ಮಡಿಕೇರಿ, ನ. 18: ಜಿಲ್ಲೆಯ ಅಂಗನವಾಡಿಗಳಿಗೆ ಸರಬ ರಾಜಾಗುತ್ತಿರುವ ಆಹಾರ ಹಾಗೂ ಇತರ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪವಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಬಾರ ನಿರ್ದೇಶಕರನ್ನು ಅಮಾನತಿನಲ್ಲಿಟ್ಟು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಸ್ಟೋರ್(ಜನತಾ ಬಜಾóರ್)ನ ಆಡಳಿತ ಮಂಡಳಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನತಾ ಬಜಾóರ್ ಅಧ್ಯಕ್ಷ ಎನ್.ಎ. ರವಿಬಸಪ್ಪ ಹಾಗೂ ನಿರ್ದೇಶಕರುಗಳು, ಜಿಲ್ಲೆಯ ಸರಕಾರಿ ಸ್ವಾಮ್ಯದ ಎಲ್ಲಾ ಇಲಾಖೆ ಮತ್ತು ಸಂಸ್ಥೆಗಳಿಗೆ ಜನತಾ ಬಜಾóರ್ ಕಳೆದ 50 ವರ್ಷಗಳಿಂದ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ರಿಯಾಯಿತಿ ದರದಲ್ಲಿ ಸರಬರಾಜು ಮಾಡಿಕೊಂಡು ಬರುತ್ತಿದೆ. 2012ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಸರ್ವ ಅಧಿಕಾರಿಗಳ ಸಭೆ ನಡೆಸಿ ಅಂಗನವಾಡಿಗಳಿಗೆ ಆಹಾರ ಸಾಮಗ್ರಿ ಪೂರೈಕೆಯಲ್ಲಿ ಯಾವದೇ ಖಾಸಗಿ ವ್ಯಕ್ತಿಗಳ ಮತ್ತು ಸಂಸ್ಥೆಗಳ ಪ್ರಭಾವವಿರಬಾರದು ಎಂಬ ಕಾರಣಕ್ಕೆ ಸಹಕಾರ ಸಂಸ್ಥೆಗಳಾದ ಟಿಎಪಿಸಿಎಂಸಿ ಅಥವಾ ಜನತಾ ಬಜಾರ್‍ನಿಂದ ಖರೀದಿಸಬೇಕೆಂದು ಆಹಾರ ಪದಾರ್ಥಗಳ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ತೀರ್ಮಾನಿಸಿದ್ದರು. ಅದರಂತೆ 2015 ರವರೆಗೂ ಜನತಾ ಬಜಾóರ್‍ನಿಂದಲೇ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡಿಕೊಂಡು ಬರಲಾಗಿತ್ತು. ಆದರೆ 2015ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾಗಿ ಅಧಿಕಾರವಹಿಸಿಕೊಂಡ ಅಧಿಕಾರಿ ಜನತಾ ಬಜಾóರ್‍ನಿಂದ ಆಹಾರ ಸಾಮಗ್ರಿ ಖರೀದಿಸಬೇಕಾದರೆ ತಮಗೆ ಮಾಸಿಕ ಇಂತಿಷ್ಟು ಹಣವನ್ನು ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಸಹಕಾರಿ ಸಂಸ್ಥೆಯಾಗಿರುವ ಜನತಾ ಬಜಾರ್‍ನಲ್ಲಿ ಈ ರೀತಿ ಹಣ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ಹಿನ್ನೆಲೆ ಜನತಾ ಬಜಾರ್‍ನ ಸಾಮಗ್ರಿಗಳು ಕಳಪೆ ಎಂದು ಘೋಷಿಸಿ ಇಲ್ಲಿಂದ ಸರಬರಾಜು ಸ್ಥಗಿತಗೊಳಿಸಿ ತಾವೇ ಸ್ವತಃ ಮೈಸೂರಿನಿಂದ ಖರೀದಿ ಮಾಡಲು ತೊಡಗಿದ್ದರು ಎಂದು ರವಿಬಸಪ್ಪ ಆರೋಪಿಸಿದರು.

