ಆಲೂರು-ಸಿದ್ದಾಪುರ, ನ. 19: ಕ್ರೀಡೆಯಿಂದ ಆರೋಗ್ಯ ವೃದ್ಧಿ ಯಾಗುತ್ತದೆ ಎಂದು ಶನಿವಾರ ಸಂತೆಯ ನಿವೃತ್ತ ಆರೋಗ್ಯ ಅಧಿಕಾರಿ ನಾಗರಾಜ್ ಅಭಿಪ್ರಾಯಪಟ್ಟರು.
ಭಾರತ ಸರ್ಕಾರ ನೆಹರು ಯುವ ಕೇಂದ್ರ ಮಡಿಕೇರಿ, ತಾಲೂಕು ಯುವ ಒಕ್ಕೂಟ ಸೊಮವಾರಪೇಟೆ, ಶ್ರೀ ಬಸವೇಶ್ವರ ಯುವಕ ಸಂಘ ಶುಂಠಿ ಮಂಗಳೂರು, ಪೂಜಾ ಯುವತಿ ಮಂಡಳಿ ಶುಂಠಿ ಇವರ ಸಂಯುಕ್ತ ಆಶ್ರಯದಲ್ಲಿ ಶುಂಠಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಕ್ರೀಡೆಗಳು ಮರೆಯಾಗು ತ್ತಿರುವ ಸಂದರ್ಭ ಸಂಘ-ಸಂಸ್ಥೆಗಳು ಇಂತಹ ಕ್ರೀಡೆಗಳಿಗೆ ಒತ್ತು ನೀಡುತ್ತಿರುವದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಶ್ರೀ ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎಂ.ಪಿ. ಲಿಂಗರಾಜು ವಹಿಸಿದ್ದರು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಲೆಕ್ಕಾಧಿಕಾರಿ ಮಹೇಶ್, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ರವಿ, ಶುಂಠಿ ಗ್ರಾಮ ಸಮಿತಿ ಅದ್ಯಕ್ಷ ಎಸ್.ಕೆ. ವಿನೋದ್, ಶುಂಠಿ ಮಂಗಳೂರು ಗ್ರಾಮ ಸಮಿತಿ ಅಧ್ಯಕ್ಷ ಎಂ.ಬಿ. ಹೂವಯ್ಯ, ಕೊರ್ಲಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಕೆ.ಎಂ. ನಾಗೇಂದ್ರ, ಶುಂಠಿ ಶಾಲಾ ಮುಖ್ಯೋಪಾಧ್ಯಾಯ ಮಂಜಪ್ಪ, ಸೊಮವಾರಪೇಟೆ ತಾಲೂಕು ಯುವ ಒಕ್ಕೂಟದ ಉಪಾಧ್ಯಕ್ಷ ಎಂ.ಡಿ. ಹರೀಶ್ ಕುಮಾರ್, ಪೂಜಾ ಯುವತಿ ಮಂಡಳಿ ಅಧ್ಯಕ್ಷೆ ಲತಾ ಬಸವರಾಜು ಮುಂತಾದವರಿದ್ದರು.