ನಾಪೆÉÇೀಕ್ಲು, ನ. 21: ನ. 17ರ ಶುಕ್ರವಾರ ಕೊಟ್ಟಮುಡಿ ಸಮೀಪದ ಕೇಮಾಟ್ ಬಳಿ ಖಾಸಗಿ ಬಸ್ಸಿನಲ್ಲಿ ಮನೆಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿ ದಿಲನ್ ಮೇಲೆ ಹಲ್ಲೆ ನಡೆಸಿದ ಅರೋಪಿ ವಿದ್ಯಾರ್ಥಿಗಳನ್ನು ಕೂಡಲೇ ಬಂಧಿಸಬೇಕೆಂದು ನಾಪೆÇೀಕ್ಲು ವ್ಯಾಪ್ತಿಯ ವಿವಿಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪೆÇಲೀಸರನ್ನು ಆಗ್ರಹಿಸಿದ್ದಾರೆ.

ಮಡಿಕೇರಿ ಎಫ್‍ಎಂಸಿ ಕಾಲೇಜಿನಲ್ಲಿ ಪರೀಕ್ಷೆ ಬರೆದು ನಾಪೆÇೀಕ್ಲು ಸಮೀಪದ ಬೇತು ಗ್ರಾಮದ ತಮ್ಮ ಮನೆಗೆ ಖಾಸಗಿ ಬಸ್‍ನಲ್ಲಿ ಹಿಂದಿರುಗುತ್ತಿದ್ದ ಬೊಳ್ಯಪಂಡ ದಿಲನ್ ಎಂಬ ವಿದ್ಯಾರ್ಥಿಗೆ ಮೂರ್ನಾಡು ಕಾಲೇಜಿನÀ ತನ್ನ ಸಹಪಾಟಿ ವಿದ್ಯಾರ್ಥಿಗಳಾದ ಆಸಿಮ್, ಜಲಾಲುದ್ದೀನ್, ಅಜರುದ್ದೀನ್, ಅಬ್ದುಲ್ ರಹಿಮಾನ್ ಮತ್ತು ಅವರ ಸಹಚರರು ಕೊಟ್ಟಮುಡಿ ಸಮೀಪದ ಕೇಮಾಟ್ ಎಂಬಲ್ಲಿ ಎರಡು ಕಾರಿನಲ್ಲಿ ಆಗಮಿಸಿ, ಬಸ್ಸನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಐಪಿಸಿ 1860 ರ ಪ್ರಕಾರ 143, 144, 147, 148, 341, 324, 506, 149 ನಮೂದಿಸಿ ಕೇಸು ದಾಖಲಿಸಿಕೊಳ್ಳಲಾಗಿತ್ತು.

ಹಲ್ಲೆಗೊಳಗಾದ ದಿಲನ್ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಆರೋಪಿಗಳು ನಾಪತ್ತೆಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೆÇೀಕ್ಲು ಪೆÇಲೀಸ್ ಠಾಣೆಗೆ ಭೇಟಿ ನೀಡಿದ ಸಂಘಟನೆಯ ಮುಖ್ಯಸ್ಥರು ಠಾಣಾಧಿಕಾರಿ ನಂಜುಂಡ ಸ್ವಾಮಿ

ಜಲಾಲುದ್ದೀನ್, ಅಜರುದ್ದೀನ್, ಅಬ್ದುಲ್ ರಹಿಮಾನ್ ಮತ್ತು ಅವರ ಸಹಚರರು ಕೊಟ್ಟಮುಡಿ ಸಮೀಪದ ಕೇಮಾಟ್ ಎಂಬಲ್ಲಿ ಎರಡು ಕಾರಿನಲ್ಲಿ ಆಗಮಿಸಿ, ಬಸ್ಸನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ಐಪಿಸಿ 1860 ರ ಪ್ರಕಾರ 143, 144, 147, 148, 341, 324, 506, 149 ನಮೂದಿಸಿ ಕೇಸು ದಾಖಲಿಸಿಕೊಳ್ಳಲಾಗಿತ್ತು.

ಹಲ್ಲೆಗೊಳಗಾದ ದಿಲನ್ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಆರೋಪಿಗಳು ನಾಪತ್ತೆಯಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪೆÇೀಕ್ಲು ಪೆÇಲೀಸ್ ಠಾಣೆಗೆ ಭೇಟಿ ನೀಡಿದ ಸಂಘಟನೆಯ ಮುಖ್ಯಸ್ಥರು ಠಾಣಾಧಿಕಾರಿ ನಂಜುಂಡ ಸ್ವಾಮಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಠಾಣಾಧಿಕಾರಿ ನಂಜುಂಡ ಸ್ವಾಮಿ ಮಾತನಾಡಿ, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಆರೋಪಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದರು.

ಈ ಸಂದರ್ಭ ಕುಂಡ್ಯೋಳಂಡ ಸಂಪತ್ ದೇವಯ್ಯ, ಶಿವಚಾಳಿಯಂಡ ಜಗದೀಶ್, ಕಾಳೆಯಂಡ ಸಾಬ ತಿಮ್ಮಯ್ಯ, ಅಜ್ಜೇಟಿರ ವಿಠಲ, ತಿರೋಡಿರ ರಾಜ, ಬೊಳ್ಳೇಪಂಡ ಸತೀಶ್ ಬಿದ್ದಯ್ಯ, ಅರೆಯಡ ರತ್ನ ಪೆಮ್ಮಯ್ಯ, ಬಿ.ಎಂ. ಪ್ರದೀಪ, ಕೆಟೋಳಿರ ರೆಮ್ಮಿ, ಡಾಲಿ, ಅರೆಯಡ ಸದಾ, ಮತ್ತಿತರರು ಇದ್ದರು.