ಪೆÇನ್ನಂಪೇಟೆ, ನ. 17 : ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ರೂ. 15 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೂರು ಅಂತಸ್ತಿನ ಪೆÇನ್ನಂಪೇಟೆ ನ್ಯಾಯಾಲಯ ಸಂಕೀರ್ಣ ಕಟ್ಟಡವನ್ನು ಮುಂದಿನ ತಿಂಗಳ 23ರಂದು ಲೋಕಾರ್ಪಣೆಗೊಳಿಸಲು ಕೊಡಗು ಆಡಳಿತಾತ್ಮಕ ನ್ಯಾಯಾಧೀಶರು ಹಸಿರು ನಿಶಾನೆ ತೋರಿಸಿದ್ದಾರೆ. ಇದರಿಂದಾಗಿ ಕಳೆದ ನಾಲ್ಕು ವರ್ಷಗಳಿಂದ ನಿರ್ಮಿಸಲಾಗುತ್ತಿದ್ದ ನೂತನ ನ್ಯಾಯಾಲಯ ಕಟ್ಟಡ ಡಿ.23ರಿಂದ ಸಾರ್ವಜನಿಕ ಸೇವೆಗೆ ಸಮರ್ಪಣೆಯಾಗಲಿರುವದಾಗಿ ಪೆÇನ್ನಂಪೇಟೆ ವಕೀಲರ ಸಂಘುದ ಅಧ್ಯಕ್ಷ ಎಸ್. ಡಿ. ಕಾವೇರಪ್ಪ ತಿಳಿಸಿದ್ದಾರೆ.
ಇಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಪೆÇನ್ನಂಪೇಟೆ ವಕೀಲರ ಸಂಘದ ನಿಯೋಗ ಬೆಂಗಳೂರಿಗೆ ತೆರಳಿ ಕೊಡಗು ಆಡಳಿತಾತ್ಮಕ ನ್ಯಾಯಾದೀಶರಾದ ಆರ್. ಬಿ. ಬೂದಿಹಾಳ್ ಅವರನ್ನು ಭೇಟಿ ಮಾಡಿದ ವೇಳೆ ನೂತನ ಕಟ್ಟಡ ಉದ್ಘಾಟನೆಗೆ ದಿನಾಂಕ ಅಂತಿಮ ಗೊಳಿಸಿದ್ದಾರೆ ಎಂದು ಹೇಳಿದರು.
2010ರಲ್ಲಿ ಪೆÇನ್ನಂಪೇಟೆಗೆ ಮಂಜೂರಾದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ಇಲ್ಲಿನ ಎಫ್.ಸಿ.ಐ. ಕಟ್ಟಡವೊಂದರಲ್ಲಿ ಕಳೆದ 7 ವರ್ಷಗಳಿಂದ ತಾತ್ಕಾಲಿಕ ವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಭವ್ಯವಾದ ಮತ್ತು ಸುಸಜ್ಜಿತ ನೂತನ ನ್ಯಾಯಾಲಯ ಕಟ್ಟಡ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ಹಾಲಿ ನ್ಯಾಯಾಲಯದ ಕಾರ್ಯ ಕಲಾಪಗಳು ಸ್ಥಳಾಂತರಗೊಳ್ಳಲಿವೆ. ಇದರಿಂದ ಈ ಭಾಗದ ಜನತೆಯ ಬಹುಕಾಲದ ಬೇಡಿಕೆ ಈಡೇರಿ ದಂತಾಗುತ್ತದೆ ಎಂದು ತಿಳಿಸಿದ ಕಾವೇರಪ್ಪ ಅವರು, ನೂತನ ಕಟ್ಟಡ ಉದ್ಘಾಟನೆ ಕುರಿತು ಅಗತ್ಯ ಸಿದ್ಧತೆಗಳನ್ನು ಪೆÇನ್ನಂಪೇಟೆ ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖೆ ವತಿಯಿಂದ ಜಂಟಿಯಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿದ್ದ ಪೆÇನ್ನಂಪೇಟೆ ವಕೀಲರ ಸಂಘದ ಗೌರವ ಕಾರ್ಯದರ್ಶಿ ಮಚ್ಚಮಾಡ ಟಿ.ಕಾರ್ಯಪ್ಪ ಮಾತನಾಡಿ, ಪೆÇನ್ನಂಪೇಟೆಯ ನೂತನ ನ್ಯಾಯಾಲಯ ಕಟ್ಟಡ ಲೋಕಾರ್ಪಣೆಗೆ ದಿನಾಂಕ ನಿಗದಿ ಯಾಗಿರುವದು ಹೆಚ್ಚು ಹರ್ಷ ಮೂಡಿಸಿದೆ ಎಂದರು.
ಡಿ.23ರಂದು ಜರಗುವ ಉದ್ಘಾಟನಾ ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಕೊಡಗು ಆಡಳಿತಾತ್ಮಕ ನ್ಯಾಯಾಧೀಶ ಆರ್.ಬಿ ಬೂದಿಹಾಳ್, ಹಿರಿಯ ನ್ಯಾಯಾದೀಶರಾದ ಎ.ಎಸ್ ಬೋಪಣ್ಣ, ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಇತರ ನ್ಯಾಯಾಧೀಶರನ್ನು, ಕಾನೂನು ಮಂತ್ರಿಗಳಾದ ಟಿ.ಬಿ. ಜಯಚಂದ್ರ, ಲೋಕೋಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ, ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಸಂಸದರು ಮತ್ತು ಶಾಸಕರು, ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆಹ್ವಾನಿಸಲಾಗುವದು ಎಂದು ಎಂ.ಟಿ ಕಾರ್ಯಪ್ಪ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಪೆÇನ್ನಂಪೇಟೆ ವಕೀಲರ ಸಂಘದ ಪದಾಧಿಕಾರಿಗಳಾದ ವಿ.ಜಿ. ಮಂಜುನಾಥ್ , ಟಿ.ಎಂ. ಅಣ್ಣಯ್ಯ, ಎ.ಕೆ.ಮೋನಿ ಪೆÇನ್ನಪ್ಪ ಹಾಗೂ ಕಂಜಿತಂಡ ಅನಿತಾ ಉಪಸ್ಥಿತರಿದ್ದರು.