ಸೋಮವಾರಪೇಟೆ,ನ.20: ಮನೆಯಿಂದ ಪಟ್ಟಣಕ್ಕೆ ತೆರಳಿದ ವ್ಯಕ್ತಿಯೋರ್ವರು ನಂತರ ನಾಪತ್ತೆಯಾಗಿರುವ ಘಟನೆ ಸಮೀಪದ ಬಾಣವಾರ ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಾಣವಾರ ಗ್ರಾಮ ನಿವಾಸಿ ಬಿ.ಹೆಚ್. ಚನ್ನಯ್ಯ ಎಂಬವರು ತಾ. 19ರಂದು ರೂ. 4 ಸಾವಿರ ಹಣ ಮತ್ತು ಬ್ಯಾಂಕ್ ಪಾಸ್ ಪುಸ್ತಕವನ್ನು ತೆಗೆದುಕೊಂಡು ಮನೆಯಿಂದ ಹೋದವರು ನಂತರ ವಾಪಸ್ ಬಂದಿಲ್ಲ. ಸುಮಾರು 50 ವರ್ಷ ಪ್ರಾಯದ ಚನ್ನಯ್ಯ ಅವರ ಬಗ್ಗೆ ಮಾಹಿತಿಯಿದ್ದಲ್ಲಿ ದೂ: 08276 282040 ಸಂಖ್ಯೆಗೆ ತಿಳಿಸಬೇಕೆಂದು ಠಾಣಾಧಿಕಾರಿ ಎಂ. ಶಿವಣ್ಣ ಮನವಿ ಮಾಡಿದ್ದಾರೆ.