ಗೋಣಿಕೊಪ್ಪ ವರದಿ, ನ. 16: ವೃತ್ತಿ ಮುಗಿಸಿ ಮನೆಗೆ ತೆರಳುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಶ್ರೀಮಂಗಲ ಸಮೀಪದ ವೆಸ್ಟ್ ನೆಮ್ಮಲೆ ಎಂಬಲ್ಲಿ ನಡೆದಿದೆ.

ಸಂತೃಸ್ತ ಮಹಿಳೆ ದೂರಿನಂತೆ ಮಿಂಚಿನ ಕಾರ್ಯಾಚರಣೆ ನಡೆಸಿರುವ ಶ್ರೀಮಂಗಲ ಪೊಲೀಸರು ಘಟನೆ ನಡೆದು 3 ಗಂಟೆಗಳಲ್ಲಿ ಆರೋಪಿ ಯನ್ನು ಬಂಧಿಸಿದ್ದಾರೆ. ಅದೇ ಗ್ರಾಮದ ಲೈನ್‍ಮನೆಯೊಂದರಲ್ಲಿ ವಾಸವಿದ್ದ 17 ವರ್ಷ ಪ್ರಾಯದ ಯುವಕ ಬಂಧಿತ ಆರೋಪಿ. ಅತ್ಯಾಚಾರಕ್ಕೆ ಯತ್ನ ಆರೋಪದಡಿ ಐಪಿಸಿ 354 ಕಾಯ್ದೆ ಯಡಿ ಪ್ರಕರಣ ದಾಖಲಿಸಿಕೊಳ್ಳ ಲಾಗಿದೆ ಹಾಗೂ ರಾತ್ರಿ ಮಡಿಕೇರಿಯ ರಿಮಾಂಡ್ ಹೋಂಗೆ ಸೇರಿಸಲಾಗಿದೆ.

ನೀಡಲಾಗುತ್ತಿದೆ.

ವ್ಯಕ್ತಿಯ ಚಹರೆ ಬಗ್ಗೆ ಮಹಿಳೆ ಪೊಲೀಸರಿಗೆ ಸಂಕ್ಷಿಪ್ತವಾಗಿ ತಿಳಿಸಿದ್ದರಿಂದ ಕ್ಷಿಪ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿದೆ. ಹಲವು ದಿನಗಳಿಂದ ಕಾರ್ಯಕರ್ತೆ ಬರುವ ಸಮಯವನ್ನು ನೋಡಿ ಹೊಂಚು ಹಾಕುತ್ತಿದ್ದೆ. ಅದೇ ರೀತಿ ನಾನು ಅತ್ಯಾಚಾರಕ್ಕೆ ಮುಂದಾಗಿದ್ದೆ ಎಂದು ಪೊಲೀಸರಿಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಕುಟ್ಟ ವೃತ್ತ ನಿರೀಕ್ಷಕ ಪಿ.ಕೆ. ರಾಜು ನೇತೃತ್ವದಲ್ಲಿ ಶ್ರೀಮಂಗಲ ಉಪ ನಿರೀಕ್ಷಕ ಸಣ್ಣಯ್ಯ ಎಎಸ್‍ಐ ಜಗದೀಶ್, ಸಿಬ್ಬಂದಿಗಳಾದ ವಿಶ್ವನಾಥ್, ಧನಂಜಯ ಹಾಗೂ ಗಣಪತಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸೊಂಟಕ್ಕೆ ಪೆಟ್ಟು : ಕೃತ್ಯದ ಸಂದರ್ಭ ಮಹಿಳೆ ಕೂಗಿಕೊಂಡಾಗ ಆತ ಮಹಿಳೆಯನ್ನು ಬಲವಾಗಿ ತಳ್ಳಿದ್ದಾನೆ. ಇದರಿಂದ ಆಕೆಯ ಸೊಂಟದ ಭಾಗಕ್ಕೆ ಪೆಟ್ಟಾಗಿದ್ದು, ನಡೆಯಲು ಆಗದ ಸ್ಥಿತಿಯಲ್ಲಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೀರಾಜಪೇಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಸೀತಾಲಕ್ಷ್ಮಿ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚೇಂದೀರ ಕಾವೇರಮ್ಮ, ತಾಲೂಕು ಅಧ್ಯಕ್ಷೆ ವಿ.ಎಸ್. ಸುಮಿತ್ರಾ, ಬಿರುನಾಣಿ ವರ್ತುಲದ ಪ್ರಮುಖರು ಗಳಾದ ಪಿ.ಎಂ. ನಳಿನಿ, ಕೆ.ಬಿ. ಕಾವೇರಮ್ಮ ಇವರುಗಳು ಆಸ್ಪತ್ರೆಗೆ ತೆರಳಿ ಆರೋಗ್ಯ ವಿಚಾರಿಸಿದರು. ಪೊಲೀಸ್ ಠಾಣೆಗೆ ತೆರಳಿ ಆರೋಪಿಗೆ ಸೂಕ್ತ ಕಾನೂನು ರೀತಿಯ ಕ್ರಮಕ್ಕೆ ಆಗ್ರಹಿಸಿದರು.