ಮಡಿಕೇರಿ, ನ. 19: ಶ್ರೀ ರಾಮಾಂಜನೇಯ ಭಜನಾ ಮಂಡಳಿಯ 27ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ಓಂಕಾರೇಶ್ವರ ದೇವಸ್ಥಾನ ಸಹಯೋಗದೊಂದಿಗೆ ಇಂದು ಬೆಳಿಗ್ಗೆ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಏಕಾಹ ಭಜನೆ ಜರುಗಿತು.

ಸೂರ್ಯೋದಯ ಸಂದರ್ಭ ಉದ್ಯಮಿ ಎಂ.ಕೆ. ಅರುಣ್ ಅವರು ಭದ್ರದೀಪ ಜ್ವಲನೆ ಮಾಡಿದ ಬಳಿಕ ಜಿಲ್ಲೆಯ ಸುಮಾರು 14 ಭಜನಾ ತಂಡಗಳು ಸಂಜೆ ಸೂರ್ಯಾಸ್ತದವರೆಗೆ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟವು.

ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಬಳಿಕ ಶ್ರೀ ಸತ್ಯಸಾಯಿ ಸೇವಾ ಸಮಿತಿ ಮಡಿಕೇರಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಹಿಳಾ ತಂಡ, ಜಿ.ಎಸ್.ಬಿ. ಸಭಾ ಕಾಶೀಮಠ ಮಡಿಕೇರಿ, ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ ಮಡಿಕೇರಿ, ಶ್ರೀ ಗೌರಿ ಶಂಕರ ಭಜನಾ ಸೇವಾ ಸಮಿತಿ ಮೇಕೇರಿ, ಶ್ರೀ ವೆಂಕಟೇಶ್ವರ ಕಲಾತಂಡ ಅಶೋಕಪುರ, ಶ್ರೀ ವಿನಾಯಕ ಸೇವಾ ಸಮಿತಿ ತೊಂಬತ್ತುಮನೆ, ಶ್ರೀ ಓಂ ಶಕ್ತಿ ಭಜನಾ ಮಂಡಳಿ ಭೂತನಕಾಡು, ಶ್ರೀ ಕಾವೇರಿ ಭಜನಾ ಮಂಡಳಿ ಕುಶಾಲನಗರ, ಶ್ರೀ ಅಂತರ್ರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ, ಮಡಿಕೇರಿ, ಶ್ರೀ ಸ್ಫೂರ್ತಿ ಮಹಿಳಾ ತಂಡ ಮಡಿಕೇರಿ ಕೊನೆಯದಾಗಿ ಶ್ರೀರಾಮಾಂಜನೇಯ ಭಜನಾ ಮಂಡಳಿಯ ಭಜನೆಯೊಂದಿಗೆ ಮಂಗಳಾಚರಣೆ, ಮಹಾಪೂಜೆ ಹಾಗೂ ಪ್ರಸಾದ ವಿತರಿಸಲಾಯಿತು.

ಇದೇ ಸಂದರ್ಭ ಮಡಿಕೇರಿ ಇಸ್ಕಾನ್‍ನ ಶ್ರೀನಿಧಿ (ಸಟೀಪತಿದಾಸ್) ಅವರಿಂದ ಪ್ರವಚನ ಜರುಗಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಶ್ರೀ ರಾಮಾಂಜನೇಯ ಭಜನಾ ಮಂಡಳಿಯ ಪ್ರಮುಖರಾದ ಕೆ.ಕೆ. ಮಹೇಶ್ ಕುಮಾರ್, ಚಂದ್ರಶೇಖರ್, ಡಾ. ಎಂ.ಜಿ. ಪಾಟ್ಕರ್, ಡಾ. ಜಯಲಕ್ಷ್ಮಿ ಪಾಟ್ಕರ್ ಹಾಗೂ ಇನ್ನಿತರರು ಇದ್ದರು.