, ಕಿರಣ, ಮಂಜು, ದೊರೆ, ಕಮಲ್, ಮೋಹನ್, ಬಿ.ಎಸ್. ಮಂಜುನಾಥ್, ಪದ್ಮನಾಭ್ ಸೇರಿದಂತೆ ಇತರರು ಒತ್ತಾಯಿಸಿದರು.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವದರಿಂದ ಯಾವದೇ ಸಮಸ್ಯೆಗಳು ಎದುರಾಗುವದಿಲ್ಲ. ಕ್ರಿಮಿಕೀಟಗಳು ಉತ್ಪತ್ತಿಯಾಗುವದಿಲ್ಲ. ದುರ್ನಾತವೂ ಬೀರುವದಿಲ್ಲ. ಕಸವನ್ನು ವಿಂಗಡಿಸಿ ಸಂಸ್ಕರಿಸುವದರಿಂದ ಉತ್ತಮ ಗೊಬ್ಬರ ಉತ್ಪಾದನೆಯಾಗುತ್ತಿದೆ. ಬೇರೆಡೆಗಳಲ್ಲಿ ಅಳವಡಿಸಿರುವ ವಿಧಾನವನ್ನೇ ಇಲ್ಲೂ ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರು ಮನವರಿಕೆ ಮಾಡಿಕೊಡಲೆತ್ನಿಸಿದರೂ ಸಫಲತೆ ಕಾಣಲಿಲ್ಲ.

ನಂತರ ಸಭಾಂಗಣದಲ್ಲಿ ಮಾತುಕತೆ ನಡೆದು ತಕ್ಷಣಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಯಿತು. ನಂತರದ ದಿನಗಳಲ್ಲಿ ಘಟಕ ನಿರ್ಮಾಣಕ್ಕೆ ಮುಂದಾದಲ್ಲಿ ಉಗ್ರ ಹೋರಾಟ ನಡೆಸುವದಾಗಿ ಸ್ಥಳೀಯರು ಎಚ್ಚರಿಕೆ ನೀಡಿದರು.