ವೀರಾಜಪೇಟೆ, ನ. 17: ವೀರಾಜಪೇಟೆಯಲ್ಲಿ ರೈತರು ಹಾಗೂ ಕಾರ್ಮಿಕರ ಸಂಘಟನೆಗಾಗಿ ನಿನ್ನೆ ದಿನ ಆಯೋಜಿಸಿದ್ದ ಮಾನವಹಕ್ಕು ಜಾಗೃತಿ ಆಯೋಗದ ಸಭೆಯಲ್ಲಿ ಜಿಲ್ಲಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಪಡಿಕ್ಕಲ್ ಕುಸುಮಾವತಿ ಚಂದ್ರಶೇಖರ್ ಮೇಲೆ ಸಭೆಯ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ ದೂರಿನ ಮೇರೆ ನಗರ ಪೊಲೀಸರು ಮಾಪಿಳ್ಳೆತೋಡಿನ ರಫೀಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಮಾನವ ಹಕ್ಕು ಜಿಲ್ಲಾ ಸಮಿತಿ ಮಹಿಳಾ ಘಟಕದ ಸಭೆಯಲ್ಲಿ ಸುಮಾರು 20ಮಂದಿ ಇದ್ದು ಕುಸುಮಾವತಿ ಹಾಗೂ ರಫೀಕ್‍ನ ನಡುವೆ ಸಂಘಟನೆ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಹಲ್ಲೆಯೊಂದಿಗೆ ಸಭೆ ಅಂತ್ಯಗೊಂಡಿದ್ದು, ಹಲ್ಲೆಯ ನಂತರ ರಫೀಕ್ ತಲೆ ಮರೆಸಿಕೊಂಡಿರುವದಾಗಿ ಪೊಲೀಸರು ತಿಳಿಸಿದ್ದಾರೆ.