ಶ್ರೀಮಂಗಲ, ನ. 16: ಪೊನ್ನಂಪೇಟೆ ತಾಲೂಕು ಪುನರಚನೆಗಾಗಿ ನಡೆಯುತ್ತಿರುವ ಪ್ರತಿಭಟನೆ 16 ದಿನಗಳನ್ನು ಪೂರೈಸುತ್ತಿದ್ದು ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರು ಭಾಗವಹಿಸವದರ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಎಂ.ಎಲ್.ಸಿ ಹಾಗೂ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಚೆಪ್ಪುಡಿರ ಅರುಣ್ ಮಾಚಯ್ಯ, ಕಳೆದ 15 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆಯಿಂದ ನಮ್ಮ ಹೊರಾಟಕ್ಕೆ ಜಯ ಸಿಗುವ ಲಕ್ಷಣ ಕಂಡು ಬರುತ್ತಿದೆ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಶಾಸಕ ಕೆ.ಜಿ ಬೋಪಯ್ಯ ಪ್ರಸ್ತಾಪ ಮಾಡಿದ್ದು, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಈ ಬಗ್ಗೆ ಸರಕಾದ ಆರ್ಥಿಕ ಪರಿಸ್ಥಿಯನ್ನು ವಿಚಾರಮಾಡಿ ಅವಲೋಕನ ಮಾಡಲಾಗುವದೆಂದು ತಿಳಿಸಿದ್ದಾರೆ. ನಾವು ನಿರೀಕ್ಷಿಸದಷ್ಟು ಜಯ ಸಿಗದಿದ್ದರೂ, ಮುಂದಿನ ಹೊರಾಟಕ್ಕೆ ಉಪಕಾರಿಯಾಗಲಿದೆ ಎಂದು ತಿಳಿಸಿದರು.

ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಮತ್ತೆ ಮುಂದಿನ ದಿನಗಳಲ್ಲಿ ಶಾಸಕರನ್ನು ಒಳಗೊಂಡು ಸರಕಾರದ ಗಮನ ಸೆಳೆಯುವ ಕೆಲಸವಾಗ ಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರÀ ಸುಮಿತಾ ಗಣೇಶ್,ಯುವ ಶಕ್ತಿ ಯುವಕ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ಕೊಡವ ತಕ್ಕ್ ಜನಾಂಗಕಾರಡ ಕೂಟದ ಜಿಲ್ಲಾಧ್ಯಕ್ಷ ಕೊರಕೊಟ್ಟಿರ ಸರಾ ಚೆಂಗಪ್ಪ, ಕಿರುಗೂರು ಗ್ರಾ.ಪಂ ಸದಸ್ಯ ಪಿ.ಕೆ ಗಿರೀಶ್, ಗೋಣಿಕೊಪ್ಪಲು ಮಹಿಳಾ ಸಂಘದ ಅಧ್ಯಕ್ಷೆ ಚೇದಂಡ ಸುಮಿ ಸುಬ್ಬಯ್ಯ, ರೇಖಾ ಶ್ರೀಧರ್, ಜಿಲ್ಲಾ ಬೆಳೆಗಾರ ಒಕ್ಕೂಟದ ಮಾಜಿ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ, ಶ್ರೀಮಂಗಲ ಗ್ರಾ.ಪಂ ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ, ಮೂಕಳಮಾಡ ಶಾರದ, ಪೊನ್ನಂಪೇಟೆ ಗ್ರಾ.ಪಂ ಸದಸ್ಯರಾದ ಮೂಕಳೇರ ಲಕ್ಷ್ಮಣ, ಮೂಕಳೇರ ಕಾವ್ಯ ಮದು, ಪುಚ್ಚಿಮಾಡ ಹರೀಶ್, ನಾಗರಿಕ ಹೊರಾಟ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.