ಮಡಿಕೇರಿ, ನ. 19: ಕೂರ್ಗ್ ಸ್ಟ್ರೈಕರ್ಸ್ ವತಿಯಿಂದ ಡಿಸೆಂಬರ್ 8, 9 ಮತ್ತು 10 ರಂದು ಮ್ಯಾನ್ಸ್ ಕಾಂಪೌಂಡ್‍ನಲ್ಲಿ ಮೊದಲ ವರ್ಷದ ಹಿಂದೂ ಕಪ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಈ ಜಿಲ್ಲಾಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನ ವಾಗಿ ರೂ. 15000 ನಗದು, ಟ್ರೋಫಿ, ದ್ವಿತೀಯ ಬಹುಮಾನವಾಗಿ ರೂ. 10000 ನಗದು, ಟ್ರೋಫಿ, ಸೇರಿದಂತೆ ತೃತೀಯ ಹಾಗೂ ಚತುರ್ಥ ಬಹುಮಾನಗಳನ್ನು ನೀಡಲಾಗುತ್ತದೆ. ತಾ. 30ರೊಳಗಾಗಿ ತಂಡಗಳು ಹೆಸರನ್ನು ನೋಂದಾಯಿಸಿಕೊಳ್ಳ ಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ 9663251517 ಅಥವಾ 9740405308 ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.