ಮಡಿಕೇರಿ ನ.20 : ಸುಂಟಿಕೊಪ್ಪದ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರಿಯತ್ ಕಾಲೇಜಿನ ವತಿಯಿಂದ ತಾ. 22 ರಂದು ಮಜ್ಲಿಸುನ್ನೂರು ಹಾಗೂ ದುಹಾ ಸಮ್ಮೇಳನ ನಡೆಯಲಿದೆ ಎಂದು ಕಾಲೇಜು ಸಮಿತಿಯ ಕಾರ್ಯದರ್ಶಿ ಸಿ.ಎಂ. ಹಮೀದ್ ಮೌಲವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 6.30ಕ್ಕೆ ನಡೆಯುವ ಸಮ್ಮೇಳನವÀನ್ನು ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ವಹಿಸಲಿದ್ದಾರೆ ಎಂದರು. ಮುಖ್ಯ ಭಾಷಣವನ್ನು ವಾಗ್ಮಿ ಹಸನ್ ಸಖಾಫಿ ಪೂಕುಟೂರ್ ಮಾಡಲಿದ್ದಾರೆ. ಅತಿಥಿಗಳಾಗಿ ಎಸ್ಕೆಐಎಂಎ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಎಸ್ಎಂಎಫ್ ಜಿಲ್ಲಾ ಅಧ್ಯಕ್ಷ ಉಸ್ಮಾನ್ ಹಾಜಿ, ಅಲ್ ಅಮೀನ್ ಸಮಿತಿ ಅಧ್ಯಕ್ಷ ಎಫ್.ಎ. ಮುಹಮ್ಮದ್ ಹಾಜಿ, ಶಂಸುಲ್ ಉಲಮ ಟ್ರಸ್ಟ್ ಅಧ್ಯಕ್ಷ ಬಷೀರ್ ಹಾಜಿ, ಕಾಂಗ್ರೆಸ್ ಅಲ್ಪಸಂಖ್ಯಾತ ಕೊಡಗು ಜಿಲ್ಲಾ ಅಧ್ಯಕ್ಷ ಯಾಕೂಬ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರತಿಯೊಬ್ಬರ ಮನದಲ್ಲಿನ ಅಹಂ, ಅಹಂಕಾರ, ಕೆಡುಕಿನ ಮನೋಭಾವನೆಗಳನ್ನು ತೊಡೆಯುವ ನಿಟ್ಟಿನಲ್ಲಿ ಅಗತ್ಯ ಮಾರ್ಗದರ್ಶನ, ಧಾರ್ಮಿಕ ಚಿಂತನೆಗಳನ್ನು ಮೂಡಿಸುವ ವೇದಿಕೆಯನ್ನು ಮಜ್ಲಿಸುನ್ನೂರು ಎನ್ನಲಾಗುತ್ತದೆ. ಇದನ್ನು ಪಾಣಕ್ಕಾಡ್ ಹೈದರಲಿ ಶಿಹಾಬ್ ತಂಙಳ್ ಅವರು ಆರಂಭಿಸಿದ್ದು, ಪ್ರಸ್ತುತ ಕರ್ನಾಟಕ, ಕೇರಳ ರಾಜ್ಯ ಸೇರಿದಂತೆ ಭಾರತದಾದ್ಯಂತ 5 ಸಾವಿರ ಕೇಂದ್ರಗಳಲ್ಲಿ ಮಜ್ಲಿಸುನ್ನೂರನ್ನು ಸ್ಥಾಪಿಸಲಾಗಿದೆಯೆಂದು ತಿಳಿಸಿದರು.
ಕೊಡಗು ಜಿಲ್ಲಾ ವ್ಯಾಪ್ತಿಯ 30 ಮಹಲ್ಗಳಲ್ಲಿ ಮಜ್ಲಿಸುನ್ನೂರು ನಡೆಯುತ್ತಿದ್ದು, ತಾ. 22 ರಂದು ಸುಂಟಿಕೊಪ್ಪದಲ್ಲಿ ನಡೆಯುವ ಸಮ್ಮೇಳನದ ನೇತೃತ್ವವನ್ನು ಕರ್ನಾಟಕ ರಾಜ್ಯದ ಅಮೀರಾಗಿ ನಿಯುಕ್ತಿ ಗೊಂಡಿರುವ ಕೋಯಿಕೋಡ್ ಕಾಝಿ ಸಯ್ಯದ್ ಮುಹಮ್ಮದ್ ಜಮಲುಲೈ ತಂಙಳ್ ವಹಿಸಲಿದ್ದಾರೆ ಎಂದು ಸಿ.ಎಂ.ಹಮೀದ್ ಮೌಲವಿ ಮಾಹಿತಿ ನೀಡಿದರು.
ಸುಂಟಿಕೊಪ್ಪದ ಶರಿಯತ್ ಕಾಲೇಜಿನಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ನೀಡಲಾಗುತ್ತಿದೆ. ಪದವಿ ಪೂರ್ವ ಶಿಕ್ಷಣದಿಂದ ಎಂಎ ವರೆಗೆ ಲೌಕಿಕ ಶಿಕ್ಷಣವನ್ನು ಹಾಗೂ ಜಾಮಿಯಾ ನೂರಿಯ್ಯ ಕಾಲೆÉೀಜಿನಿಂದ ಫೈಝಿ ಪದವಿಯನ್ನು ನೀಡಲಾಗುತ್ತಿದೆ. ಇದರೊಂದಿಗೆ ಕಂಪ್ಯೂಟರ್ ಶಿಕ್ಷಣ, ಕನ್ನಡ, ಇಂಗ್ಲಿಷ್, ಉರ್ದು ಹಾಗೂ ಅರಬಿ ಭಾಷೆಗಳಲ್ಲಿ ಬರಹ ಮತ್ತು ಭಾಷಣಗಳಲ್ಲಿ ನೈಪÀÅಣ್ಯತೆ ನೀಡಲು ಪ್ರತ್ಯೇಕ ತರಬೇತಿಯನ್ನು ಕಾಲೇಜಿನಲ್ಲಿ ನೀಡಲಾಗುತ್ತಿದೆ. ವರ್ಷಂಪ್ರತಿ ಕಾಲೆÉೀಜಿನಲ್ಲಿ 35 ಮಂದಿ ಬಾಲಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೆಣ್ಣುಮಕ್ಕಳಿಗೆ ವೀರಾಜಪೇಟೆ ಬಳಿಯ ಪೆರುಂಬಾಡಿಯಲ್ಲಿ ಪ್ರತ್ಯೇಕವಾದ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಸಮಿತಿ ಅಧ್ಯಕ್ಷ ವೈ.ಎಂ. ಉಮ್ಮರ್ ಪೈಝಿ, ಉಪಾಧ್ಯಕ್ಷ ಎಫ್.ಎ. ಮುಹಮ್ಮದ್ ಹಾಜಿ, ಖಜಾಂಚಿ ಹಾರೂನ್ ಹಾಜಿ, ಕಾಲೆÉೀಜು ಆಡಳಿತ ಮಂಡಳಿ ಸದಸ್ಯರಾದ ಇಕ್ಬಾಲ್ ಮೌಲವಿ ಮತ್ತು ಹಸನ್ ಕುಂಞÂ ಹಾಜಿ ಉಪಸ್ಥಿತರಿದ್ದರು.