ವೀರಾಜಪೇಟೆ, ನ. 18 : ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ತಾ. 19 ರಂದು (ಇಂದು) ಇಲ್ಲಿನ ಪುರಭವನದಲ್ಲಿ ಬೆಳಿಗ್ಗೆ 10.30 ಗಂಟೆಗೆ ರಸ್ತೆ ಸುರಕ್ಷತೆ, ಅಪರಾಧ ಮುಂಜಾಗರೂ ಕ್ರಮ, ಸಾರ್ವಜನಿಕ ಭದ್ರತೆ ಕುರಿತು ವಿಚಾರ ಸಂಕೀರಣ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಪಟ್ಟಡ ವಿಕ್ರಂ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವಿಕ್ರಂಚಂಗಪ್ಪ ಅವರು ವಿಚಾರ ಸಂಕೀರಣದಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರಿನ ಮೈಕ್ರೋ ಲೇಔಟ್ ಪೊಲೀಸ್ ಠಾಣೆಯ ಕಮ್ಯುನಿಟಿ ಪೊಲೀಸಿಂಗ್ ಸಂಚಾಲಕ ಮಂಡೀರ ವಿವೇಕ್ ಚಂಗಪ್ಪ, ಡಿವೈಎಸ್‍ಪಿ ಡಿ.ನಾಗಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಸಮುಚ್ಚಯ ಪೊಲೀಸ್ ಠಾಣೆಗಳ ಉಪ ನಿರೀಕ್ಷಕರುಗಳಾದ ಸಂತೋಷ್ ಕಶ್ಯಪ್, ಸುರೇಶ್ ಬೋಪಣ್ಣ ಹಾಗೂ ಉದ್ಯಮಿ ಪಳಗಂಡ ಪ್ರತಾಪ್ ಭಾಗವಹಿಸಲಿದ್ದಾರೆ ಎಂದರು.

ಕ್ಲಬ್‍ನ ಕಾರ್ಯದರ್ಶಿ ಅಶ್ವಥ್ ಗಣಪತಿ, ಖಜಾಂಚಿ ಪಿ. ಸುಬ್ಬಯ್ಯ, ಗಿಲ್ ಸೋಮಯ್ಯ, ರವಿ ಉತ್ತಪ್ಪ, ಕರ್ನಂಡ ಎಂ. ರಘು ಸೋಮಯ್ಯ ಮತ್ತಿತರರು ಭಾಗವಹಿಸಿದ್ದರು.