ಸೋಮವಾರಪೇಟೆ, ನ. 18: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕೊಡಗಿನ ನಾಲ್ವರು ಸಾಹಿತಿಗಳಿಗೆ ‘ಕನ್ನಡ ಚೇತನ’-‘ಕನ್ನಡ ಯುವ ರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಮೈಸೂರಿನ ಲಷ್ಕರ್ ಮೊಹಲ್ಲಾದ ಶ್ರೀ ರಾಮಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಜಿಲ್ಲೆಯ ಸಾಹಿತಿ ಸುನಿತಾ ಲೋಕೇಶ್ ಸೋಮವಾರಪೇಟೆ ಕರವೇ ಸಾಹಿತ್ಯ ಘಟಕದ ಅಧ್ಯಕ್ಷ, ಹೋಬಳಿ ಜಾನಪದ ಪರಿಷತ್ತಿನ ನಿರ್ದೇಶಕ ಕೆ.ಪಿ. ಸುದರ್ಶನ್ ಮತ್ತು ಮಂಡ್ಯದ ಸತೀಶ್ ಜವರೇಗೌಡ ಅವರುಗಳಿಗೆ ‘ಕನ್ನಡ ಚೇತನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಕಾರ್ಯಕ್ರಮದಲ್ಲಿ ಕವಯತ್ರಿ, ಸೋಮವಾರಪೇಟೆಯ ರಾಣಿ ರವೀಂದ್ರ, ಮೈಸೂರಿನ ಪ್ರದೀಪ್ ಕುಮಾರ್, ಸಾಂಸ್ಕøತಿಕ ಕ್ಷೇತ್ರದ ಸೇವೆಗಾಗಿ ತಣ್ಣೀರುಹಳ್ಳದ ಪುರುಷೋತ್ತಮ್ ಅವರುಗಳಿಗೆ ‘ಕನ್ನಡ ಯುವ ರತ್ನ’ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ರಾಜ್ಯ ಸಮಿತಿ ಗೌರವಾಧ್ಯಕ್ಷೆ ಪದ್ಮಿನಿ ಶಿವಣ್ಣ, ಉಪಾಧ್ಯಕ್ಷೆ ಅಮೀನಾ ಬೇಗಂ, ಮೈಸೂರಿನ ಉಪ ಮಹಾಪೌರ ರತ್ನ ಲಕ್ಷ್ಮಣ, ನಗರ ಪಾಲಿಕೆ ಸದಸ್ಯೆ ರಜಿನಿ ಅಣ್ಣಯ್ಯ, ಕರವೇ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ಜಾನಪದ ಪರಿಷತ್ ಹೋಬಳಿ ಉಪಾಧ್ಯಕ್ಷ ನ.ಲ. ವಿಜಯ ಸೇರಿದಂತೆ ಇತರರು ಭಾಗವಹಿಸಿದ್ದರು.