ಈ ಅಧಿಕಾರಿ ಕೂಡ್ಲೂರುವಿ ನಲ್ಲಿರುವ ಎಂ.ಎಸ್.ಪಿ.ಟಿ.ಸಿ. ಮಹಿಳಾ ಘಟಕದ ಮಹಿಳೆಯರಿಂದ ಹಣ ಪಡೆಯುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಸಿಕ್ಕ ಬಳಿಕ ಈ ವಿಷಯ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿ ಅವರು ಜಿಲ್ಲೆಯಿಂದ ವರ್ಗಾವಣೆಗೊಂಡರು.

ಆದರೆ ವರ್ಗಾವಣೆ ನಂತರವೂ ಅಂಗನವಾಡಿಗಳಿಗೆ ಆಹಾರ ಸಾಮಗ್ರಿಗಳನ್ನು ಖರೀದಿಸುವ ದಂಧೆಯನ್ನು ಬಿಡದೆ ಉಪ ನಿರ್ದೇಶಕರ ಹುದ್ದೆಗೆ ಅರ್ಹತೆಯನ್ನೇ ಹೊಂದದ ಸಿಬ್ಬಂದಿಯೊಬ್ಬರಿಗೆ ಅಧಿಕಾರವಹಿಸಿಕೊಟ್ಟು ಮೈಸೂರಿ ನಿಂದ ಖರೀದಿಸುತ್ತಿರುವದಾಗಿ ಆರೋಪಿಸಿದರು.

ಉಪ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿರುವ ಮಹಿಳಾ ಅಧಿಕಾರಿಯೊಬ್ಬರು ಸುಮಾರು 6 ಹುದ್ದೆಗಳನ್ನು ನಿರ್ವಹಿಸುತ್ತಿದ್ದು, ಗುಣಮಟ್ಟ ಪರಿಶೀಲನೆ, ಚೆಕ್ ಬರೆಯುವದು, ಚೆಕ್‍ಗೆ ಸಹಿ ಮಾಡುವದು, ಪ್ಲಾನಿಂಗ್ ಅಧಿಕಾರಿಯ ಹುದ್ದೆ ಮತ್ತು ಹಣ ಡ್ರಾ ಮಾಡುವ ಅಧಿಕಾರ ಎಲ್ಲವನ್ನೂ ತಾನೇ ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ಆಹಾರ ಸಾಮಗ್ರಿಗಳ ದರ ಕುಸಿದಿದ್ದರೂ, ಕಳೆದ 10 ತಿಂಗಳಿನಿಂದ ಹಿಂದಿನ ದರದಲ್ಲೇ ಆಹಾರ ಸಾಮಗ್ರಿ ಖರೀದಿಸುವದರೊಂದಿಗೆ ಅಧಿಕಾರ ಕೊಟ್ಟ ಅಧಿಕಾರಿ ಮತ್ತು ಅಧಿಕಾರ ಪಡೆದ ಅಧಿಕಾರಿಗಳು ಕಮಿಷನ್ ಹಂಚಿಕೊಳ್ಳುತ್ತಿದ್ದಾರೆ ಎಂದು ರವಿಬಸಪ್ಪ ಗಂಭೀರ ಆರೋಪ ಮಾಡಿದರು.

ಈ ಸಂಬಂಧವಾಗಿ 2016ರ ಆಗಸ್ಟ್ ಮತ್ತು ಅಕ್ಟೋಬರ್‍ನಲ್ಲಿ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿ ಜನತಾ ಬಜಾóರ್ ನಿಂದಲೇ ಆಹಾರ ಸಾಮಗ್ರಿ ಖರೀದಿಸ ಬೇಕೆಂದು ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆಯ ಅಧಿಕಾರಿ ಮಮ್ತಾಜ್ ಅವರಿಗೆ ಜಿ.ಪಂ. ಅಧ್ಯಕ್ಷರು ಆದೇಶ ನೀಡಿದ್ದರು.

