ಸೋಮವಾರಪೇಟೆ, ನ.20: ಇಲ್ಲಿನ ಪುಷ್ಪಗಿರಿ ಜೇಸೀ ಸಂಸ್ಥೆಯ ವತಿಯಿಂದ ನಡೆದ ಜೇಸೀ ಸಪ್ತಾಹದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸೋಮೇಶ್ವರ ದೇವಾಲಯದ ನಂಜಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಕಿ ಉಪಯೋಗಿಸದೇ ಅಡುಗೆ ತಯಾರಿಸುವದು ಸೇರಿದಂತೆ ವಿವಿಧ ಸೂಪರ್‍ಮಿನಿಟ್ ಸ್ಪರ್ಧೆಗಳು ನಡೆದವು.

ಜೇಸೀ ಸಂಸ್ಥೆಯ ಅಧ್ಯಕ್ಷ ಮನೋಹರ್, ಕಾರ್ಯದರ್ಶಿ ಎಂ.ಎ. ರುಬೀನಾ, ಪದಾಧಿಕಾರಿಗಳಾದ ಗಿರೀಶ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.