ಮಡಿಕೇರಿ, ನ. 19: ಯುನೈಟೆಡ್ ಅರಬ್ ಎಮಿರೇಟ್ಸ್ (ಯು.ಎ.ಇ.) ನಲ್ಲಿ ನೆಲೆಸಿರುವ ಕೊಡವ ಜನಾಂಗದವರ ಸಂತೋಷಕೂಟ ಇತ್ತೀಚೆಗೆ ದುಬೈಯಲ್ಲಿ ಸಂಭ್ರಮದಿಂದ ನೆರವೇರಿತು. ಸುಮಾರು 250ಕ್ಕೂ ಅಧಿಕ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪುರುಷರಿಂದ ಬೊಳಕಾಟ್, ಮಹಿಳೆಯರಿಂದ ಕೊಡವ ನೃತ್ಯ, ಮತ್ತಿತರ ಸ್ಪರ್ಧೆಗಳೊಂದಿಗೆ ತಾಪಂಡ ಮಂಜು ಕುಶಾಲಪ್ಪ ಅವರು ಕೊಡವ ಹಾಡುಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಟೀಂ ಕೂರ್ಗ್ ಯು.ಎ.ಇ. ಹಾಕಿ ತಂಡ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮುಖ್ಯ ಪ್ರಾಯೋಜಕ ಕಾವೇರಿ ಗ್ರೂಪ್‍ನ ಮಾಲೀಕ ಪೊನ್ನಚೆಟ್ಟೀರ ಅರುಣ್ ಕಾರ್ಯಪ್ಪ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.