ಆದರೆ ಆದೇಶವನ್ನು ಉಲ್ಲಂಘಿಸಿದ ಕಾರಣ ಇತ್ತೀಚೆಗೆ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅಧಿಕಾರಿಗೆ ಮತ್ತೆ ಆದೇಶ ನೀಡಲಾಗಿದ್ದರೂ, ಉಪ ನಿರ್ದೇಶಕರು ರಾಜ್ಯ ನಿರ್ದೇಶಕರಿಗೆ ಪತ್ರ ಬರೆದು ಸ್ಪಷ್ಟೀಕರಣ ಕೇಳಿದ್ದಾರೆ. ಜಿ.ಪಂ.ನಲ್ಲಿ ಕೈಗೊಂಡ ನಿರ್ಣಯವನ್ನು ಜಾರಿಗೆ ತರುವದು ಅಧಿಕಾರಿಗಳ ಕರ್ತವ್ಯ ವಾಗಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ಈ ಅಧಿಕಾರಿ ನಿರ್ದೇಶಕರಿಗೆ ಪತ್ರ ಬರೆದಿರುವದನ್ನು ಗಮನಿಸಿದರೆ, ಹಗರಣದಲ್ಲಿ ಇಲಾಖೆಯ ಉನ್ನತ ಅಧಿಕಾರಿಗಳೂ ಶಾಮೀಲಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ ಎಂದು ರವಿ ಬಸಪ್ಪ ಆರೋ ಪಿಸಿದರು. ಉಪ ನಿರ್ದೇಶಕರನ್ನು ತಕ್ಷಣ ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕು, ಅಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು ಮತ್ತು ಆ ಹುದ್ದೆಗೆ ಸೂಕ್ತ ಅಧಿಕಾರಿಯನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಜನತಾ ಬಜಾರ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ಜನತಾ ಬಜಾóರ್‍ನಿಂದ ಗುಣಮಟ್ಟದ ಆಹಾರ ಸಾಮಗ್ರಿ ಹಾಗೂ ಇತರ ಸಾಮಗ್ರಿಗಳು ಸರಬರಾಜಾಗುತ್ತಿದ್ದು, ಕಳಪೆ ಗುಣ ಮಟ್ಟದ ಸಾಮಗ್ರಿ ಸರಬರಾಜಾಗಿರುವ ಬಗ್ಗೆ ಇದುವರೆಗೆ ದೂರು ಬಂದಿಲ್ಲ ಮತ್ತು ತನಿಖೆಯೂ ನಡೆದಿಲ್ಲ ಎಂದರು. ಒಂದು ವೇಳೆ ಕಳಪೆ ಗುಣಮಟ್ಟದ ಸಾಮಗ್ರಿ ಸರಬ ರಾಜಾಗಿದ್ದರೆ, ಅದನ್ನು ಪರೀಕ್ಷೆ ಗೊಳಪಡಿಸುವ ಅಧಿಕಾರ ಅಧಿಕಾರಿಗಳಿಗಿದ್ದು, ಈ ಅಧಿಕಾರಿ ಅಂತಹ ಯಾವದೇ ಪ್ರಯತ್ನವನ್ನು ಮಾಡಿಲ್ಲ. ಅಧಿಕಾರಿ ವಿರುದ್ಧ ಕ್ರಮ ಜರುಗಿಸದಿದ್ದಲ್ಲಿ ಸಹಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಬೃಹತ್ ಹೋರಾಟ ರೂಪಿಸಬೇಕಾಗುತ್ತದೆ ಎಂದು ದೇವಯ್ಯ ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ನಿರ್ದೇಶಕರು ಗಳಾದ ಬೇಬಿ ಪೂವಯ್ಯ, ಎನ್.ಎಸ್. ಕಸ್ತೂರಿ, ಬಿ.ಕೆ. ತಮ್ಮಯ್ಯ ಹಾಗೂ ವ್ಯವಸ್ಥಾಪಕಿ ಬಿ.ಕೆ. ರೂಪಾ ಹಾಜರಿದ್ದರು.