ಗೋಣಿಕೊಪ್ಪ ವರದಿ, ನ. 18: ಕನ್ನಡ ಸಾಹಿತ್ಯಾ ಸಮ್ಮೇಳನದಲ್ಲಿ ತಾ. 19ರಂದು (ಇಂದು) ಮಹಿಳಾ ಗೋಷ್ಠಿ, ಸಾಂಸ್ಕøತಿಕ ಸಂಭ್ರಮ, ಗೀತಗಾಯನ, ಕವಿಗೋಷ್ಠಿ ಸೇರಿದಂತೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ರಿಂದ ಹಿರಿಯ ಸಾಹಿತಿ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಮಹಿಳಾ ಗೋಷ್ಠಿ ನಡೆಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಸವಾಲುಗಳು, ಕೊಡಗಿನ ಮಹಿಳಾ ಸಾಹಿತ್ಯದ ಮಜಲುಗಳು, ಕೌಟುಂಬಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದಲ್ಲಿ ಗೋಷ್ಠಿ ನಡೆಯಲಿದೆ. ಸಾಂಸ್ಕøತಿಕ ಸಂಭ್ರಮ 11.30ಕ್ಕೆ ಆರಂಭಗೊಳ್ಳಲಿದೆ. ಚೆಪ್ಪುಡೀರ ಪೊನ್ನಪ್ಪ ಉದ್ಘಾಟಿಸಲಿ ದ್ದಾರೆ. 12.30ಕ್ಕೆ ಗೀತಗಾಯನ ನಡೆಯಲಿದೆ. ಇದರ ಉದ್ಘಾಟನೆ ಯನ್ನು ಕಲಾವಿದೆ ಚೇಂದೀರ ನಿರ್ಮಲಾ ಬೋಪಣ್ಣ ನಡೆಸಲಿದ್ದಾರೆ.
ಮ. 1.45 ರಿಂದ ಕವಿಗೋಷ್ಠಿ ನಡೆಯಲಿದೆ. ಕವಿತಾ ರೈ ಉದ್ಘಾಟಿಸಲಿದ್ದಾರೆ. 17 ಕವಿಗಳು ತಮ್ಮ ಕವನವನ್ನು ವಾಚಿಸಲಿದ್ದಾರೆ. ಮ. 3 ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಈ ಸಂದರ್ಭ ವಿಶೇಷ ಗೌರವ ಕಾರ್ಯಕ್ರಮವಾಗಿ ಹಲವು ದಶಕಗಳಿಂದ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಪತ್ರಕರ್ತ ಜಿ. ರಾಜೇಂದ್ರ ಅವರಿಗೆ ವಿಶೇಷ ಗೌರವಾರ್ಪಣೆ ನಡೆಯಲಿದೆ.
ನಂತರ ವಿವಿಧ ಕ್ಷೇತ್ರದವರಿಗೆ ಸನ್ಮಾನ ನಡೆಯಲಿದೆ. ಸಾಹಿತ್ಯಾ ಕ್ಷೇತ್ರದಲ್ಲಿ ಚೇಂದ್ರಿಮಾಡ ಗ. ಮುತ್ತಪ್ಪ, ಕ್ರೀಡಾಪಟು ವಿ.ಆರ್. ರಘುನಾಥ್, ಶಿಕ್ಷಣದಲ್ಲಿ ಮುಕ್ಕಾಟೀರ ಪುನೀತ್ ಕುಟ್ಟಯ್ಯ, ಕೃಷಿಯಲ್ಲಿ ಸೋಮೆಯಂಡ ಗಣೇಶ್ ತಿಮ್ಮಯ್ಯ, ಸಮಾಜ ಸೇವೆಯಲ್ಲಿ ಉಂಬಾಯಿ, ಶಿಕ್ಷಣ ಕ್ಷೇತ್ರದಲ್ಲಿ ಉಷಾರಾಣಿ, ವೈದ್ಯಕೀಯ ದಲ್ಲಿ ಡಾ. ಯತಿರಾಜ್, ಮಹಿಳಾ ಸಬಲೀಕರಣದಲ್ಲಿ ಅಪ್ಪನೆರವಂಡ ಶಾಂತಿ ಅಚ್ಚಪ್ಪ, ಯುವ ಪ್ರತಿಭೆ ಕಾರ್ತಿಕ್ ಶೆಣೈ, ಶಿಲ್ಪಕಲೆಯಲೆಯಲ್ಲಿ ಎನ್. ಪಿ. ಕಾವೇರಪ್ಪ, ಸಂಗೀತದಲ್ಲಿ ಚರಣ್‍ರಾಜ್, ಚಲನಚಿತ್ರದಲ್ಲಿ ಫಯಾಜ್ ಖಾನ್, ಛಾಯಾಚಿತ್ರದಲ್ಲಿ ಶಿವಣ್ಣ, ಜಾನಪದದಲ್ಲಿ ಬೆಸೂರು ಶಾಂತೇಶ್, ಮಾಧ್ಯಮ ಕ್ಷೇತ್ರದಲ್ಲಿ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರಿಗೆ ಸನ್ಮಾನ ನಡೆಯಲಿದೆ.
4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 6.30ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಜಿ. ಪಂ. ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಉದ್ಘಾಟಿಸಲಿದ್ದಾರೆ.