ಪೊನ್ನಂಪೇಟೆ, ನ. 18: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ಸಂದೇಶ ಸಾರುವ ಗೀತೆಗಳು ಗಾಯಕರ ದÀನಿಯಲ್ಲಿ ಮೂಡಿಬಂದವು.ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದ ಹರದಾಸ ಅಪನೆರವಂಡ ಅಪಚ್ಚಕವಿ ವೇದಿಕೆ ಯಲ್ಲಿ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಗಾಯಕರುಗಳಾದ ಚೆಕ್ಕೇರ ಪಂಚಮ್ ತ್ಯಾಗರಾಜ್, ಉಳುವಂಗಡ ಲೋಹಿತ್ ಭೀಮಯ್ಯ, ಮಾಳೇಟಿರ ಅಜಿತ್ ಪೂವಣ್ಣ, ಲಿಖಿತಾ, ಡಿ.ಪಿ. ಸತೀಶ್, ಉಜ್ವಲ್ ರಂಜಿತ್, ಪರಮೇಶ್, ಕಿರುಗೂರು ನವೀನ್ ಗಾನಸುಧೆ ಹರಿಸಿದರು. ವಾಸವಿ ಯುವತಿ ಮಂಡಳಿಯವರು ಸಮೂಹ ಗೀತೆ ಹಾಡಿದರು.
ಶಕ್ತಿ ಪತ್ರಿಕೆಯ ಸಂಪಾದಕರು, ಕಲಾವಿದರೂ ಆದ ಜಿ. ಚಿದ್ವಿಲಾಸ್ ಅವರು ತನುವು ನಿನ್ನದು ಎಂಬ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ನಾಡು ನುಡಿ ಉಳಿವಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಭಾಷೆ ಉಳಿದರೆ ಮಾತ್ರ ನಮ್ಮ ತನ ಉಳಿಯಲು ಸಾಧ್ಯ. ಸಂಗೀತವು ಕೂಡ ಒಂದು ಭಾಷೆಯಾಗಿದ್ದು ಸಾಹಿತ್ಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಈ ಸಂದರ್ಭ ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಅಧ್ಯಕ್ಷ ಮುದೂಶ್ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಚಮ್ಮಟೀರ ಪ್ರವೀಣ್ ಉತ್ತಪ್ಪ, ಮಾಧ್ಯಮ ಕಾರ್ಯದರ್ಶಿ ಜಗದೀಶ್ ಜೋಡುಬೀಟಿ ಉಪಸ್ಥಿತರಿದ್ದರು. ದಮಯಂತಿ ಸ್ವಾಗತಿಸಿದರು, ಚೆನ್ನನಾಯಕ್ ನಿರೂಪಿಸಿದರು, ತೇಲಪಂಡ ಕವನ್ ಕಾರ್ಯಪ್ಪ ವಂದಿಸಿದರು.