ವೀರಾಜಪೇಟೆ, ನ. 17: ವೀರಾಜಪೇಟೆ ಬಳಿಯ ಕುಟ್ಟಂದಿ ಗ್ರಾಮದ ಆಪ್ರಾಪ್ತ ವಿದ್ಯಾರ್ಥಿನಿಯೋರ್ವಳು ಸ್ನೇಹಿತನೊಂದಿಗೆ ಸರಸ ಸಲ್ಲಾಪ ನಡೆಸಿ ಅಕ್ರಮ ಗರ್ಭವತಿಯಾದ ನಂತರ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇಲ್ಲಿನ ಗ್ರಾಮಾಂತರ ಪೊಲೀಸರು ಪೋಕ್ಸೋ ಕಾಯಿದೆಯಡಿ ಬಾಳುಗೋಡು ಗ್ರಾಮದ ಬಾಲಕನೊರ್ವನ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಬಾಲಕನು ಬಾಲಕಿಯೊಂದಿಗೆ ಪ್ರೇಮದ ನೆಪದಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದು, ಪ್ರಕರಣ ಹೆರಿಗೆಯ ತನಕ ತಲುಪಿದೆ. ಜನ್ಮ ತಾಳಿದ ಹೆಣ್ಣು ಮಗು ಹೆರಿಗೆಯಾದ ತಕ್ಷಣ ಮೃತಪಟ್ಟಿದೆ.
ಬಾಲಕಿಯ ಹೆರಿಗೆ ಸುದ್ದಿ ತಿಳಿಯುತ್ತಿದ್ದಂತೆ ಬಾಲಕ ನಾಪತ್ತೆಯಾಗಿದ್ದಾನೆ. ಮೃತ ಮಗುವನ್ನು ಮಡಿಕೇರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ. ಹೆರಿಗೆಯಾದ ನಂತರ ತೀವ್ರ ಅಸ್ವಸ್ಥಗೊಂಡಿರುವ ಬಾಲಕಿಯನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿಸಿದೆ.