ಮಡಿಕೇರಿ, ನ. 20: ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ವತಿಯಿಂದ ಬೆಳಗಾಂನಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾಂಗೆ ತೆರಳಿ ಕಾಫಿ ಬೆಳೆಯುವ ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಶಾಶ್ವತ ಪರಿಹಾರ ದೊರಕಿಸಿಕೊಡುವಂತೆ ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಚಿಕ್ಕಮಗಳೂರು ಶಾಸಕರಾದ ಬಿ.ಬಿ. ನಿಂಗಯ್ಯ, ಮೋಟಮ್ಮ, ಎನ್.ಕೆ. ಪ್ರಾಣೇಶ್, ಸಿ.ಟಿ. ರವಿ, ಜೀವರಾಜ್, ಜಿ.ಹೆಚ್. ಶ್ರೀನಿವಾಸ್, ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು, ಶಾಸಕ ಹೆಚ್.ಕೆ. ಕುಮಾರಸ್ವಾಮಿ ವೈ.ಎನ್. ರುದ್ರೇಶ್ ಗೌಡ, ಕೊಡಗು ಜಿಲ್ಲೆಯ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಶಿವಮೊಗ್ಗದ ಶಾಸಕರಾದ ಕಿಮ್ಮನೆ ರತ್ನಾಕರ್ ಅವರ ನಿಯೋಗದೊಂದಿಗೆ ಭೇಟಿ ಮಾಡಿ ಸಮಸ್ಯೆಗಳ ಬಗ್ಗೆ ಮಂತ್ರಿಗಳಿಗೆ ಮನವರಿಕೆ ಮಾಡಲಾಯಿತು.
ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಸಮಸ್ಯೆಯ ಆಳವನ್ನು ಸರಕಾರಕ್ಕೆ ಮನವರಿಕೆ ಮಾಡಿ, ಒತ್ತುವರಿ ಮಾಡಿರುವ ಕಂದಾಯ ಭೂಮಿಯನ್ನು ಕೇರಳ ರಾಜ್ಯ ಸರಕಾರದ ಮಾದರಿಯಂತೆ 35 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ರೈತ ಬೆಳೆಗಾರರಿಗೆ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಲಾಯಿತು.
ಅಲ್ಲದೆ ಸಹಕಾರಿ ಸಂಸ್ಥೆಯಲ್ಲಿ ರೈತರು ಪಡೆದಿರುವ ಸಾಲದ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು, ಸಮಸ್ಯೆಯ ಆಳವನ್ನು ಸರಕಾರಕ್ಕೆ ಮನವರಿಕೆ ಮಾಡಿ, ಒತ್ತುವರಿ ಮಾಡಿರುವ ಕಂದಾಯ ಭೂಮಿಯನ್ನು ಕೇರಳ ರಾಜ್ಯ ಸರಕಾರದ ಮಾದರಿಯಂತೆ 35 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ರೈತ ಬೆಳೆಗಾರರಿಗೆ ನೀಡಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಹಕರಿಸಬೇಕೆಂದು ಮನವಿ ಮಾಡಲಾಯಿತು.
ಅಲ್ಲದೆ ಸಹಕಾರಿ ಸಂಸ್ಥೆಯಲ್ಲಿ ರೈತರು ಪಡೆದಿರುವ ಸಾಲದ ಮಾಡಲಾಯಿತು. ನಿಯೋಗದಲ್ಲಿ ಕರ್ನಾಟಕ ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಸಂಘಟನಾ ಕಾರ್ಯದರ್ಶಿ ಎನ್.ಬಿ. ಉದಯ್ಕುಮಾರ್, ಕೊಡಗಿನ ಕೆ.ಕೆ. ವಿಶ್ವನಾಥ್, ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಮಾಜಿ ಅಧ್ಯಕ್ಷ ಕೆ.ಬಿ. ಕೃಷ್ಣಪ್ಪ, ಗೌರವ ಕಾರ್ಯದರ್ಶಿ ಮುರಳೀಧರ್ ಎಸ್. ಬಕ್ಕರವಳ್ಳಿ, ಉಪಾಧ್ಯಕ್ಷ ತೋ.ಚ. ಅನಂತ ಸುಬ್ಬರಾಯ್ ಹಾಗೂ ವೈ.ಎನ್. ಕೃಷ್ಣೇಗೌಡ, ಬಿ.ಎಂ. ಪ್ರವೀಣ್, ಸುಂದರೇಶ್, ಸತೀಶ್, ರಘು ಇದ್ದರು.